ಬೆಂಗಳೂರು ಟ್ರಾಫಿಕ್ ಇಲ್ಲಿನ ಜನರ ದೊಡ್ಡ ಸಮಸ್ಯೆಗಳಲ್ಲಿ ಒಂದು. ಯಾವುದೇ ಕೆಲಸವಾದರೂ ಅಂದೊಕೊಂಡದ್ದಕಿಂತ ಬೇಗನೆ ಹೊರಟರೆ ಮಾತ್ರ ಸಮಯಕ್ಕೆ ಸರಿಯಾಗಿ ತಲುಪುವ ಸಾಧ್ಯತೆ ಇರುತ್ತದೆ. ಗ್ರಹಚಾರ ಕೆಟ್ಟು ಎಲ್ಲಿಯಾದರೂ ಟ್ರಾಫಿಕ್‌ನಲ್ಲಿ ಸಿಕ್ಕಿಕೊಂಡರೆ ಆ ಟೆನ್ಷನ್‌ಗೆ ಇಡೀ ದಿನದ ಕೆಲಸವೇ ಹಾಳಾಗುತ್ತದೆ. ಮಳೆ ಬಂದರಂತೂ ನಗರದಲ್ಲಿ ಟ್ರಾಫಿಕ್ ಸಮಸ್ಯೆ ವಿಪರೀತವಾಗುತ್ತದೆ. ಮುಂದಿನ ದಿನಗಳಲ್ಲಿ ಬೆಂಗಳೂರು ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಲು ಮೆಟ್ರೋ, ಸುರಂಗ ರಸ್ತೆಗಳಂತಹ ಹಲವು ಯೋಜನೆಗಳನ್ನು ಸರ್ಕಾರ ರೂಪಿಸಿದೆ.
ಸದ್ಯದ ಪರಿಸ್ಥಿತಿಯಲ್ಲಿ ಬೆಂಗಳೂರಿನ ಐಟಿ ಪ್ರದೇಶವಾದ ಎಲೆಕ್ಟ್ರಾನಿಕ್ ಸಿಟಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣ ಮಾಡಲು ಕನಿಷ್ಠ 2 ಗಂಟೆ ಸಮಯ ಬೇಕು. ಟ್ರಾಫಿಕ್ ಹೆಚ್ಚಿದ್ದರೆ ಮೂರು ಗಂಟೆಯಾದರೂ ಬೇಕಾಗುತ್ತದೆ. ಆದರೆ ನೀವು ಎಲೆಕ್ಟ್ರಾನಿಕ್ ಸಿಟಿಯಿಂದ ವಿಮಾನ ನಿಲ್ದಾಣಕ್ಕೆ ಕೇವಲ 19 ನಿಮಿಷಗಳಲ್ಲಿ ತಲುಪುವಂತಾದರೆ ಹೇಗಿರುತ್ತದೆ.

ಹೌದು, ಇಂತಹದ್ದೊಂದು ಕಾರ್ಯಸಾಧ್ಯತೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (BIAL) ಮತ್ತು ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಸರಳಾ ಏವಿಯೇಷನ್, ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ ಸೇವೆಗಳನ್ನು ಅಭಿವೃದ್ಧಿಪಡಿಸಲು ಸಹಯೋಗದ ಒಪ್ಪಂದಕ್ಕೆ ಸಹಿ ಹಾಕಿದೆ.
1936ರಲ್ಲಿ 21ನೇ ವಯಸ್ಸಿನಲ್ಲೇ ಪೈಲಟ್ ಪರವಾನಗಿ ಪಡೆದ ಮೊದಲ ಭಾರತೀಯ ಮಹಿಳೆ ಸರಳಾ ಥಕ್ರಾಲ್ ಅವರ ಗೌರವಾರ್ಥವಾಗಿ ಈ ಹೆಸರಿಡಲಾಗಿದೆ. ಸರಳಾ ಏವಿಯೇಷನ್ ತನ್ನ ಎಲೆಕ್ಟ್ರಿಕ್ ವರ್ಟಿಕಲ್ ಟೇಕ್-ಆಫ್ ಮತ್ತು ಲ್ಯಾಂಡಿಂಗ್ (ಇವಿಟಿಒಎಲ್) ತಂತ್ರಜ್ಞಾನದೊಂದಿಗೆ ನಗರದಲ್ಲಿ ಏರ್ ಟ್ಯಾಕ್ಸಿ ಸೇವೆಯನ್ನು ಆರಂಭಿಸಲು ಸಜ್ಜಾಗಿದೆ.
