ಕಳೆದ ವಾರ ಏರಿಳಿಕೆಗಳನ್ನು ಕಂಡಿದ್ದ ಚಿನ್ನದ ಬೆಲೆ ಇಂದು ಸೋಮವಾರ (ಡಿ. 23) ಯಥಾಸ್ಥಿತಿಯನ್ನು ಪಡೆದುಕೊಂಡಿದೆ. ಕ್ರಿಸ್ಮಸ್ ಹಾಗೂ ಹೊಸ ವರ್ಷಕ್ಕೆ ಚಿನ್ನ ಖರೀದಿ ಮಾಡುವರಿಗೆ ಇಂದು ಉತ್ತಮ ದಿನ ಎಂದೇ ಹೇಳಬಹುದು. ಹಾಗಿದ್ರೆ,ಪ್ರಸ್ತುತ ಬೆಂಗಳೂರಲ್ಲಿ ಚಿನ್ನದ ಬೆಲೆ ( Gold Price) ಎಷ್ಟಿದೆ? ಬೆಳ್ಳಿ ದರ ಎಷ್ಟು? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೌದು, ಇದೇ ತಿಂಗಳು ಕ್ರಿಸ್ಮಸ್ ಹಾಗೂ ಹೊಸ ವರ್ಷದ ಆಗಮನವಿರುವುದರಿಂದ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಇದೆ. ಚಿನ್ನದ ಬೆಲೆಯು ಕೂಡ ಕಡಿಮೆ ಇರುವುರಿಂದ ಚಿನ್ನದ ಖರೀದಿದಾರರಿಗೆ ಚಿನ್ನದ ಮೇಲೆ ಹೂಡಿಕೆ ಮಾಡಲು ಒಳ್ಳೆ ಅವಕಾಶವಿದೆ. ಸದ್ಯ ಒಂದು ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 7,100 ರೂ ಇದ್ದು, ಅಪರಂಜಿ ಚಿನ್ನದ ಬೆಲೆ 7,745 ರೂಪಾಯಿಯಲ್ಲಿ ವಹಿವಾಟು ನಡೆಸುತ್ತಿದೆ.

ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ
22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ 7,100 ಮತ್ತು 24 ಕ್ಯಾರೆಟ್ ಅಪರಂಜಿ ಚಿನ್ನಕ್ಕೆ 7,745 ರೂಪಾಯಿ ವಹಿವಾಟುವನ್ನು ಇಂದು ನಡೆಸುತ್ತಿದೆ. 10 ಗ್ರಾಮ್ 22 ಕ್ಯಾರೆಟ್ ಚಿನ್ನ 71,000 ರೂಗಳು ಇದೆ. ನಿನ್ನೆ ಇದೇ ಚಿನ್ನ ಹೋಲಿಕೆ ಮಾಡಿದ್ದರೆ ನಿನ್ನೆ ಕೂಡ ಅಷ್ಟೇ ಇದ್ದು,ಯಥಾಸ್ಥಿತಿ ಪಡೆದುಕೊಂಡಿದೆ. ಸದ್ಯ ಅಪರಂಜಿ 24 ಕ್ಯಾರೆಟ್ 10 ಗ್ರಾಮ್ ಚಿನ್ನಕ್ಕೆ 77,450 ರೂಪಾಯಿ ಇದೆ. ಇನ್ನೂ ಸದ್ಯ 22 ಕ್ಯಾರಟ್ನ 100 ಗ್ರಾಂ ಚಿನ್ನದ ಬೆಲೆ 7,10,000 ರೂ ಹಾಗೂ 24 ಕ್ಯಾರಟ್ನ 100 ಚಿನ್ನದ ಬೆಲೆ 7,74,500 ರೂಪಾಯಿ ಇದೆ. ನಿನ್ನೆ ಬೆಲೆ ಹೋಲಿಕೆ ಮಾಡಿದ್ದರೆ ಯಾವುದೇ ಬದಲಾವಣೆಯನ್ನು ಕಂಡಿಲ್ಲ.
18 ಕ್ಯಾರಟ್ನ ಒಂದು ಗ್ರಾಮ್‌ನ ಚಿನ್ನಕ್ಕೆ 5,809 ರೂಪಾಯಿ ಇದೆ. ಅದೇ ಚಿನ್ನ 10 ಗ್ರಾಂ 58,090 ರೂಪಾಯಿ ಇದೆ. 100 ಗ್ರಾಮ್‌ಗೆ 5,80,900 ರೂಪಾಯಿ ಇದೆ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಗಳು
ಭಾರತದ ಬಹುತೇಕ ನಗರಗಳಲ್ಲಿ ಇಂದು ಚಿನ್ನದ ಬೆಲೆ ಸ್ಥಿರವಾಗಿದೆ. ಕೆಲವು ಪ್ರಮುಖ ನಗರಗಳಲ್ಲಿನ ಚಿನ್ನದ ಬೆಲೆಗಳು ಇಲ್ಲಿವೆ
| ಕ್ರಮ ಸಂಖ್ಯೆ | ನಗರಗಳು | 24 ಕ್ಯಾರೆಟ್ | 22 ಕ್ಯಾರೆಟ್ |
| 1 | ದೆಹಲಿ | 77,600 ರೂ | 71,150 ರೂ |
| 2 | ಮುಂಬೈ | 77,450 ರೂ | 71,000 ರೂ |
| 3 | ಚೆನ್ನೈ | 77,450 ರೂ | 71,000 ರೂ |
| 4 | ಕೋಲ್ಕತ್ತಾ | 77,450 ರೂ | 71,000 ರೂ |
ಚಿನ್ನದ ಬೆಲೆ ದಿಢೀರ್ ಹೆಚ್ಚಳ: 10 ಗ್ರಾಂ ಬಂಗಾರದ ಬೆಲೆ ಎಷ್ಟು? ಬೆಂಗಳೂರಲ್ಲಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ:
ಬೆಂಗಳೂರು ಬೆಳ್ಳಿ ದರ ಇಂದು ಅಲ್ಪ ಪ್ರಮಾಣದಲ್ಲಿ ಕುಸಿತ ಕಂಡಿದೆ. ಒಂದು ಗ್ರಾಮ್ ಬೆಳ್ಳಿಗೆ 91.50 ರೂ ಇದ್ದ ಬೆಳ್ಳಿ ಬೆಲೆ ಇಂದು 91.40 ರೂಗೆ ಇಳಿದಿದೆ. ಅದೇ ರೀತಿ 100 ಗ್ರಾಮ್ ಬೆಳ್ಳಿ ಬೆಲೆ 9,140 ರೂಪಾಯಿ ಇದೆ.
MCX ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಹೇಗಿದೆ?
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಫೆಬ್ರವರಿ 5, 2025 ರ ಚಿನ್ನದ ಮೌಲ್ಯವು ಶೇ. 0.03 ನಷ್ಟು ಲಾಭವನ್ನು ವಿಸ್ತರಿಸುತ್ತಿದೆ, 10 ಗ್ರಾಂಗೆ 76,441 ರೂ. ಇದೆ. ಅದೇ ರೀತಿ, ಮಾರ್ಚ್ 5, 2025 ರ ಬೆಳ್ಳಿ ಭವಿಷ್ಯವು ಇಂದು ಶೇ. 0.68 ರಷ್ಟು ಏರಿಕೆಯಾಗುತ್ತಿದೆ.
ಸ್ಪಾಟ್ ಚಿನ್ನ ಮತ್ತು ಬೆಳ್ಳಿ ದರಗಳು
ಇತ್ತೀಚಿನ ರಾಯಿಟರ್ಸ್ ವರದಿಯ ಪ್ರಕಾರ, ಸ್ಪಾಟ್ ಚಿನ್ನವು 0313 GMT ನಂತೆ ಪ್ರತಿ ಔನ್ಸ್‌ಗೆ USD 2,626.44 ಕ್ಕೆ ಶೇ.0.2 ರಷ್ಟು ಏರಿಕೆಯಾಗಿದೆ. ಆದರೆ US ಚಿನ್ನದ ಮೌಲ್ಯವು ಶೇ. 0.1 ರಷ್ಟು ಕಡಿಮೆಯಾಗಿ $2,642.10 ಕ್ಕೆ ತಲುಪಿದೆ. ಸ್ಪಾಟ್ ಸಿಲ್ವರ್ ಶೇ. 0.7 ಗಳಿಸಿ, ಪ್ರತಿ ಔನ್ಸ್ ಗೆ $29.72 ತಲುಪಿತು.
More From GoodReturns

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications