ಬೆಂಗಳೂರು, ಮಾರ್ಚ್ 25: ಈಗಾಗಲೇ ದೇಶಾದ್ಯಂತ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿತ್ತು, ಒಟ್ಟು 7 ಹಂತದಲ್ಲಿ ರಾಷ್ಟ್ರವ್ಯಾಪಿ ಚುನಾವಣೆ ನಡೆಯಲಿದ್ದು, ನಮ್ಮ ರಾಜ್ಯದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 26 ಹಾಗೂ ಮೇ 7 ರಂದು ಮತದಾನ ನಡೆಯಲಿದ್ದು ಈಗಾಗಲೇ ನೀತಿ ಸಂಹಿತೆಯನ್ನ ಕೂಡ ಜಾರಿಗೊಳಿಸಲಾಗಿದೆ.
ಮತದಾರರಿಗೆ ಆಮಿಷ ಒಡೋ ನಿಟ್ಟಿನಲ್ಲಿ ಹಣ ಹಂಚುವುದು, ಚುನಾವಣಾ ವೆಚ್ಚಗಳಿಗೆ ಅಕ್ರಮ ಹಣದ ವಹಿವಾಟು, ಸಾಗಾಣಿಕೆ ನಡೆಸೋದು - ಇದೆಲ್ಲದರ ಮೇಲೂ ನಿಯಂತ್ರಣ ಹೇರಲು ನೀತಿ ಸಂಹಿತೆ ಜಾರಿಯಾಗಿದ್ದು, ಈಗಾಗಲೇ ರಾಜ್ಯದ ಎಲ್ಲೆಡೆ ಚೆಕ್‌ಪೋಸ್ಟ್‌ಗಳ ನಿರ್ಮಾಣ ಮಾಡಿರುವ ಪೋಲಿಸರು ಪ್ರತಿ ವಾಗನವನ್ನೂ ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಇದೇ ರೀತಿ ನಿಮ್ಮ ಖಾತೆಯ ಮೇಲೆ ಕೂಡ ನಿಗಾ ವಹಿಸಿರ್ತಾರೆ ! ಹುಷಾರ್ !

ಹೌದು ನೀವು ಪ್ರತಿನಿತ್ಯ ಸಹಜವಾಗಿಯೇ ನಿಮ್ಮ ಹಣಕಾಸಿನ ವಹಿವಾಟುಗಳನ್ನ ನಡೆಸುತ್ತಿರುತ್ತೀರಿ, ಅದು ಆನ್‌ಲೈನ್ ಟ್ರಾನ್ಸಾಕ್ಷನ್‌ಗಳಿರಬಹುದು ಅಥವಾ ನಗದಿನ ಮೂಲಕವೇ ಇರಬಹುದು. ಆದ್ರೆ ಇದೀಗ ಸ್ವಲ್ಪ ಯೋಚಿಸಿ ವ್ಯವಹರಿಸಬೇಕಾದ ಅನಿವಾರ್ಯತೆ ಇದೆ. ಅದಕ್ಕೆ ಕಾರಣ ಚುನಾವಣಾ ನೀತಿ ಸಂಹಿತೆ. ಯಾಕಂದ್ರೆ ಕೇವಲ ದಾಖಲೆಯಿಲ್ಲದ ನಗುದು ಮಾತ್ರವಲ್ಲ, ನಿಮ್ಮ ಖಾತೆಯ ಮೂಲಕವೂ ನೀವೇನಾದ್ರೂ ಅತಿ ಹೆಚ್ಚು ಟ್ರಾನ್ಸಾಕ್ಷನ್‌ಗಳನ್ನ ಮಾಡಿದ್ರೆ ಅದಕ್ಕೂ ಉತ್ತರಿಸಬೇಕಾದೀತು ಜಾಗ್ರತೆ.
ನಿಮ್ಮ ಲಿಮಿಟ್ ಅರಿತು ವಹಿವಾಟು ನಡೆಸಿ
ಸಹಜವಾಗಿ ನಿಮ್ಮ ಖಾತೆಯ ಮತ್ತು ಸಂಭಳದ ಅಥವಾ ನಿಮ್ಮ ಒಟ್ಟಾರೆ ವಹಿವಾಟಿನ ಆಧಾರ ಮೇಲೆ, ನಿಮ್ಮ ಖಾತೆಯ ಮೂಲಕ ಮಾಡಬಹುದಾದ ದಿನನಿತ್ಯದ ಟ್ರಾನ್ಸಾಕ್ಷನ್ ಮೇಲೆ ಬ್ಯಾಂಕ್ ಒಂದು ಮಿತಿ ಹೇರಿರುತ್ತದೆ. ಉದಾಹರಣೆಗೆ ಪ್ರತಿನಿತ್ಯ ನೀವು ಗರಿಷ್ಠ ಅಂದ್ರೆ 50 ಸಾವಿರ ಹಣ ವರ್ಗಾವಣೆ ಮಾಡಬಹುದು. ಅದಕ್ಕಿಂತ ಹೆಚಿಗೆ ಸಾಧ್ಯವಿಲ್ಲ ಎಂಬಂತೆ. ಪುನಃ ನೀವು ಹಣ ಕಳುಹಿಸಬೇಕಾದ್ರೆ 24 ತಾಸು ಕಾಯಬೇಕು. ಇದೀಗ ಹಿಂದೆಂದೂ ಆಗಿರದ ದೊಡ್ಡ ದೊಡ್ಡ ಟ್ರಾನ್ಸಕ್ಷನ್‌ಗಳು ಚುನಾವಣೆ ಟೈಮಲ್ಲಿ ನಿಮ್ಮ ಖಾತೆಯ ಮೇಲೆ ಅನುಮಾನ ಹುಟ್ಟಿಸುತ್ತವೆ. ಹಾಗಾಗಿ ಅದಕ್ಕೆ ಲೆಕ್ಕ ತೋರಿಸಬೇಕಾಗಬಹುದು.