1,700 ರೂಪಾಯಿಗೆ ಏರ್ ಟ್ಯಾಕ್ಸಿ
ಎಲೆಕ್ಟ್ರಾನಿಕ್ ಸಿಟಿಯಿಂದ ವಿಮಾನ ನಿಲ್ದಾಣಕ್ಕೆ 1,700 ರೂಪಾಯಿಗೆ ಏರ್ ಟ್ಯಾಕ್ಸಿ ಸೇವೆಗಳನ್ನು ಒದಗಿಸಲು ಸರಳಾ ಏವಿಯೇಷನ್ ನಿರ್ಧರಿಸಿದೆ. ಕೇವಲ 19 ನಿಮಿಷಗಳಲ್ಲಿ ಎಲೆಕ್ಟ್ರಾನಿಕ್ ಸಿಟಿಯಿಂದ ವಿಮಾನ ನಿಲ್ದಾಣಕ್ಕೆ ತಲುಪಬಹುದು ಎಂದು ಹೇಳಲಾಗಿದೆ. ಸರಳಾ ಏವಿಯೇಷನ್ 20 ರಿಂದ 40 ಕಿಲೋಮೀಟರ್ ಅಂತರದಲ್ಲಿ ಪ್ರಯಾಣಿಸಲು eVTOL ಏರ್ ಟ್ಯಾಕ್ಸಿಯನ್ನು ವಿನ್ಯಾಸಗೊಳಿಸಿದೆ. ಇದರ ಗರಿಷ್ಠ ವ್ಯಾಪ್ತಿ 160 ಕಿಲೋ ಮೀಟರ್ ಎಂದು ಹೇಳಲಾಗಿದೆ.
ಎಲೆಕ್ಟ್ರಾನಿಕ್ಸ್ ಸಿಟಿಯಿಂದ ವಿಮಾನ ನಿಲ್ದಾಣಕ್ಕೆ 1,700 ರೂ.ಗೆ ಏರ್ ಟ್ಯಾಕ್ಸಿ ಸೇವೆಗಳನ್ನು ಒದಗಿಸಲು ಯೋಜಿಸಿದೆ, ಅಂದಾಜು ಪ್ರಯಾಣದ ಸಮಯ ಕೇವಲ 19 ನಿಮಿಷಗಳು. ಕಂಪನಿಯು ತನ್ನ eVTOL ವಿಮಾನವನ್ನು 20 ರಿಂದ 40 ಕಿಲೋಮೀಟರ್‌ಗಳ ನಡುವಿನ ಸಣ್ಣ ನಗರ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿಕೊಂಡಿದೆ, ಗರಿಷ್ಠ ವ್ಯಾಪ್ತಿಯು 160 ಕಿಲೋಮೀಟರ್‌ಗಳವರೆಗೆ ಇರುತ್ತದೆ.
ಸುರಕ್ಷತೆ ಬಗ್ಗೆ ಅನುಮಾನ ಬೇಡ
ಸರಳಾ ಏವಿಯೇಷನ್ ಪ್ರಕಾರ, ಈ ಏರ್ ಟ್ಯಾಕ್ಸಿ ಹೆಲಿಕಾಪ್ಟರ್ ಗಿಂತ 100 ಪಟ್ಟು ಸುರಕ್ಷಿತವಾಗಿದೆ, ಸಾಕಷ್ಟು ಸುರಕ್ಷತಾ ಮಾನದಂಡಗಳನ್ನು ಬಳಸಿ ಇದನ್ನು ನಿರ್ಮಾಣ ಮಾಡಲಾಗಿದೆ. ಹೆಲಿಕಾಪ್ಟರ್‌ಗಳು ಸಾಮಾನ್ಯವಾಗಿ ಮೋಟಾರ್ ಮತ್ತು ರೋಟರ್ ನಡುವೆ 100 ಸಿಂಗಲ್ ಪಾಯಿಂಟ್‌ಗಳ ವೈಫಲ್ಯವನ್ನು ಹೊಂದಿರುತ್ತವೆ, ಆದರೆ ನಮ್ಮ ಸಿಸ್ಟಮ್ ಶೂನ್ಯ ಪ್ರಮಾಣ ಹೊಂದಿದೆ ಎಂದು ಸಹ-ಸಂಸ್ಥಾಪಕ ಮತ್ತು ಸಿಇಒ ಆಡ್ರಿಯನ್ ಸ್ಮಿತ್ ಹೇಳಿದ್ದಾರೆ.
60 ಮೀಟರ್ ಗಿಂತಲೂ ಹೆಚ್ಚಿನ ಎತ್ತರದ ಕಟ್ಟಡಗಳ ಮೇಲೆ ಹೆಲಿಪ್ಯಾಡ್‌ಗಳ ಅಗತ್ಯವಿದ್ದು, ಟ್ಯಾಕ್ಸಿ ಸೇವೆಗಳಿಗೆ ಸುಲಭವಾಗಿ ಲಭ್ಯವಿರುವ ಮೂಸೌಕರ್ಯ ಸೃಷ್ಟಿಸಲು ಕರ್ನಾಟಕ ಸರ್ಕಾರ ಕಟ್ಟಡ ನಿಯಮಾವಳಿಗಳ ಬದಲಾಣೆ ಮಾಡುವ ಅಗತ್ಯವಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ನಮಗೆ ಬೆಂಬಲ ಕೊಟ್ಟಿವೆ ಎಂದು ಹೇಳಿದ್ದು, ಮುಂದಿನ ಎರಡು ಮೂರು ವರ್ಷಗಳಲ್ಲಿ ಏರ್ ಟ್ಯಾಕ್ಸಿ ಸೇವೆ ಆರಂಭಿಸುವ ಸಾಧ್ಯತೆ ಇದೆ ಎಂದರು.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications