For Quick Alerts
ALLOW NOTIFICATIONS  
For Daily Alerts

ನಿಷೇಧಿತ ಚೀನಾ App, ಸಂಸ್ಥೆಗಳಿಗೆ ಸರ್ಕಾರದಿಂದ 80 ಸವಾಲು

|

ಭಾರತದ ಭದ್ರತಾ ಸುರಕ್ಷತೆ ದೃಷ್ಟಿಯಿಂದ ಗೇಮಿಂಗ್ ಆ್ಯಪ್ ಬಳಕೆಗೂ ಕಡಿವಾಣ ಹಾಕಲು ಕೇಂದ್ರ ಸರ್ಕಾರವು ತೀರ್ಮಾನಿಸಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಈಗ ನಿಷೇಧಿತ ಆಪ್ ಹೊಂದಿರುವ ಸಂಸ್ಥೆಗಳಿಗೆ ಸರ್ಕಾರದಿಂದ 80ಕ್ಕೂ ಅಧಿಕ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.

ಯಾವ ಯಾವ ಮಾಹಿತಿ ಹಂಚಿಕೊಳ್ಳಲಾಗಿದೆ, ಚೀನಾದ ಕಾನೂನು ಆಪ್ ಮಾಹಿತಿ ಹಂಚಿಕೆ ಬಗ್ಗೆ ಏನು ಹೇಳುತ್ತದೆ, ಯಾವುದಾದರೂ ರಾಜಕೀಯ ಪಕ್ಷದ ಜೊತೆ ನಂಟಿದೆಯೇ? ಪೀಪಲ್ಸ್ ಲಿಬರೇಷನ್ ಆರ್ಮಿ ಜೊತೆ ಸಂಸ್ಥೆಯ ಉದ್ಯೋಗಿ ಯಾರಾದರೂ ಸಂಪರ್ಕ ಹೊಂದಿದ್ದಾರೆಯೇ? ಹೀಗೆ ಆರ್ಥಿಕ, ತಾಂತ್ರಿಕ ವಿಷಯಗಳು ಸೇರಿದಂತೆ ಗೌಪ್ಯತೆ, ಭದ್ರತೆ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ಜಾರಿಯಲ್ಲಿದೆ

47 ಚೀನೀ ಅಪ್ಲಿಕೇಷನ್ ಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರ47 ಚೀನೀ ಅಪ್ಲಿಕೇಷನ್ ಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರ

ಚೀನಾ ದೇಶ ಮೂಲದ 59 ಅಪ್ಲಿಕೇಶನ್ ಗಳನ್ನು ದೇಶದಲ್ಲಿ ಬಳಕೆ ಮಾಡದಂತೆ ನಿಷೇಧ ವಿಧಿಸಿದ ಬೆನ್ನಲ್ಲೇ ಮತ್ತೆ 47 ಚೀನಿ ಆಪ್ ಗಳಿಗೆ ನಿಷೇಧ ಹೇರುವುದಕ್ಕೆ ಕೇಂದ್ರ ಸರ್ಕಾರವು ನಿರ್ಧರಿಸಿದೆ.

ನಿಷೇಧಿತ ಚೀನಾ App, ಸಂಸ್ಥೆಗಳಿಗೆ ಸರ್ಕಾರದಿಂದ 80 ಸವಾಲು

ಸದ್ಯ ಅಗ್ರಸ್ಥಾನದಲ್ಲಿರುವ ಚೀನಾದ ಗೇಮಿಂಗ್ ಆ್ಯಪ್ ಗಳನ್ನು ದೇಶದಲ್ಲಿ ನಿಷೇಧಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ. ಅದಕ್ಕಾಗಿ ಕೆಲವು ಅಪ್ಲಿಕೇಷನ್ ಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸುತ್ತಿದೆ.

ಚೀನಾದ 59 ಮೊಬೈಲ್ ಅಪ್ಲಿಕೇಷನ್ ನಿಷೇಧಿಸಿದ ಮೇಲೆ ಏನಾಯ್ತು?ಚೀನಾದ 59 ಮೊಬೈಲ್ ಅಪ್ಲಿಕೇಷನ್ ನಿಷೇಧಿಸಿದ ಮೇಲೆ ಏನಾಯ್ತು?

ಇತ್ತೀಚಿನ ಬೆಳವಣಿಗೆಯಂತೆ ಚೀನಾದ ಬೈದು(Baidu) ಸರ್ಚ್ ಹಾಗೂ ವೈಬೊ (Weibo) ಅಪ್ಲಿಕೇಷನ್ ಗಳನ್ನು ಭಾರತ ಸರ್ಕಾರ ನಿಷೇಧಿಸಿದೆ. ಗೂಗಲ್ ಪ್ಲೇಸ್ಟೋರ್ ಹಾಗೂ ಆಪಲ್ ಸ್ಟೋರ್ ನಿಂದ ತೆಗೆದು ಹಾಕಲು ಸೂಚಿಸಲಾಗಿದೆ. ಜೂನ್.29ರಂದು ಭಾರತೀಯ ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ 69ಎ ಅಡಿಯಲ್ಲಿ ಚೀನಾ ಅಪ್ಲಿಕೇಷನ್ ಗಳನ್ನು ನಿಷೇಧಿಸಲಾಯಿತು. ಜುಲೈ 27ರಂದು 47 ಆಪ್ ಮೇಲೆ ನಿರ್ಬಂಧ ಹೇರಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದ್ದು, ನಿರ್ಬಂಧ, ನಿಷೇಧ ಹೇರಿಕೆ ಇನ್ನೂ ಮುಂದುವರೆಯಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಟ್ಟಾರೆ, 275 ಆಪ್ ಗಳ ಮೇಲೆ ನಿಗಾ ಇರಿಸಲಾಗಿದ್ದು, ಈ ಆಪ್ ಗಳಿಂದ ದೇಶದ ಭದ್ರತೆಗೆ ಧಕ್ಕೆ ಉಂಟಾಗುತ್ತಿದೆ ಎಂಬ ವರದಿ ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುತ್ತಿದೆ.

English summary

Banned Chinese App Companies Questioned On Data Sharing, Political Links

Days after Indian govt banned Chinese apps, companies running it have been served a questionnaire with around 80 queries seeking information like sharing data under China's law and whether owners are associated with any political party.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X