For Quick Alerts
ALLOW NOTIFICATIONS  
For Daily Alerts

ಜಿಯೋ ಪಾರ್ಟನರ್ ಆಗಿ ಮೊಬೈಲ್ ರೀಚಾರ್ಜ್ ಮೂಲಕ ನೀವೂ ಹಣ ಗಳಿಸಬಹುದು

|

ರಿಲಯನ್ಸ್ ಜಿಯೋದಿಂದ JioPOS Lite ಎಂಬ ಕಮ್ಯೂನಿಟಿ ರೀಚಾರ್ಜ್ ಅಪ್ಲಿಕೇಷನ್ ಬಿಡುಗಡೆ ಮಾಡಲಾಗಿದೆ. ಇದು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. ಇದರ ಮೂಲಕ ಯಾರೇ ಆದರೂ ಜಿಯೋದ ಜತೆ ಪಾರ್ಟನರ್ ಆಗಿ, ಇತರ ಜಿಯೋ ಬಳಕೆದಾರರ ಪ್ರೀಪೇಯ್ಡ್ ಫೋನ್ ಗಳ ರೀಚಾರ್ಜ್ ಮಾಡಿ ಹಣ ಗಳಿಸಬಹುದು. ಇದಕ್ಕಾಗಿ ಸರಳವಾದ ನೋಂದಣಿಯೊಂದನ್ನು ಮಾಡಬೇಕು.

 

ಇದಕ್ಕಾಗಿ ಯಾವುದೇ ದಾಖಲಾತಿಗಳ ಕಾಗದ- ಪತ್ರ ನೀಡಬೇಕು ಅಂತಿಲ್ಲ. ಒಂದು ವೆರಿಫಿಕೇಷನ್ ಇರುತ್ತದೆ. ಅದನ್ನು ಪೂರ್ತಿ ಮಾಡಬೇಕು. JioPOSನಲ್ಲಿ ಜಿಯೋ ಜತೆ ಪಾರ್ಟನರ್ ಆದ ಮೇಲೆ ಬೇರೆಯವರ ಜಿಯೋ ಪ್ರೀಪೇಯ್ಡ್ ಫೋನ್ ರೀಚಾರ್ಜ್ ಮಾಡಬಹುದು. ಅದಕ್ಕೆ ಪ್ರತಿಯಾಗಿ ಕಮಿಷನ್ ಸಿಗುತ್ತದೆ.

ಎಷ್ಟು ಕಮಿಷನ್ ಸಿಗುತ್ತದೆ ಅನ್ನೋದು ತಾನೇ ನಿಮ್ಮ ಮುಂದಿನ ಪ್ರಶ್ನೆ. 4.16% ಕಮಿಷನ್ ಸಿಗುತ್ತದೆ. ಎಷ್ಟು ಕಮಿಷನ್ ಗಳಿಸಿದ್ದೀರಿ ಅಂತಲೂ ಹಾಗೂ ಕಳೆದ ಇಪ್ಪತ್ತು ದಿನದಲ್ಲಿ ಎಷ್ಟು ವ್ಯವಹಾರ ನಡೆಸಿದ್ದೀರಿ ಅಂತಲೂ ತಿಳಿದುಕೊಳ್ಳಬಹುದು. ಒಂದು ಸಲ JioPOS ಡೌನ್ ಲೋಡ್ ಮಾಡಿದ ಮೇಲೆ ಜಿಯೋ ಜತೆಗೆ ಪಾರ್ಟನರ್ ಆಗುವುದಕ್ಕೆ ನೋಂದಣಿ ಮಾಡಿಕೊಳ್ಳಬೇಕು.

ಜಿಯೋ ಪಾರ್ಟನರ್ ಆಗಿ ಮೊಬೈಲ್ ರೀಚಾರ್ಜ್ ಮೂಲಕ ನೀವೂ ಹಣ ಗಳಿಸಬಹುದು

ಅದಾದ ಮೇಲೆ 500, 1000, 2000 ಮುಖಬೆಲೆಯ ಮೊತ್ತವನ್ನು ವ್ಯಾಲೆಟ್ ಗೆ ಲೋಡ್ ಮಾಡಿಕೊಳ್ಳಬೇಕು. ಪ್ರತಿ 100 ರುಪಾಯಿ ಮೇಲೆ ಮಾಡಿದ ಖರ್ಚಿಗೆ ಕಮಿಷನ್ ಅಂತ ರು. 4.166 ಸಿಗುತ್ತದೆ. ಈ ಅಪ್ಲಿಕೇಷನ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. ಐಒಎಸ್ ನಲ್ಲಿ ಸದ್ಯಕ್ಕೆ ಸಿಗುತ್ತಿಲ್ಲ.

English summary

Become Jio Partner, Earn Money Through Mobile Recharge

Here is an opportunity earn commission by recharging Reliance Jio pre paid. Here is the details.
Story first published: Thursday, April 9, 2020, 20:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X