ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಸ್ಥಳದ ನಿಗದಿ ಕೊನೆಗೂ ಮೋದಿ ಅಂಗಳ ತಲುಪಿದೆ. ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Bengaluru Second International Airport) ನಿರ್ಮಾಣದ ಸ್ಥಳ ಗುರುತಿಸುವಿಕೆಗೆ ಕೆಲಸವನ್ನು ರಾಜ್ಯ ಸರ್ಕಾರ ಇದೀಗ ಫೈನಲ್ ಮಾಡಿದೆ.
ಹೌದು, ಬೆಂಗಳೂರಿನ ಎರಡನೇ ವಿ ಮಾನ (Second Airport)ನಿಲ್ದಾಣಕ್ಕೆ ರಾಜ್ಯ ಸರ್ಕಾರ ಮೂರು ಸಂಭಾವ್ಯ ಸ್ಥಳಗಳನ್ನು ಗುರುತು ಮಾಡಿ, ಅನುಮೋದನೆಗಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ ಎಂದು ಮೂಲಸೌಕರ್ಯ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.ಹಾಗಿದ್ರೆ ಡಿ.ಕೆ ಶಿವಕುಮಾರ್ ತವರು ಕ್ಷೇತ್ರ ಕನಕಪುರ ಅಥವಾ ಕುಣಿಗಲ್- ನೆಲಮಂಗಲದಲ್ಲಿ ವಿಮಾನ ನಿಲ್ದಾಣವಾಗುತ್ತಾ..? ಎಂಬುವುದು ಕುತೂಹಲಕರವಾದ ಸಂಗತಿ.

ಪ್ರಸ್ತಾವಿತ ಸ್ಥಳಗಳಲ್ಲಿ ಹಾರೋಹಳ್ಳಿ ಬಳಿಯ ಕನಕಪುರ ರಸ್ತೆಯಲ್ಲಿರುವ ಎರಡು ಸ್ಥಳಗಳು ಮತ್ತು ನೆಲಮಂಗಲದ ಕುಣಿಗಲ್ ರಸ್ತೆಯಲ್ಲಿರುವ ಒಂದು ಸ್ಥಳ ಸೇರಿವೆ ಎಂದು ಈ ಕುರಿತು ಮಾಹಿತಿಯನ್ನು ಎಕ್ಸ್ ಖಾತೆಯಲ್ಲಿ ಮೂಲಸೌಕರ್ಯ ಸಚಿವ ಎಂಬಿ ಪಾಟೀಲ್ ಹಂಚಿಕೊಂಡರು. ಇದು ಭವಿಷ್ಯಕ್ಕೆ ಸಿದ್ಧವಾದ ಮೂಲಸೌಕರ್ಯದತ್ತ ಒಂದು ದಿಟ್ಟ ಹೆಜ್ಜೆ ಎಂದು ಕರೆದರು ಮತ್ತು ಜಾಗತಿಕ ಮಟ್ಟದಲ್ಲಿ ಕರ್ನಾಟಕದ ಸಂಪರ್ಕವನ್ನು ಹೆಚ್ಚಿಸುವ ಮಹತ್ವವನ್ನು ಎರಡನೇ ವಿಮಾನ ನಿಲ್ದಾಣ ಮಾಡುತ್ತದೆ ಎಂದು ಹೇಳಿದ್ದಾರೆ.
ಕೇಂದ್ರಕ್ಕೆ ಮೂರು ಸ್ಥಳಗಳ ಪ್ರಸ್ತಾವನೆ
ಮೂಲಸೌಕರ್ಯದತ್ತ ಒಂದು ದಿಟ್ಟ ಹೆಜ್ಜೆ ನಾವು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ನಾವು ಮೂರು ಸಂಭಾವ್ಯ ಸ್ಥಳಗಳನ್ನು ಗುರುತಿಸಿದ್ದೇವೆ. ಆ ಸ್ಥಳಗಳು ಎರಡು ಹಾರೋಹಳ್ಳಿ ಬಳಿಯ ಕನಕಪುರ ರಸ್ತೆಯಲ್ಲಿ ಮತ್ತು ಒಂದು ನೆಲಮಂಗಲದ ಕುಣಿಗಲ್ ರಸ್ತೆಯಲ್ಲಿ ಪ್ರಸ್ತಾವನೆಯನ್ನು ಅನುಮೋದನೆಗಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಕಳುಹಿಸಲಾಗಿದೆ .
ಕೇಂದ್ರದ ವಿಮಾನಯಾನ ಪ್ರಾಧಿಕಾರವು ಸ್ಥಳ ವರದಿಗಾಗಿ ತಂಡವನ್ನುಆಯ್ಕೆಯಾದ ಸ್ಥಳಗಳಿಗೆ ಕಳುಹಿಸುತ್ತಾರೆ ನಂತರ ಈ ತಂಡವು ಸ್ಥಳ ಪರಿಶೀಲನೆ ನಡೆಸಿ ವರದಿ ಮಾಡಿ ಕೇಂದ್ರಕ್ಕೆ ತಲುಪಿಸುತ್ತಾದೆ ನಂತರ ವರದಿಯ ಶಿಫಾರಸ್ಸುಗಳ ಆಧಾರದ ಮೇಲೆ ಅಲ್ಲಿನ ಸ್ಥಳವನ್ನು ಅಂತಿಮಗೊಳಿಸಲಾಗುತ್ತದೆ.
