ಈ ವರ್ಷದಲ್ಲಿ ವೇತನ ಬೆಳವಣಿಗೆಯು ಶೇಕಡ 3.20ರಿಂದ ಶೇಕಡ 10.19ರ ನಡುವೆ ಇದೆ. ನಾವು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಈ ವರ್ಷದಲ್ಲಿ ವೇತನ ಬೆಳವಣಿಗೆ ಆಗಿಲ್ಲ. ಈ ವರ್ಷ ಒಟ್ಟಾರೆ ವೇತನದ ಬೆಳವಣಿಗೆಯಲ್ಲಿ ಕುಸಿತದ ಹೊರತಾಗಿಯೂ, ಇತರೆ ಪ್ರಮುಖ ವ್ಯತ್ಯಾಸಗಳು ಕೂಡಾ ಇದೆ.
ಶಾಶ್ವತ ಮತ್ತು ತಾತ್ಕಾಲಿಕ ಉದ್ಯೋಗಗಳ ಪೈಕಿ ಶೇಕಡ 41ರಷ್ಟು ಉದ್ಯೋಗಿಗಳ ವೇತನದ ನಡುವೆ ಬರೀ ಶೇಕಡ 5ರಷ್ಟು ವ್ಯತ್ತಾಸ ಮಾತ್ರ ಇದೆ. ಇದಲ್ಲದೆ, ಸಂಸ್ಥೆಗಳು ಬೆಳವಣಿಗೆ ಮತ್ತು ಡಿಜಿಟಲ್ ಟ್ರಾನ್ಸ್‌ಫಾರ್ಮೇಷನ್ ಮೇಲೆ ಕೇಂದ್ರೀಕರಿಸುವುದನ್ನು ಮುಂದುವರಿಸಿದೆ. ಮಾರಾಟ ಮತ್ತು ಐಟಿ ಕ್ಷೇತ್ರದಲ್ಲಿ ಬೇಡಿಕೆಯು ಸಾಕಷ್ಟು ಹೆಚ್ಚಳವಾಗಿದೆ. "ಉದ್ಯೋಗಗಳು ಮತ್ತು ವೇತನದ ವರದಿ" ಅನ್ನು ಟೀಮ್‌ಲೀಸ್ ಸರ್ವೀಸ್ ಬಿಡುಗಡೆ ಮಾಡಿದೆ.

ಉದ್ಯೋಗಗಳು ಮತ್ತು ವೇತನದ ವರದಿ ಏನು ಹೇಳುತ್ತದೆ?
ಈ ಸಮೀಕ್ಷೆಯಲ್ಲಿ ಹೆಚ್ಚಿನ ಕೈಗಾರಿಕೆಗಳು ಲಾಭದಾಯಕ ವೇತನವನ್ನು ನೀಡುವ ಉದ್ಯೋಗ ಸೃಷ್ಟಿಯನ್ನು ಸೂಚಿಸಿದೆ. ಸುಮಾರು ಅರ್ಧದಷ್ಟು ಉದ್ಯಮಗಳು ಭವಿಷ್ಯಕ್ಕೆ ಸೂಕ್ತವಾದ ಅತ್ಯಾಧುನಿಕ ಸ್ಥಾನಗಳನ್ನು ಅಭಿವೃದ್ಧಿಪಡಿಸುತ್ತಿವೆ ಎಂದು ವರದಿ ಹೇಳಿದೆ. ಬೆಂಗಳೂರು, ಮುಂಬೈ, ಚೆನ್ನೈ, ದೆಹಲಿ ಮತ್ತು ಹೈದಾರಾಬಾದ್ ದೇಶದಲ್ಲಿ ಉದ್ಯೋಗಿಗಳಿಗೆ ಅಧಿಕ ವೇತನವನ್ನು ನೀಡುವ ನಗರವಾಗಿದೆ ಎಂದು ವರದಿ ಹೇಳಿದೆ.
ಬೆಂಗಳೂರಿನಲ್ಲಿ ಉದ್ಯೋಗಿಗಳಿಗೆ ವೇತನ ನೀಡುವ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಶೇಕಡ 7.79ರಷ್ಟು ಏರಿಕೆಯಾಗಿದೆ. ಇನ್ನು ಇದಕ್ಕೆ ತದ್ವಿರುದ್ಧವಾಗಿ, ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ (BFSI) ವಿಭಾಗದಲ್ಲಿ ಈ ವರ್ಷ ಸರಾಸರಿ ವೇತನದಲ್ಲಿ ತೀವ್ರ ಕುಸಿತ ಉಂಟಾಗಿದೆ. ಎರಡು ವರ್ಷಗಳ ಏರಿಕೆ ಬಳಿಕ ಈ ವರ್ಷ ಕುಸಿತ ಕಂಡಿದೆ.
