ಬೆಂಗಳೂರು, ಏಪ್ರಿಲ್ 4: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಖಾಲಿ ಇರುವ 2,500 ಮೂಲೆ ನಿವೇಶನಗಳನ್ನು ಅಡಮಾನವಿಟ್ಟು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ₹1,000 ಕೋಟಿ ಸಾಲ ಪಡೆಯಲು ಮುಂದಾಗಿದೆ ಎಂದು ಡಿಎಚ್ ವರದಿ ಮಾಡಿದೆ.
ವರದಿ ಪ್ರಕಾರ, ನಗರ ಯೋಜನೆಗೆ ಜವಾಬ್ದಾರರಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ತನ್ನ ಸ್ಥಿರಾಸ್ತಿಯನ್ನು ಅಡಮಾನವಿಟ್ಟು ಬ್ಯಾಂಕ್ ಸಾಲಗಳನ್ನು ಸಂಗ್ರಹಿಸಲು ಯೋಚಿಸುತ್ತಿರುವುದು ಇದೇ ಮೊದಲು ಎಂದು ತಿಳಿದು ಬಂದಿದೆ. ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನ ಹಂಚಿಕೆ ವಿಳಂಬದಿಂದ ನಷ್ಟ ಉಂಟಾಗಿದೆ ಎನ್ನಲಾಗುತ್ತಿದೆ.

60 ಲೇಔಟ್‌ಗಳನ್ನು ಅಭಿವೃದ್ಧಿಪಡಿಸಿರುವ ಬಿಡಿಎ ಸರ್ಕಾರದ ಅನುದಾನವನ್ನು ಅವಲಂಬಿಸಿಲ್ಲದಿದ್ದರೂ ತನ್ನ ವೆಚ್ಚವನ್ನು ಭರಿಸಲು ಹಣದ ಕೊರತೆ ಇರಲಿಲ್ಲ. ಮೂಲೆ ನಿವೇಶನಗಳ ಮಾರಾಟ, ಅಭಿವೃದ್ಧಿ ಯೋಜನೆ ಮಂಜೂರಾತಿ ಶುಲ್ಕ ಮತ್ತು ಆಸ್ತಿ ತೆರಿಗೆ ಸೇರಿದಂತೆ ವಿವಿಧ ಮೂಲಗಳಿಂದ ಬಿಡಿಎ ಆದಾಯ ಸಂಗ್ರಹಿಸುತ್ತಿದ್ದರೂ ಸಾಲ ಸಂಗ್ರಹಿಸಲು ನಿವೇಶನಗಳನ್ನು ಒತ್ತೆ ಇಟ್ಟ ಇತಿಹಾಸವೇ ಇಲ್ಲ ಎಂದು ವರದಿ ತಿಳಿಸಿದೆ.
ಸಾಲ ಪಡೆಯುವ ಆಲೋಚನೆಯನ್ನು ಬಿಡಿಎ ಆಯುಕ್ತ ಎನ್ ಜಯರಾಮ್ ಖಚಿತಪಡಿಸಿದ್ದಾರೆ. ಶಿವರಾಮ ಕಾರಂತ ಬಡಾವಣೆಗೆ 1,000 ಕೋಟಿ ಖರ್ಚು ಮಾಡಿದ್ದೇವೆ. ಯೋಜನೆ ಪೂರ್ಣಗೊಳಿಸಲು ನಮಗೆ ಇನ್ನೂ 2,500 ಕೋಟಿ ರೂ. ಬೇಕು. ನಿವೇಶನ ಹಂಚಿಕೆ ವಿಳಂಬವಾದರೆ 1,000 ಕೋಟಿ ಸಾಲ ಸಂಗ್ರಹಿಸುತ್ತೇವೆ ಎಂದು ತಿಳಿಸಿದ್ದಾರೆ.
ಶಿವರಾಮ ಕಾರಂತ್ ಲೇಔಟ್‌ಗೆ ಧನಸಹಾಯ ನೀಡಲು ಅಭಿವೃದ್ಧಿ ಹೊಂದಿದ ವಸತಿ ಎಸ್ಟೇಟ್‌ಗಳ ಮೂಲೆ ನಿವೇಶನಗಳನ್ನು ಅಡಮಾನ ಇಡಲು ಪ್ರಸ್ತಾಪಿಸಿದ ಬಿಡಿಎ ಸುಪ್ರೀಂ ಕೋರ್ಟ್‌ನಲ್ಲಿ ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ. "ನ್ಯಾಯಾಲಯದ ಪ್ರಕ್ರಿಯೆಗಳಿಂದಾಗಿ ನಾವು ಸೈಟ್ ಹಂಚಿಕೆಯನ್ನು ಪ್ರಾರಂಭಿಸಲು ಸಾಧ್ಯವಿಲ್ಲ. 3,500 ರೆಡಿ ಟು ಆಕ್ಯುಫೈ ಫ್ಲಾಟ್‌ಗಳನ್ನು ಮಾರಾಟ ಮಾಡುವಲ್ಲಿ ವಿಳಂಬವಾಗಿದೆ. ಬಿಲ್‌ಗಳನ್ನು ಪಾವತಿಸಲು ನಮಗೆ ಪ್ರತಿ ತಿಂಗಳು ಸುಮಾರು 200 ಕೋಟಿ ರೂಪಾಯಿ ಬೇಕಾಗುತ್ತದೆ. ಆದರೆ ನಮ್ಮ ಆದಾಯದ ಮೂಲಗಳಿಗೆ ಹೊಡೆತ ಬಿದ್ದಿದೆ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾದರಿ ನೀತಿ ಸಂಹಿತೆಯ ಅವಧಿಯಲ್ಲಿ ಸಾರ್ವಜನಿಕರಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಕರ್ನಾಟಕದ ಹೈಕೋರ್ಟ್ ಬಿಡಿಎಗೆ ಅನುಮತಿ ನೀಡಿದರೆ ಸಾಲವನ್ನು ಸಂಗ್ರಹಿಸುವ ಯೋಜನೆಯನ್ನು ಕೈಬಿಡಲಾಗುವುದು. ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನ ಹಂಚಿಕೆಯಿಂದ 7,000 ಕೋಟಿ ಆದಾಯ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ಹೇಳಿದ್ದಾರೆ.


Click it and Unblock the Notifications