Toll Fee Hike: ವಾಹನ ಸವಾರರೇ ಗಮನಿಸಿ.. ನೀವು ಬೆಂಗಳೂರಿನ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಎಲೆಕ್ಟ್ರಾನಿಕ್ಸ್ ಸಿಟಿಗೆ ಮತ್ತು ಕರ್ನಾಟಕ,ತಮಿಳುನಾಡು ಗಡಿಯ ಬಳಿಯ ಅತ್ತಿಬೆಲೆ ಕಡೆಗೆ ಪ್ರತಿನಿತ್ಯ ಚಲಿಸುತ್ತಿದ್ದರೆ ಈ ಸುದ್ದಿ ನಿಮಗಾಗಿ ಹೌದು, ತಿಂಗಳ ಮೊದಲ ದಿನ ಬಂತೆಂದರೆ ಸಾಕು ಒಂದೆಲ್ಲಾ ಒಂದು ಬದಲಾಣೆಗಳು ಆಗುತ್ತೇವೆ ಆಗಿಯೇ ಜುಲೈ ತಿಂಗಳಿಂದ ಹಲವಾರು ಬದಲಾವಣೆಗಳು ಜಾರಿಗೆ ಬರುತ್ತೇವೆ ಅದರಲ್ಲಿ ಪ್ರಮುಖವಾಗಿ ಟೋಲ್ ಶುಲ್ಕ ಹೆಚ್ಚಳ ಕೂಡ ಒಂದು.ಹಾಗಿದ್ದರೆ ಯಾವ ಟೋಲ್ ಶುಲ್ಕ ಹೆಚ್ಚಳವಾಗಿದೆ..? ಯಾವ ಮಾರ್ಗದ ಪ್ರಯಾಣಿಕರ ಟೋಲ್ ಶುಲ್ಕ ಕಟ್ಟಬೇಕಾಗುತ್ತದೆ ಎಂನ ಹೆಚ್ಚಿನ ವಿವರ ಇಲ್ಲಿದೆ ನೋಡಿ
ವಾಹನ ಸವಾರರು ಜುಲೈ 1 ರಿಂದ ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಟೋಲ್‌ವೇ ಶುಲ್ಕ ಹೆಚ್ಚಾಗಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಎಲೆಕ್ಟ್ರಾನಿಕ್ಸ್ ಸಿಟಿಗೆ ಮತ್ತು ಕರ್ನಾಟಕ, ತಮಿಳುನಾಡು ಗಡಿಯ ಬಳಿಯ ಅತ್ತಿಬೆಲೆ ಕಡೆಯ ಮಾರ್ಗದಲ್ಲಿ ಚಲಿಸುವ ಪ್ರಯಾಣಿಕರು ಎಲಿವೇಟೆಡ್ ಹೆಚ್ಚಿನ ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಕುರಿತ ಪರಿಷ್ಕೃತ ದರಗಳು ಮಾರ್ಚ್ 31ರ ಸಗಟು ಬೆಲೆ ಸೂಚ್ಯಂಕ (WPI) ಆಧರಿಸಿ ದರ ಏರಿಕೆ ಮಾಡಲಾಗಿದೆ ಎಂದು ಮೂಲಗಳು ಮಾಹಿತಿಯನ್ನು ತಿಳಿಸಿವೆ.

ಟೋಲ್ ಶುಲ್ಕ ಎಷ್ಟು ಹೆಚ್ಚಳವಾಗಿದೆ..?
ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ ಹೊಸ ಟೋಲ್ ರಚನೆಯಡಿಯಲ್ಲಿ, ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳಿಗೆ ಏಕಮುಖ ಪ್ರಯಾಣಕ್ಕೆ 65 ರೂಪಾಯಿಗಳು ಇದೆ. ವಾಪಸ್ ಹಿಂತಿರುಗಿ ಬರಲು ಅದೇ ದಿನಕ್ಕೆ 95 ರೂ. ಮತ್ತು ಮಾಸಿಕ ಪಾಸ್‌ಗೆ 1,885 ಪಾವತಿಸಬೇಕಾಗುತ್ತದೆ ಎಂದು ವರದಿಗಳಲ್ಲಿ ಮಾಹಿತಿ ತಿಳಿದು ಬಂದಿದೆ. ಇನ್ನೂ ಕೆಲವು ಪ್ರದೇಶಗಳಲ್ಲಿ ಮಾತ್ರ ಅನುಮತಿಸಲಾದ ದ್ವಿಚಕ್ರ ವಾಹನಗಳಿಗೆ ಒಂದೇ ಟ್ರಿಪ್‌ಗೆ 25 ರೂವರೆಗೂ ಶುಲ್ಕ ವಿಧಿಸಲಾಗುತ್ತದೆ. ಬಸ್‌ಗಳು ಮತ್ತು ಟ್ರಕ್‌ಗಳಿಗೆ ಶುಲ್ಕ ಭಾರೀ ಹೆಚ್ಚಳವಾಗಿದೆ. ಒಂದೇ ಪ್ರಯಾಣಕ್ಕೆ 175 ಮತ್ತು ಮಾಸಿಕ ಪಾಸ್‌ಗೆ 5,275 ಶುಲ್ಕ ವಿಧಿಸಲಾಗುತ್ತದೆ. ಮಲ್ಟಿ-ಆಕ್ಸಲ್ ವಾಹನಗಳು (MAV ಗಳು) ಪ್ರತಿ ಟ್ರಿಪ್‌ಗೆ 350 ಮತ್ತು ತಿಂಗಳಿಗೆ 10,550 ರೂ.ಗಳನ್ನು ಪಾವತಿಸಬೇಕಾಗುತ್ತದೆ.
