ಪರಿಸರಕ್ಕೆ ಕುತ್ತು! ಬನ್ನೇರುಘಟ್ಟ ಉದ್ಯಾನದೊಳಗೆ ಹೆದ್ದಾರಿ ಹೌದು,ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ (BNP)ದ ಮೂಲಕ 6.68 ಕಿಲೋಮೀಟರ್ ಉದ್ದದ ಎತ್ತರಿಸಿದ ಹೆದ್ದಾರಿ ನಿರ್ಮಿಸಲು ತಯಾರಿ ನಡೆಸುತ್ತಿದೆ.ಈ ಹೆದ್ದಾರಿ ಹಾದಿಯು ಉದ್ಯಾನವನದ ಪರಿಸರದಿಂದ ಹಾದು ಹೋಗುವುದರಿಂದ, ವನ್ಯಜೀವಿಗಳ ಮೇಲೆ ಪರಿಣಾಮ ತಗ್ಗಿಸಲು ವಿಶೇಷ ಮಿಟಿಗೇಶನ್ ಯೋಜನೆಯೊಂದನ್ನು NHAI ಅರಣ್ಯ ಇಲಾಖೆಗೆ ಸಲ್ಲಿಸಿದೆ. ಅರಣ್ಯ ಇಲಾಖೆ ಯೋಜನೆಗೆ ಅನುಮೋದನೆ ನೀಡುವ ಸಾಧ್ಯತೆ ಇದೆ. ಅಂತಿಮ ಅನುಮೋದನೆ ಶೀಘ್ರದಲ್ಲೇ ಸಿಗಲಿದೆ.
ಈ ಹೆದ್ದಾರಿ ಯೋಜನೆಯು ಪರಿಸರ ಸಂರಕ್ಷಣೆಯೊಂದಿಗೆ ಮೂಲಭೂತ ಸೌಕರ್ಯ ಅಭಿವೃದ್ಧಿಯನ್ನು ಸಮತೋಲನಗೊಳಿಸುವಂತೆ ಅಭಿವೃದ್ದಿಪಡಿಸಲಾಗಿದೆ. ಆರು ಪಥಗಳ ಹೆದ್ದಾರಿಯನ್ನು ರಾಮನಗರ ಮತ್ತು ಪದ್ಯಮಾಧಗೊಂಡಪಲ್ಲಿ ರಸ್ತೆಗಳನ್ನು ಸಂಪರ್ಕಿಸುವ ಸ್ಯಾಟಲೈಟ್ ಟೌನ್‌ಶಿಪ್ ರಿಂಗ್ ರಸ್ತೆಯ (STRR) ಎರಡನೇ ಹಂತದ ಭಾಗವಾಗಿ ನಿರ್ಮಾಣವನ್ನು ಮಾಡಲಾಗುತ್ತದೆ.
ಈ ಹೆದ್ದಾರಿ ನಿರ್ಮಾಣದಿಂದ ಪ್ರಯಾಣದ ಸಮಯ ಕಡಿಮೆಯಾಗುವುದರ ಜೊತಗೆ ಬನ್ನೇರುಘಟ್ಟ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಉತ್ತಮ ಸಂಪರ್ಕ ಕೂಡ ಸಿಗಲಿದೆ. ಬಿಎನ್‌ಪಿ ವ್ಯಾಪ್ತಿಯಲ್ಲಿ 27.18 ಎಕರೆ ತಟ್ಟೆಕೆರೆ ಅರಣ್ಯ ಪ್ರದೇಶದ ಅಗತ್ಯತೆ ಈ ಯೋಜನೆಗೆ ಇದೆ. ಬೆಂಗಳೂರಿನಿಂದ ಹೊರ ರಾಜ್ಯಗಳಿಗೂ ಇದು ಸಂಪರ್ಕ ಕಲ್ಪಿಸುವ ವಾಹನಗಳ ದಟ್ಟಣೆಯನ್ನು ಕಡಿಮೆ ಮಾಡುವ ಗುರಿಯನ್ನು ಈ ಹೆದ್ದಾರಿ ಯೋಜನೆ ಹೊಂದಿದೆ.
ಆನೆಗಳು, ಚಿರತೆಗಳು, ಹುಲಿಗಳು ಸೇರಿದಂತೆ ಅನೇಕ ವನ್ಯಜೀವಿಗಳಿಗೆ ಬಿಎನ್‌ಪಿಯು ಆಶ್ರಯ ತಾಣವಾಗಲಿದೆ. ಈ ಎತ್ತರಿಸಿದ ಹೆದ್ದಾರಿಯು 8 ಮೀಟರ್ ಎತ್ತರದಲ್ಲಿ ಇರುತ್ತದೆ. ಉದ್ಯಾನವನದ ಕೋರ್ ಪ್ರದೇಶದ 4 ಕಿ.ಮೀ ವ್ಯಾಪ್ತಿಯಲ್ಲಿ ಹಾದುಹೋಗುತ್ತದೆ. ಇನ್ನು ಉಳಿದ ಭಾಗವು ಅಸ್ತಿತ್ವದಲ್ಲಿರುವ ರಸ್ತೆಯ ಬಫರ್ ವಲಯದ ಮೂಲಕ ಹೋಗುತ್ತೇವೆ.
