ಧಾರಾಕಾರ ಮಳೆಯಿಂದಾಗಿ ಬೆಂಗಳೂರು ನಗರದ ಹಲವು ಭಾಗಗಳು ಜಲಾವೃತಗೊಂಡಿವೆ. ಸಿಲಿಕಾನ್ ಸಿಟಿ ಭಾಗದಲ್ಲಿ ರಸ್ತೆಗಳು ಜಲಾವೃತವಾಗಿದೆ. ಪ್ರವಾಹಕ್ಕೆ ಒಳಗಾದ ಪ್ರದೇಶದಲ್ಲಿ ಸಿಲುಕಿದ ಜನರನ್ನು ಸ್ಥಳಾಂತರ ಮಾಡಲು ಟ್ರಾಕ್ಟರ್ ಅನ್ನು ಬಳಕೆ ಮಾಡಲಾಗುತ್ತಿದೆ. ಟ್ರಾಕ್ಟರ್ ಮೂಲಕ ಜನರ ಸ್ಥಳಾಂತರ ಕಾರ್ಯ ಮಾಡಲಾಗುತ್ತಿದೆ. ಈ ನಡುವೆ ಅನಾಕಾಡೆಮಿ ಸಿಇಒ ಗೌರವ್ ಮುಂಜಾಲ್ ಕುಟುಂಬವನ್ನು ಕೂಡಾ ಟ್ರಾಕ್ಟರ್ ಮೂಲಕ ಸ್ಥಳಾಂತರ ಮಾಡಲಾಗಿದ್ದು ಈ ವಿಡಿಯೋವನ್ನು ಗೌರವ್ ಮುಂಜಾಲ್ ಹಂಚಿಕೊಂಡಿದ್ದಾರೆ.
ಇನ್ನು ನೀರು ತುಂಬಿರುವ ಕಾರಣದಿಂದಾಗಿ ಹಲವಾರು ಐಟಿ ಉದ್ಯೋಗಿಗಳು ಟ್ರ್ಯಾಕ್ಟರ್‌ಗಳನ್ನು ಬಳಸಿ ಕೆಲಸಕ್ಕೆ ತೆರಳಿದ್ದಾರೆ. ಸೆಪ್ಟೆಂಬರ್ 5 ರಂದು, ಐಟಿ ಉದ್ಯೋಗಿಗಳು ಹೆಚ್ಚಾಗಿ ಟ್ರ್ಯಾಕ್ಟರ್ ಮೂಲಕ ಪ್ರಯಾಣಿಸಿದ್ದಾರೆ.
"ನಾವು ನಮ್ಮ ಕಚೇರಿಗೆ ಅಥವಾ ಉದ್ಯೋಗಕ್ಕೆ ಹಲವಾರು ದಿನಗಳ ಕಾಲ ರಜೆಯನ್ನು ಹಾಕಲು ಸಾಧ್ಯವಿಲ್ಲ. ನಾವು ತುಂಬಾ ದಿನಗಳ ಕಾಲ ರಜೆ ಮಾಡುವುದು ನಮ್ಮ ಕೆಲಸದ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ. ನಾವು ಅದಕ್ಕಾಗಿ 50 ರೂಪಾಯಿ ಪಡೆದು ನಮ್ಮನ್ನು ಆಫೀಸ್‌ಗೆ ಕರೆದೊಯ್ಯುವ ಟ್ರ್ಯಾಕ್ಟರ್‌ಗಳನ್ನು ಕಾಯುತ್ತಿದ್ದೇವೆ," ಎಂದು ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ಎಎನ್‌ಐಗೆ ತಿಳಿಸಿದ್ದಾರೆ.

ಅನಾಕಾಡೆಮಿ ಸಿಇಒ ಗೌರವ್ ಮುಂಜಾಲ್ ಟ್ವೀಟ್; ಈ ನಡುವೆ ಅನಾಕಾಡೆಮಿ ಸಿಇಒ ಗೌರವ್ ಮುಂಜಾಲ್ ತಮ್ಮ ಕುಟುಂಬವನ್ನು ಟ್ರ್ಯಾಕ್ಟರ್ ಮೂಲಕ ಸ್ಥಳಾಂತರ ಮಾಡುವ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ತಮ್ಮ ನಿವಾಸ ಇರುವ ಪ್ರದೇಶವು ನೀರಿನಲ್ಲಿ ಮುಳುಗಿರುವ ಕಾರಣದಿಂದಾಗಿ ಗೌರವ್ ಮುಂಜಾಲ್‌ರ ಕುಟುಂಬ ಮತ್ತು ಸಾಕುಪ್ರಾಣಿಗಳನ್ನು ಟ್ರ್ಯಾಕ್ಟರ್‌ನಲ್ಲಿ ಸ್ಥಳಾಂತರಿಸುವ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ಹೆಚ್ಚಿನ ಕಾಳಜಿ ವಹಿಸಲು ಮತ್ತು ಯಾವುದೇ ಸಹಾಯದ ಅಗತ್ಯವಿದ್ದಲ್ಲಿ ತಮ್ಮನ್ನು ಸಂಪರ್ಕ ಮಾಡುವಂತೆಯೂ ಗೌರವ್ ಮುಂಜಾಲ್ ತಿಳಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡ ಗೌರವ್ ಮುಂಜಾಲ್, "ಕುಟುಂಬ ಮತ್ತು ನನ್ನ ಸಾಕುಪ್ರಾಣಿ ಆಲ್ಬಸ್ ಅನ್ನು ಈಗ ನೀರಿನಿಂದ ಆವರಿಸಿರುವ ನಮ್ಮ ಸೊಸೈಟಿಯಿಂದ ಟ್ರ್ಯಾಕ್ಟರ್‌ನಲ್ಲಿ ಸ್ಥಳಾಂತರಿಸಲಾಗಿದೆ. ಪ್ರಸ್ತುತ ಸ್ಥಿತಿ ಕೆಟ್ಟದಾಗಿದೆ. ದಯವಿಟ್ಟು ಕಾಳಜಿ ವಹಿಸಿ. ನಿಮಗೆ ಯಾವುದೇ ಸಹಾಯ ಬೇಕಾದರೆ ನನಗೆ ಡಿಎಂ ಮಾಡಿ, ಸಹಾಯ ಮಾಡಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ," ಎಂದು ತಿಳಿಸಿದ್ದಾರೆ.
ಇನ್ನು ಟ್ವೀಟ್‌ಗೆ ಪ್ರತಿಕ್ರಿಯಿಸಿದ ಟ್ವಿಟ್ಟರ್ ಬಳಕೆದಾರರು, "ಇದು ಕ್ರೇಜಿ ಸ್ಥಿತಿ ಟೇಕ್ ಕೇರ್ ಭಾಯ್," ಎಂದು ಹೇಳಿದ್ದಾರೆ. ಇನ್ನೊಬ್ಬ ನೆಟ್ಟಿಗರು, "ಮುಂಜಾಲ್ ಸರ್ ನಿಮ್ಮ ಸ್ಥಿತಿ ಹೀಗಿದ್ದರೆ ಸಾಮಾನ್ಯ ಜನರ ಸ್ಥಿತಿ ಏನು? ದಯವಿಟ್ಟು ನಿಮ್ಮ ಮುಖ್ಯ ಕಚೇರಿಯನ್ನು ಜೈಪುರಕ್ಕೆ ಸ್ಥಳಾಂತರಿಸಿ," ಎಂದಿದ್ದಾರೆ. ಮತ್ತೋರ್ವ ನೆಟ್ಟಿಗರು "ಸರ್ವಶಕ್ತ ಟ್ರಾಕ್ಟರ್‌ಗಳು ಬೆಂಗಳೂರಿನಂತಹ ಮಹಾನಗರವನ್ನು ಸ್ವಾಧೀನಪ.


Click it and Unblock the Notifications