32.7 ಕಿ.ಮೀ ದೂರದಲ್ಲಿರುವ ಅತ್ತಿಬೆಲೆ ಟೋಲ್ ಪ್ಲಾಜಾದಲ್ಲಿ, ನಾಲ್ಕು ಚಕ್ರದ ವಾಹನಗಳು ಮತ್ತು ದೊಡ್ಡ ವಾಹನಗಳಿಗೆ ಮಾತ್ರ ಶುಲ್ಕಗಳನ್ನು ವಿಧಿಸಲಾಗುತ್ತದೆ.ಕಾರುಗಳಿಗೆ ಪ್ರತಿ ಟ್ರಿಪ್‌ಗೆ 40 ರೂ ಮತ್ತು ತಿಂಗಳಿಗೆ 1,130 ರೂ ಇರುತ್ತದೆ. MAV ಗಳು ಪ್ರತಿ ಟ್ರಿಪ್‌ಗೆ 265 ಮತ್ತು ತಿಂಗಳ ಪಾಸ್‌ಗೆ 7,915 ರೂ ಪಾವತಿಸಬೇಕಾಗುತ್ತದೆ. ಇನ್ನೂಈ ಟೋಲ್ ಪಾಯಿಂಟ್‌ನಲ್ಲಿ ದ್ವಿಚಕ್ರ ವಾಹನಗಳಿಗೆ ವಿನಾಯಿತಿಯನ್ನು ಕೂಡ ಮುಂದುವರೆಸಲಾಗುತ್ತದೆ.
ಒಟ್ಟಾರೆ ಈ ಪರಿಷ್ಕೃತ ಟೋಲ್‌ಗಳನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಡಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ 44 ರ ಈ ವಿಭಾಗದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳುವ ಸಂಸ್ಥೆಯಾಗಿ ಬೆಂಗಳೂರು ಎಲಿವೇಟೆಡ್ ಟೋಲ್‌ವೇ ಪ್ರೈವೇಟ್ ಲಿಮಿಟೆಡ್ (BETPL) ಬಿಡುಗಡೆ ಮಾಡಿದೆ ಎಂದು ಮೂಲಗಳು ಮಾಹಿತಿಯನ್ನು ತಿಳಿಸಿವೆ.
ಈಗಾಗಲೇ ಬೆಳೆ ಏರಿಕೆಯಿಂದಾಗಿ ಬೇಸತ್ತು ಹೋಗಿರುವ ಸಾರ್ವಜನಿಕರು ಈ ಟೋಲ್ ದರ ಹೆಚ್ಚಳದ ವಿರುದ್ಧ ವಾಹನ ಸವಾರರು ಬೇಸರವನ್ನು ಕೂಡ ವ್ಯಕ್ತಪಡಿಸಿದ್ದಾರೆ. ಈ ಟೋಲ್ ಶುಲ್ಕದ ಹೆಚ್ಚಳ ಪ್ರತಿದಿನ ಸಂಚಾರ ಮಾಡುವವ ಪ್ರಯಾಣಿಕರ ಮೇಲೆ ನೇರವಾಗಿ ಪರಿಣಾಮವನ್ನು ಬೀರುವ ಜೊತೆಗೆ ಆರ್ಥಿಕ ಪರಿಸ್ಥಿತಿಗಳ ಮೇಲೂ ಕೂಡ ಪ್ರಭಾವನ್ನು ಬೀರುತ್ತದೆ. ಟೋಲ್ ಶುಲ್ಕ ಹೆಚ್ಚಳದಿಂದ ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ.


Click it and Unblock the Notifications