ಕರ್ನಾಟಕದ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕರ್ನಾಟಕ ರೈತ ಸಂಘ ನಾಯಕರು ಕಾವೇರಿ ನೀರಿನ ವಿವಾದ ವಿಚಾರವಾಗಿ ಸೆಪ್ಟೆಂಬರ್ 26, ಮಂಗಳವಾರ ಬೆಂಗಳೂರು ಬಂದ್‌ಗೆ ಕರೆ ನೀಡಿದ್ದಾರೆ. ಕಾವೇರಿ ಜಲ ವಿವಾದವು ರಾಜಿಕೀಯವನ್ನು ಮೀರಿದೆ. ಇದರಲ್ಲಿ ಕನ್ನಡಿಗರ ಏಕತೆ ಮುಖ್ಯ. ಇದು ಪ್ರತಿಯೊಬ್ಬ ಕನ್ನಡಿಗರ ಮೇಲೆ ಪ್ರಭಾವ ಬೀರುವ ಸಾಮಾಜಿಕ ಮತ್ತು ಆರ್ಥಿಕ ವಿಷಯ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ಜಲ ವಿವಾದ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಉಭಯ ರಾಜ್ಯಗಳು ಕಾವೇರಿ ನದಿ ನೀರಿನ ಮೇಲೆ ನಮ್ಮ ರಾಜ್ಯದ ಹಕ್ಕು ಇರುವುದು ಎಂದು ವಾದ ಮಾಡುತ್ತಾ ಬಂದಿದೆ. ಉಭಯ ರಾಜ್ಯಗಳ ನಡುವೆ ನೀರು ಹಂಚಿಕೆ ಬಗ್ಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಆದೇಶ ನೀಡಿದೆ. ತಮಿಳುನಾಡಿಗೆ ಪ್ರತಿ ದಿನ ಐದು ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸುಪ್ರೀಂ ಆದೇಶಿಸಿದೆ.

ಬಂದ್ ವೇಳೆ ಯಾವ ಸೇವೆ ಲಭ್ಯವಿರದು?
ಅಂಗಡಿ ಮುಂಗಟ್ಟು: ಬೆಂಗಳೂರು ಬಂದ್‌ನ ಪ್ರಭಾವ ಮುಖ್ಯವಾಗಿ ಅಂಗಡಿ ಮುಂಗಟ್ಟುಗಳ ಮೇಲೆ ಬೀರುವ ಸಾಧ್ಯತೆಯಿದೆ. ವ್ಯಾಪಾರಗಳು, ಅದರಲ್ಲೂ ಮುಖ್ಯವಾಗಿ ಸಣ್ಣ ಮತ್ತು ಸ್ಥಳೀಯ ಸಂಸ್ಥೆಗಳು ಬಂದ್‌ನಿಂದಾಗಿ ಮುಚ್ಚಬಹುದು.
ಸಾರಿಗೆ ವ್ಯತ್ಯಯ: ಬಂದ್‌ನಿಂದ ಸಾರ್ವಜನಿಕ ಸಾರಿಗೆಯಲ್ಲಿ ಅಡಚಣೆ ಉಂಟಾಗಬಹುದು. ಬಸ್ ಸೇವೆಗಳು ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮೇಲೆ ಪ್ರಭಾವ ಉಂಟಾಗಬಹುದು.
ಶಿಕ್ಷಣ ಸಂಸ್ಥೆ, ಬ್ಯಾಂಕ್, ಕಚೇರಿ: ಬಂದ್ ದಿನ ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚುವ ನಿರೀಕ್ಷೆಯಿದೆ. ಬ್ಯಾಂಕ್‌ಗಳು ಮತ್ತು ಕಾರ್ಪೊರೇಟ್ ಕಚೇರಿಗಳ ಸೇವೆಯಲ್ಲಿಯೂ ವ್ಯತ್ಯಯ ಉಂಟಾಗಬಹುದು.
ರೆಸ್ಟೋರೆಂಟ್‌ಗಳು ಮತ್ತು ಬೇಕರಿಗಳು: ರೆಸ್ಟೋರೆಂಟ್‌ಗಳು ಮತ್ತು ಹೊಟೇಲ್, ಬೇಕರಿಗಳು ಮುಚ್ಚಬಹುದು ಅಥವಾ ಸೇವೆಯಲ್ಲಿ ವ್ಯತ್ಯಯವಾಗಬಹುದು.
ಏನೆಲ್ಲ ಸೇವೆ ಲಭ್ಯ?
ಆಸ್ಪತ್ರೆಗಳು ಮತ್ತು ವೈದ್ಯಕೀಯ ಸೇವೆಗಳು: ಅಗತ್ಯ ಸೇವೆಗಳು, ಅದರಲ್ಲೂ ಮುಖ್ಯವಾಗಿ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆಗಳು, ಸಾರ್ವಜನಿಕರ ಆರೋಗ್ಯ ಕೇಂದ್ರಗಳು ತೆರೆದಿರುವ ಸಾಧ್ಯತೆಯಿದೆ.
ತುರ್ತು ಸೇವೆಗಳು: ಯಾವುದೇ ತುರ್ತು ಸಂದರ್ಭಗಳಲ್ಲಿ ಸಹಾಯ ಮಾಡುವ ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತದೆ.
ಸೂಪರ್‌ಮಾರ್ಕೆಟ್, ದಿನಸಿ ಅಂಗಡಿ: ದೊಡ್ಡ ಸೂಪರ್‌ಮಾರ್ಕೆಟ್‌ಗಳು ಮತ್ತು ದಿನಸಿ ಅಂಗಡಿಗಳು ಬಂದ್ ದಿನ ತೆರೆದಿರುವ ಸಾಧ್ಯತೆಯಿದೆ. ಆದರೂ ಸ್ಥಳೀಯವಾಗಿ ಬಂದ್‌ನ ಬಿಸಿ ಹೇಗಿದೆ ಎಂಬುವುದರ ಮೇಲೆ ಇದು ಅವಲಂಬಿತ.
ಸರ್ಕಾರಿ ಕಚೇರಿಗಳು: ಕೆಲವು ಸರ್ಕಾರಿ ಕಚೇರಿಗಳ ಮೇಲೆ ಬಂದ್ ಪರಿಣಾಮ ಬೀರಬಹುದು. ಆದರೆ ಪೊಲೀಸ್ ಇಲಾಖೆಯಂತಹ ಅಗತ್ಯ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.
ಬೆಂಗಳೂರಿಗರೂ ಬಂದ್ ದಿನ ಯಾವುದೇ ಬ್ಯಾಂಕ್ ಅಥವಾ ಇತರೆ ಕಚೇರಿಗಳಲ್ಲಿ ಕೆಲಸವಿದ್ದರೆ, ಅದನ್ನು ಶೀಘ್ರವೇ ಮಾಡಿಬಿಡುವುದು ಉತ್ತಮ. ಹಾಗೆಯೇ ಬಂದ್ ಬಗ್ಗೆ ನಿರಂತರ ಅಪ್‌ಡೇಟ್‌ಗಳನ್ನು ಪರಿಶೀಲನೆ ಮಾಡುತ್ತಿರಿ.


Click it and Unblock the Notifications