ಬೆಂಗಳೂರಿಗೆ ಗುಡ್ ನ್ಯೂಸ್! ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಹಾಕಲು, ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ (ATCS) ಅನ್ನು ಈಗ ಹೊಸದಾಗಿ ಅಪ್‌ಡೇಟ್ ಮಾಡಿ ಪರಿಚಯವನ್ನು ಮಾಡಲಾಗಿದೆ. ಇದು ಸ್ಮಾರ್ಟ್ ಸಿಟಿ ಯೋಜನೆಯ ಒಂದು ಭಾಗವಾಗಿದೆ. ಇನ್ಮುಂದೆ ಟ್ರಾಫಿಕ್ ಕಮ್ಮಿಯಾಗಬಹುದು.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿಯನ್ನು ಹಂಚಿಕೊಂಡಿರುವ ಟ್ರಾಫಿಕ್ ಪೊಲೀಸರು, ಬೆಂಗಳೂರು ಸ್ಮಾರ್ಟ್ ಮೊಬಿಲಿಟಿ ಕಡೆಗೆ ನಾವು ಹೆಜ್ಜೆಯನ್ನು ಇಡುತ್ತದೆ ಎಮದು ಹೇಳಿದ್ದಾರೆ. ಬೆಂಗಳೂರು ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ (BATCS) ಟ್ರಾಫಿಕ್ ಸಿಗ್ನಲ್‌ನ ಸಮಯವನ್ನು ರಿಯಲ್ ಟೈಮ್ ಮಾಹಿತಿಯನ್ನ ಬಳಸಿ ಬದಲಾಯಿಸುತ್ತದೆ ಇದರಿಂದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಬಹುದು. ಇದರಿಂದಾಗಿ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಬೆಂಗಳೂರು ವೇಗವಾಗಿ ಹೇಗೆ ಬೇಲೆಯುತ್ತಿದಿಯೋ ಸಂಚಾರ ದಟ್ಟಣೆ ಕೂಡ ಹಾಗೇ ಹೆಚ್ಚಾಗುತ್ತಲೇ ಇದೆ.
ಟ್ರಾಫಿಕ್ ಪೊಲೀಸರು ಹಂಚಿಕೊಂಡಿರುವ ವಿಡಿಯೋದಲ್ಲಿ, ATCS ಸಿಗ್ನಲ್‌ಗಳಲ್ಲಿನ ಹೊಸ ಬದಲಾವಣೆಗಳನ್ನು ವಿವರಣೆಗಳನ್ನು ನೀಡಲಾಗಿದೆ. ನಿಮ್ಮಗೆ ಹಸಿರು ಸಿಗ್ನೇಲ್ ಬರುವುದಕ್ಕೆ ಮುಂಚೆ ಕೌಂಟ್ ಡೌನ್ ಟೈಮರ್ ಕಾಣಿಸುತ್ತದೆ. ಇದು ಚಾಲಕರಿಗೆ ಸುಲಭವಾಗಿ ವಾಹನ ಚಲಾಯಿಸಲು ಸಹಾಯವನ್ನು ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ನಗರದ ಟ್ರಾಫಿಕ್ ಪೊಲೀಸ್ ಮುಖ್ಯಸ್ಥರಾಗಿ ಐಎಎಸ್ ಅಧಿಕಾರಿ ಕಾರ್ತಿಕ್ ರೆಡ್ಡಿ ಅಧಿಕಾರ ವಹಿಸಿಕೊಂಡ ನಂತರ, ನಗರದ ಟ್ರಾಫಿಕ್ ವ್ಯವಸ್ಥೆಯನ್ನು ಸರಿಪಡಿಸಲು ಹೆಚ್ಚಿನ ಗಮನವನ್ನು ನೀಡಲಾಗುತ್ತದೆ. ಇತ್ತೀಚೆಗೆ, ಟ್ರಾಫಿಕ್ ಸಿಗ್ನಲ್ ಸಮಯದ ಬಗ್ಗೆ ಸಾರ್ವಜನಿಕರು ಸಾಮಾಜಿಕ ಮಾಧ್ಯಮಗಳಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ತಪ್ಪು ಟ್ರಾಫಿಕ್ ಸಿಗ್ನಲ್