ಈ ವಿಚಾರವಾಗಿ ಈಗಾಗಲೇ ಚುನಾವಣಾ ಆಯೋಗದ ಅಧಿಕಾರಿಗಳು ಬ್ಯಾಂಕ್ ಗಳಿಗೆ ಸೂಚನೆ ಕೊಟ್ಟಿದ್ದಾರೆ. ಯಾವ ಖಾತೆಗಳಲ್ಲಿ ಅತಿ ಹೆಚ್ಚು ವಹಿವಾಟು ನಡೆಯುತ್ತದೆ, ಅಥವಾ ಇದೀಗ ಚುನಾವಣೆ ಸಂದರ್ಭದಲ್ಲಿ ಇದ್ದಕ್ಕಿದ್ದಹಾಗೆ ಯಾವೆಲ್ಲಾ ಖಾತೆಯಲ್ಲಿ ಹೆಚ್ಚಿನ ವಹಿವಾಟು ನಡೆಯುತ್ತಿದೆ ಈ ಎಲ್ಲಾ ಖಾತೆಗಳ ವಿವರವನ್ನು ನೀಡಲು ಸೂಚಿಸಲಾಗಿದೆ.
ಮುಂದುವರೆದ ಹಾಗೇ ನೀವೇನಾದ್ರೂ ನಿಮ್ಮ ಖಾರೆಯಲ್ಲಿರುವ ಹಣವನ್ನ withdraw ಮಾಡಬೇಕು ಎಂದಾದರೆ ಅದಕ್ಕೂ ಕೂಡ ಮಿತಿ ಹೇರಲಾಗಿದೆ. ಉದಾಹರಣೆಗೆ ದಿನ ಒಂದಕ್ಕೆ 50 ಸಾವಿರಕ್ಕಿಂತ ಹೆಚ್ಚಿನ ಹಣವನ್ನ ಡ್ರಾ ಮಾಡಲು ಅವಕಾಶವಿರುವುದಿಲ್ಲ ಎಂಬಂಥ ನಿಯಮಗಳು ಜಾರಿಗೆ ಬಂದಿದ್ದು, ನೀವು ದೊಡ್ಡ ಮೊತ್ತದ ವಹಿವಾಟು ಮಾಡುವ ಮುನ್ನ ಜಾಗರೂಕರಾಗಿರೋದು ಒಳ್ಳೆದು.
ನೀವೇನಾದ್ರೂ ದೊಡ್ಡ ಮೊತ್ತದ ಹಣವನ್ನ FD ಇಡಬೇಕೆಂದ್ರುಭಾವಿಸಿದ್ರೆ, ಅಥವಾ ನಿಮ್ಮ ಬಳಿ ಇರುವ ಹಣವನ್ನ ಖಾತೆಗೆ ಜಮೆ ಮಾಡಬೇಕು ಅಂದ್ರೆ , ಸದ್ಯಕ್ಕೆ ಇಂಥ ಕಾರ್ಯಕ್ರಮಗಳನ್ನ ಮುಂದೂಡಿಕೆ ಮಾಡಿಕೊಳ್ಳಿ. ಇಲ್ಲವಾದ್ರೆ ಕೆಲವೊಂದು ಕಾನೂನು ಪ್ರಸಂಗಗಳನ್ನು ಎದುರಿಸಬೇಕಾಗಬಹುದು. ಇನ್ನುಳಿದ ಹಾಗೇ ನಿಮ್ಮ ಯಾವ್ದುದಾದ್ರೂ ದೊಡ್ಡ ಕಂಪನಿ ಇದ್ದು , ಇದ್ದಕ್ಕಿದ್ದ ಹಾಗೆ ಕಳೆದ ಅಥವಾ ಈ ತಿಂಗಳು ನೀವು ಅತಿ ಹೆಚ್ಚಿನ ಲಾಭ ತೋರಿಸಿಕೊಂಡಿದ್ರೆ ಅದರ ಮೇಲೂ ಕೂಡ ಕಣ್ಣಿಡಲಾಗುತ್ತೆ. ಸೋ ಯಾವುದೇ ಹಣಕಾಸಿನ ವಹಿವಾಟುಗಳಿದ್ರು ನೀತಿ ಸಂಹಿತೆಯ ನಿಯಮಗಳು ಏನು ಅನ್ನೋದನ್ನ ಅರಿತು ನಂತರ ಮುಂದುವರೆದರೆ ಯಾವ ತೊಡಕು ಇರೋದಿಲ್ಲ.


Click it and Unblock the Notifications