ಯಾವುದೇ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಅಂದ್ರೆ ಮೊದಲು ವಿಮಾನ ನಿಲ್ದಾಣಕ್ಕೆ ಸೂಕ್ತ ಪ್ರದೇಶವಿರಬೇಕು. ವಿಮಾನ ನಿಲ್ದಾಣದಲ್ಲಿ ವಿಮಾನಗಳು ಹಾರುವ ಮುನ್ನ ಮೇಲೇರಲು ಹಾಗು ಹಾರಾಟದ ನಂತರ ಕೆಳಗಿಳಿಯುವ ಸ್ಥಳ ಅವಕಾಶವಿರಲೇ ಬೇಕು.ವಿಮಾನ ನಿಲ್ದಾಣ ಮಾಡಲು ಬೆಟ್ಟಗಳು ಹತ್ತಿರದಲ್ಲಿ ಇರಬಾರದು. ಇದರ ಜೊತೆಗೆ ಇನ್ನೂ ಮುಂತಾದ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿದ್ದರೆ ಮಾತ್ರ ಅಲ್ಲಿ ವಿಮಾನ ನಿಲ್ದಾಣವನ್ನು ಮಾಡಬಹುದು.
2ನೇ ವಿಮಾಣ ನಿಲ್ದಾಣ ನಿರ್ಮಾಣಕ್ಕೆ ಎಷ್ಟು ವರ್ಷಗಳು ಬೇಕು..?
2ನೇ ವಿಮಾಣ ನಿಲ್ದಾಣವನ್ನು ನಿರ್ಮಾಣ ಮಾಡಲು ಸುಮಾರು 7 ರಿಂದ 8 ವರ್ಷಗಳು ಬೇಕಾಗಬಹುದು. ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 2033 ರವರೆಗೆ 150 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ವಿಮಾನ ನಿಲ್ದಾಣ ನಿರ್ಮಾಣವಾಗಬಾರದು ಎಂಬ ವಿಶೇಷ ಷರತ್ತನ್ನು ಹೊಂದಿದೆ. 2030 ರ ವೇಳೆಗೆ 100 ಮಿಲಿಯನ್ ಪ್ರಯಾಣಿಕರ ಸಾಮರ್ಥ್ಯವನ್ನು ತಲುಪುವ ನಿರೀಕ್ಷೆಯಿದೆ ಎಂದು ಹೇಳಿದೆ. ಈ ಮುನ್ಸೂಚನೆಯನ್ನು ಗಮನಿಸಿದರೆ, ಎರಡನೇ ವಿಮಾನ ನಿಲ್ದಾಣವನ್ನು ಮುಂಚಿತವಾಗಿ ಯೋಜಿಸುವ ತುರ್ತು ಅಗತ್ಯದ ಬಗ್ಗೆ ಸಚಿವ ಎಂ.ಬಿ ಪಾಟೀಲ್ ಹೇಳಿದ್ದರೆ. ಈ ಯೋಜನೆ ಕಾರ್ಯರೂಪಕ್ಕೆ ಬರಲು ಏಳರಿಂದ ಎಂಟು ವರ್ಷಗಳು ತೆಗೆದುಕೊಳ್ಳಬಹುದು ಎಂದು ಅಂದಾಜಿಸಿದ್ದಾರೆ.
2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಮ್ಮ ಊರಿಗೆ ವಿಮಾನ ನಿಲ್ದಾಣ ಬರಬೇಕೆಂದು ಇಬ್ಬರು ಸಚಿವರ ನಡುವೆ ಹಗ್ಗಾ-ಜಗ್ಗಾಟ ನಡೆಯುತ್ತಿದೆ.ಬೆಂಗಳೂರಿಗೆ ಸಮೀಪವಿರುವ ತುಮಕೂರಿಗೆ ವಿಮಾನ ನಿಲ್ದಾಣ (Airport) ಬರಬೇಕು ಎಂದು ಗೃಹ ಸಚಿವ ಪರಮೇಶ್ವರ್ ಪಟ್ಟು ಹಿಡಿದ್ದಾರೆ ಮತ್ತೊಂದು ಕಡೆ ಕನಕಪುರದಲ್ಲಿ ವಿಮಾನ ನಿಲ್ದಾಣವಾಗಬೇಕು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ ಆದರೆ ಎಲ್ಲಿ ವಿಮಾನ ನಿಲ್ದಾಣವಾಗುತ್ತದೆ ಎಂಬುದು ಮಾತ್ರ ಇದೀಗ ಮೋದಿಯ ಕೈಯಲ್ಲಿ ಇದೆ.


Click it and Unblock the Notifications