ಮತ್ತು ಸಿಗ್ನಲ್‌ಗಳಲ್ಲಿ ಹೆಚ್ಚು ಸಮಯ ಕಾಯಬೇಕಾಗುತ್ತಿರುವುದರ ಬಗ್ಗೆ ಜನರು ಬೇಸರ ವ್ಯಕ್ತಪಡಿಸಿದ್ದಾರೆ. AI ತಂತ್ರಜ್ಞಾನವನ್ನು ಟೀಕಿಕೆಯನ್ನು ಸಹ ಮಾಡಿದ್ದಾರೆ. ಈ ವ್ಯವಸ್ಥೆಯಿಂದ ಕಾಯುವ ಸಮಯ ಹೆಚ್ಚಾಗುತ್ತಿದೆ ಮತ್ತು ಪ್ರಯಾಣ ಕಷ್ಟವಾಗುತ್ತಿದೆ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ. ಇದರ ಜೊತೆಗೆ, ಕೆಲವರು ಸಿಗ್ನಲ್ ನಿಯಮಗಳನ್ನು ಉಲ್ಲಂಘಿಗಳು ಕೂಡ ಹೆಚ್ಚಾಗುತ್ತೇವೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ದೊಡ್ಡದಾಗಿದೆ. ಇತ್ತೀಚೆಗೆ ಬೈಕ್ ಟ್ಯಾಕ್ಸಿಗಳ ಮೇಲೆ ನಿಷೇಧ ಹೇರಿದ್ದರಿಂದ ಟ್ರಾಫಿಕ್ ಇನ್ನಷ್ಟು ಹೆಚ್ಚಾಗಿದೆ. ಸರಿಯಾಗಿ ನಿರ್ಮಿಸದ ರಸ್ತೆ ಕಾಮಗಾರಿಗಳು ಕೂಡ ಟ್ರಾಫಿಕ್ ದಟ್ಟಣೆಗೆ ಕಾರಣವಾಗುತ್ತಿದೆ. ಹೊಸ ಹೊಸ ನಿಯಮಗಳನ್ನು ಜಾರಿಗೆ ತರುವ ಮೂಲಕ ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳು ಕೆಲಸವನ್ಉ ಮಾಡುತ್ತಿದ್ದಾರೆ.
ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಗೆ ಮದ್ದು!
ಬೆಂಗಳೂರಿನ ಹೊರ ವರ್ತುಲ ರಸ್ತೆಯು (ORR) ಪ್ರತಿದಿನ ಬೆಳಿಗ್ಗೆ 9 ರಿಂದ 10 ಗಂಟೆಯವರೆಗೆ ತೀವ್ರ ಟ್ರಾಫಿಕ್ ದಟ್ಟಣೆಯಿಂದ ತುಂಬಿರುತ್ತದೆ ಇದನ್ನು ನಿಯಂತ್ರಿಸಲು ನಗರದ ಸಂಚಾರ ವಿಭಾಗವು ಕಾರ್ಯವನ್ನು ನಿರ್ವಹಿಸುತ್ತಿದೆ. ಇತ್ತೀಚೆಗೆ ನಡೆದ ಸಭೆಯಲ್ಲಿ,ಬಿಬಿಎಂಪಿ ಅಧಿಕಾರಿಗಳು, ಸಾರಿಗೆ ಇಲಾಖೆ ಮತ್ತು ಐಟಿ ಕಂಪನಿಗಳ ಪ್ರತಿನಿಧಿಗಳು ಒಟ್ಟಾಗಿ ಸೇರಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಚರ್ಚೆಯನ್ನು ಕೂಡ ಮಾಡಿದ್ದಾರೆ ಎಂದು ವರದಿಗಳು ಆಗಿವೆ.
ಟ್ರಾಫಿಕ್ ದಟ್ಟಣೆಯ ಬದಲಾಗುತ್ತದೆ ರಸ್ತೆಗಳಲ್ಲಿ ಹೊಸ ಕ್ಯಾಮೆರಾಗಳನ್ನು ಅಳವಡಿಸಿಸಲಾಗುತ್ತದೆ.ಇದರಿಂದಾಗಿ ವಾಹನಗಳ ಚಲನೆಯನ್ನು ಗಮನಿಸಿ,ದಟ್ಟಣೆಯ ಸ್ವರೂಪವನ್ನು ಅರಿಯಲು ಅರ್ಥ ಮಾಡಿಕೊಳ್ಳಲಾಗುತ್ತದೆ.


Click it and Unblock the Notifications