ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯ ತೋಟಗಾರಿಕೆ ಇಲಾಖೆಯು 2024-25ರ ಅವಧಿಯಲ್ಲಿ ನಗರದಲ್ಲಿ ಇಪ್ಪತ್ತು ಹೊಸ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.
ಬಿಬಿಎಂಪಿ ಅಧಿಕಾರಿಗಳ ಪ್ರಕಾರ, ಬೇಲಿ ಹಾಕಿದ ಮತ್ತು ಬಳಕೆಯಾಗದೆ ಬಿದ್ದಿರುವ ಪಾಲಿಕೆ ಆಸ್ತಿಗಳಲ್ಲಿ ಉದ್ಯಾನವನಗಳು ಈ ಪಟ್ಟಿಯಲ್ಲಿ ಬರುತ್ತದೆ. ಆದರೆ ಯಾವೆಲ್ಲ ಪ್ರದೇಶದಲ್ಲಿ ಪಾರ್ಕ್‌ಗಳನ್ನು ಅಭಿವೃದ್ಧಿಸಲಾಗುತ್ತದೆ?, ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ.....

ಯಾವೆಲ್ಲ ಪ್ರದೇಶದಲ್ಲಿದೆ ಈ 20 ಪಾರ್ಕ್‌ಗಳು
ನಗರದ ಹೊರವಲಯದಲ್ಲಿ, ವಿಶೇಷವಾಗಿ ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಗೊಂಡ 110 ಹಳ್ಳಿಗಳಲ್ಲಿ ಉದ್ಯಾನವನಗಳು ಇರಲಿದೆ. ಮಹದೇವಪುರ, ಯಲಹಂಕ, ದಾಸರಹಳ್ಳಿ, ಬೊಮ್ಮನಹಳ್ಳಿ ಮತ್ತು ಆರ್‌ಆರ್‌ನಗರ ವಲಯಗಳಲ್ಲಿ ಈ 20 ಪಾರ್ಕ್‌ಗಳು ವ್ಯಾಪಿಸಿದೆ.
Indira Canteen: ಕ್ಯಾಬ್ ಚಾಲಕರಿಗೆ ಸಿಹಿಸುದ್ದಿ, ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಶೀಘ್ರ ಇಂದಿರಾ ಕ್ಯಾಂಟೀನ್ ಆರಂಭ
ಬೆಂಗಳೂರನ್ನು ಹಸಿರಾಗಿಡಲು ಬಿಬಿಎಂಪಿಯ ಪ್ರಯತ್ನದ ಭಾಗವಾಗಿ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರಾಜೆಕ್ಟ್ ವಿಭಾಗವು ಫೆನ್ಸಿಂಗ್, ಮಾರ್ಗಗಳು ಮತ್ತು ಇತರ ಕಾಮಗಾರಿಗಳನ್ನು ನೋಡಿಕೊಳ್ಳುತ್ತದೆ. ಆದರೆ ತೋಟಗಾರಿಕೆ ವಿಭಾಗವು ನಿಂಬೆಯಂತಹ ಔಷಧೀಯ ಸಸ್ಯಗಳು ಸೇರಿದಂತೆ ಸಸ್ಯಗಳನ್ನು ನಿರ್ವಹಿಸುತ್ತದೆ.
ತೋಟಗಾರಿಕೆ ಇಲಾಖೆಯ ಅಧಿಕಾರಿಯೊಬ್ಬರು ಮಾತನಾಡಿ, "ಪೌರಾಯುಕ್ತರ ಒಡೆತನದ ಹಲವು ಆಸ್ತಿಗಳು ಖಾಲಿ ಬಿದ್ದಿದ್ದು, ಅತಿಕ್ರಮಣ ತಡೆಯಲು ಬೇಲಿ ಹಾಕಲಾಗಿದೆ. ನಾವು ಬಿಬಿಎಂಪಿ ಕೇಂದ್ರ ಕಚೇರಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ," ಎಂದು ತಿಳಿಸಿದ್ದಾರೆ.
"ಮುಂಬರುವ 2024-25ರಲ್ಲಿ ಬಿಬಿಎಂಪಿ ಬಜೆಟ್‌ನಲ್ಲಿ ಹಣ ಹಂಚಿಕೆಯನ್ನು ನಿರೀಕ್ಷಿಸುತ್ತಿದ್ದೇವೆ. ನಾವು ನಿಧಿ ಹಂಚಿಕೆಯನ್ನು ಪಡೆದ ನಂತರ ನಾವು ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸುತ್ತೇವೆ," ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಸ್ತುತ 1,146 ಪಾರ್ಕ್‌ಗಳಿವೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


Click it and Unblock the Notifications