ಟೆಲಿಕಾಂ ಇಂಡಸ್ಟ್ರೀಯಲ್ಲಿ ಸರಾಸರಿ ವೇತನದ ಪ್ರಮಾಣವು ಇಳಿಕೆಯಾಗಿದೆ. ಆದರೂ ಕೂಡಾ ಬೆಂಗಳೂರಿನಲ್ಲಿ ಟೆಲಿಕಾಂ ಇಂಡಸ್ಟ್ರೀಯಲ್ಲಿ ರಿಲೇಷನ್‌ಶಿಪ್ ಮ್ಯಾನೆಜರ್ ಹುದ್ದೆಗೆ ವೇತನವು ಶೇಕಡ 10.19ರಷ್ಟು ಏರಿಕೆಯಾಗಿದೆ. ಮಾರುಕಟ್ಟೆಯಲ್ಲೇ ಅಧಿಕ ವೇತನ ಪಡೆಯುವ ಹುದ್ದೆ ಇದಾಗಿದೆ.
ಅದಾದ ಬಳಿಕ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ಗೇಮ್ ಡೆವಲಪರ್ ಹುದ್ದೆಗೆ ಬೆಂಗಳೂರಿನಲ್ಲಿ ವೇತನವು ಶೇಕಡ 9.30ರಷ್ಟು ಏರಿಕೆಯಾಗಿದೆ. ವಲಯಗಳಾದ್ಯಂತ, ಸರಾಸರಿ ವೇತನ ಹೆಚ್ಚಳವು ಶೇಕಡ 8.03ರಷ್ಟಿದ್ದರೆ, ಗರಿಷ್ಠ ವೇತನ ಹೆಚ್ಚಳ ಶೇಕಡ 10.19 ಆಗಿದೆ. ಇದು ಈ ಹಿಂದಿನ ವರ್ಷಕ್ಕಿಂತ ಸ್ವಲ್ಪ ಕಡಿಮೆಯಾಗಿದೆ.
ಟೀಮ್‌ಲೀಸ್ ಸರ್ವಿಸಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾರ್ತಿಕ್ ನಾರಾಯಣ್, "ಜಾಗತಿಕವಾಗಿ ಉದ್ಯೋಗ ಕಡಿತದ ನಡುವೆ ಸರಾಸರಿ ವೇತನದ ಬೆಳವಣಿಗೆಯು ಕಳೆದ ವರ್ಷಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. ಆದರೂ ಭಾರತೀಯ ಉದ್ಯೋಗ ಮಾರುಕಟ್ಟೆಯು ವಿಕಸನಗೊಳ್ಳುತ್ತಿದೆ," ಎಂದು ತಿಳಿಸಿದ್ದಾರೆ.
"ಉದ್ಯೋಗದ ಪಾತ್ರಗಳ ವಿಷಯದಲ್ಲಿ ಬಂದಾಗ 17 ಉದ್ಯಮಗಳಲ್ಲಿ 11 ಉದ್ಯಮಗಳು ಹೊಸ ಉದ್ಯೋಗಗಳನ್ನು ಸೃಷ್ಟಿ ಮಾಡಿದೆ. 7 ಉದ್ಯಮಗಳು ಹೊಸ ಉದ್ಯೋಗಗಳನ್ನು ಸೃಷ್ಟಿಸಿವೆ. ಈ ಪ್ರೊಫೈಲ್‌ಗಳು ಟೆಲಿಕಾಂ ಉದ್ಯಮದಲ್ಲಿ ಸೀನಿಯರ್ ಗೋಲಾಂಗ್ ಡೆವಲಪರ್, ಹೆಲ್ತ್‌ಕೇರ್ & ಫಾರ್ಮಾಸ್ಯುಟಿಕಲ್ಸ್‌ನಲ್ಲಿ ಸೀನಿಯರ್ ಬಯೋಸ್ಟಾಟಿಸ್ಟಿಶಿಯನ್, ಇ-ಕಾಮರ್ಸ್ ಮತ್ತು ಟೆಕ್ ಸ್ಟಾರ್ಟ್-ಅಪ್‌ಗಳಲ್ಲಿ ಲೀಡ್ ಮೆಜೆಂಟೊ ಡೆವಲಪರ್ ಮತ್ತು ಶೈಕ್ಷಣಿಕ ಸೇವೆಗಳಲ್ಲಿ ರೋಬೋಟಿಕ್ಸ್ ಬೋಧಕದಂತಹ ಈ ಹಿಂದೆ ಕೇಳಿರದ ಕೆಲವು ಪಾತ್ರಗಳನ್ನು ಒಳಗೊಂಡಿವೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications