ಬ್ಯಾಂಕ್ ಷೇರುಗಳಲ್ಲಿ ಹಣ ಹೂಡಿದ್ದವರ 1 ಲಕ್ಷ ಕೋಟಿ ಬಂಡವಾಳ ಭಸ್ಮ
ಭಾರತದ ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ (ಮಾರ್ಚ್ 6, 2020) ಭಾರೀ ಕುಸಿತ ಆಯಿತು ಎಂಬುದು ಸುದ್ದಿ. ಆದರೆ ಗಮನ ಸೆಳೆಯುವಂಥದ್ದು ಹಾಗೂ ಗಾಬರಿ ಆಗುವಂಥ ಸುದ್ದಿ ಏನೆಂದರೆ, 37 ಲಿಸ್ಟೆಡ್ ಬ್ಯಾಂಕ್ ಗಳಲ್ಲಿ ಹಣ ಹೂಡಿದ್ದ ಹೂಡಿಕೆದಾರರ 1 ಲಕ್ಷ ಕೋಟಿ ರುಪಾಯಿ ನಷ್ಟವಾಗಿದೆ. ಹೊಸದಾಗಿ ಬಂಡವಾಳ ಸಂಗ್ರಹಿಸಲು ವಿಫಲವಾದ ಯೆಸ್ ಬ್ಯಾಂಕ್ ಅನ್ನು ರಿಸರ್ವ್ ಬ್ಯಾಂಕ್ ವಶಕ್ಕೆ ಪಡೆದ ನಂತರದ ಬೆಳವಣಿಗೆ ಇದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 20,000 ಕೋಟಿ
ಎಚ್ ಡಿಎಫ್ ಸಿ ಬ್ಯಾಂಕ್ 12,000 ಕೋಟಿ
ಐಸಿಐಸಿಐ ಬ್ಯಾಂಕ್ 9,000 ಕೋಟಿ
ಆಕ್ಸಿಸ್ ಬ್ಯಾಂಕ್ 8,000 ಕೋಟಿ
ಇಂಡಸ್ ಇಂಡ್ ಬ್ಯಾಂಕ್ 5,000 ಕೋಟಿ
ಕೊಟಕ್ ಮಹೀಂದ್ರಾ ಬ್ಯಾಂಕ್ 5,000 ಕೋಟಿ
-ಇವು ಏಳು ಬ್ಯಾಂಕ್ ಗಳು ಅನುಭವಿಸಿದ ನಷ್ಟ. ಇನ್ನುಳಿದ 31 ಬ್ಯಾಂಕ್ ಗಳು ಸೇರಿ 25,000 ಕೋಟಿ ರುಪಾಯಿ ತನಕ ನಷ್ಟ ಅನುಭವಿಸಿವೆ.

ಸರ್ಕಾರ ಇದೀಗ ಹೊಸ ಪ್ರಸ್ತಾವ ಮುಂದಿರಿಸಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೇತೃತ್ವದಲ್ಲಿ ಯೆಸ್ ಬ್ಯಾಂಕ್ ಗೆ ಬಂಡವಾಳ ಪೂರೈಸಲು ಪ್ರಯತ್ನ ನಡೆದಿದೆ.


Click it and Unblock the Notifications