ರಾಷ್ಟ್ರೀಯ ವನ್ಯಜೀವಿ ಮಂಡಳಿಯು (NBWL)ಯು ಈ ಯೋಜನೆಗಾಗಿ ನೆಲಮಟ್ಟದ ರಸ್ತೆಯನ್ನು ಕೈಬಿಡುವ ಷರತ್ತಿನೊಂದಿಗೆ ಅನುಮತಿಯನ್ನು ನೀಡಲಾಗುತ್ತದೆ.ಈ ಯೋಜನೆ ಮಾರ್ಚ್ ತಿಂಗಳಲ್ಲಿ ನೀಡಲಾದ ತಾತ್ವಿಕ ಅನುಮತಿಯು NBWL ಸ್ಥಾಯಿ ಸಮಿತಿಯು ವಿಧಿಸಿದ 13 ಷರತ್ತುಗಳು ಸೇರಿದಂತೆ ಒಟ್ಟು 28 ಷರತ್ತುಗಳನ್ನು ಸಹ ಒಲಗೊಂಡಿದೆ.
ಈ ಕುರಿತು NHAI ಪ್ರಾದೇಶಿಕ ಅಧಿಕಾರಿ ವಿಲಾಸ್ ಬ್ರಹ್ಮಂಕರ್ ಮಾತನಾಡಿ, ನಾವು ಎಲ್ಲಾ ಷರತ್ತುಗಳನ್ನು ಪಾಲನೆಯನ್ನು ಮಾಡಿದ್ದೇವೆ. ವನ್ಯಜೀವಿ ತಗ್ಗಿಸುವಿಕೆ ಯೋಜನೆ ಸೇರಿದಂತೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಕೆ ಕೂಡ ಮಾಡಿದ್ದೇವೆ.ಶಾಸನಬದ್ಧ ಶುಲ್ಕಗಳನ್ನು ಪಾವತಿಸಲು ಕೂಡ ಕಾಯುತ್ತಿದ್ದೇವೆ, ನಂತರ ಅಂತಿಮ ಅನುಮತಿ ದೊರೆಯುತ್ತದೆ ಎಂದು ಪ್ರತಿಕ್ರಿಯೆಯನ್ನು ಸಹ ನೀಡಿದ್ದಾರೆ.

ಹೆದ್ದಾರಿ ಯೋಜನೆ ಪರಿಶೀಲನೆಯ ಹಂತದಲ್ಲಿದೆ ಎಂದು ಅರಣ್ಯ ಅಧಿಕಾರಿಯೊಬ್ಬರು ಮಾಹಿತಿಯನ್ನು ತಿಳಿಸಿದ್ದಾರೆ.
ಮುಖ್ಯ ವನ್ಯಜೀವಿ ವಾರ್ಡನ್ ಅನುಮೋದನೆ ನೀಡಿದ ಬಳಿಕ ಕಾಮಗಾರಿ ಪ್ರಾರಂಭಿಸಬಹುದು. ಬಿಎನ್‌ಪಿಯ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು, ವನ್ಯಜೀವಿಗಳಿಗೆ ಆಗುವ ತೊಂದರೆಯನ್ನು ಕಡಿಮೆ ಮಾಡಲು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಮಾಹಿತಿಯನ್ನು ತಿಳಿಸಿದ್ದಾರೆ.
ಸ್ಥಳೀಯ ಜನರ ಮೇಲೆ ಪರಣಾಮ?
ಈ ಹೆದ್ದಾರಿಯ ಯೋಜನೆ ಸಂಪೂರ್ಣಗೊಂಡ ನಂತರ ಟೋಲ್ ರಸ್ತೆಯನ್ನು ಬಳಸುತ್ತಿರುವ ಸ್ಥಳೀಯ ಗ್ರಾಮಸ್ಥರಿಗೆ ತೊಂದರೆಯಾಗಬಹುದು. ಈಗಿರುವ ರಸ್ತೆಯನ್ನು ಮುಚ್ಚುವ ಷರತ್ತು ಒಪ್ಪಿಕೊಂಡು ಹೊಸ ಹೆದ್ದಾರಿಯನ್ನು ನಿರ್ಮಾಣ ಮಾಡುವುದರಿಂದ ಈ ರಸ್ತೆಯನ್ನೇ ನಂಬಿಕೊಂಡವರಿಗೆ ಸಂಕಷ್ಟವಾಹಬಹುದು.


Click it and Unblock the Notifications