ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಸಾವಿರಾರು ರೂಪಾಯಿ ದಂಡವನ್ನು ಕಟ್ಟಿರುವ ಅದೆಷ್ಟೋ ನಿದರ್ಶನಗಳು ನಮ್ಮ ಮುಂದಿದೆ. ಆದರೆ ಇಲ್ಲೊಬ್ಬರು ಸಾವಿರವಲ್ಲ ಲಕ್ಷ ರೂಪಾಯಿ ದಂಡವನ್ನು ಎದುರಿಸುತ್ತಿದ್ದಾರೆ.
ಹೌದು, 255 ಸಂಚಾರ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ವ್ಯಕ್ತಿಯೊಬ್ಬರ ಮೇಲೆ 1.34 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ. ಈ ಬಾಕಿ ಮೊತ್ತವನ್ನು ಪಾವತಿ ಮಾಡಿ ಎಂದು ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಸಂಚಾರ ಪೊಲೀಸರು ನೋಟಿಸ್ ನೀಡಿದ್ದಾರೆ.

ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, ಎಲುಮಲೈ ಎಂಬ ವ್ಯಕ್ತಿ ಎರಡು ವರ್ಷಗಳ ಅವಧಿಯಲ್ಲಿ 255 ಬಾರಿ ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ. ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್ (ಟಿಎಂಸಿ) ಹೆಚ್ಚಿನ ಸಂಖ್ಯೆಯ ಸಂಚಾರ ಉಲ್ಲಂಘನೆ ಹೊಂದಿರುವ ವಾಹನಗಳನ್ನು ಹುಡುಕುತ್ತಿರುವಾಗ ಈ ವ್ಯಕ್ತಿಯ ವಿವರ ಲಭ್ಯವಾಗಿದೆ.
ಈ ಬಗ್ಗೆ ನಗರದಾದ್ಯಂತ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಲಾಗಿದೆ. ಅಂತಹ ವಾಹನಗಳನ್ನು ಪತ್ತೆ ಹಚ್ಚಿ ದಂಡ ವಸೂಲಿ ಮಾಡುವಂತೆ ಸಂಚಾರಿ ಪೊಲೀಸ್ ಸಿಬ್ಬಂದಿಗೆ ಸೂಚಿಸಲಾಗಿದೆ. ಅದಾದ ಬಳಿಕ ಪೊಲೀಸರು ತಮ್ಮ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ತನಿಖೆಯನ್ನು ನಡೆಸಿದಾಗ ದಿನಗೂಲಿ ಮಾಡುತ್ತಾ ಜೀವನ ಸಾಗಿಸುತ್ತಿರುವ ಎಲುಮಲೈ ಎಂಬ ವ್ಯಕ್ತಿ ತನ್ನ ಸ್ಕೂಟರ್‌ನಲ್ಲಿ 255 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿರುವುದು ಕಂಡುಬಂದಿದೆ. ಠಾಣೆಗೆ ಈ ವ್ಯಕ್ತಿಯನ್ನು ಕರೆಸಿ ವಿಷಯವನ್ನು ತಿಳಿಸಲಾಗಿದೆ.
ನಗರದಾದ್ಯಂತ ಅಳವಡಿಸಲಾಗಿರುವ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಐಟಿಎಂಎಸ್) ಕ್ಯಾಮೆರಾಗಳ ಬಗ್ಗೆ ನನಗೆ ತಿಳಿದಿಲ್ಲ ಎಂದು ಎಲುಮಲೈ ಪೊಲೀಸ್ ಸಿಬ್ಬಂದಿಗೆ ತಿಳಿಸಿದರು. ಮಾಹಿತಿ ಪ್ರಕಾರ ಎಲುಮಲೈ ಮತ್ತು ಅವರ ಮಗ ಹಲವಾರು ಸಂದರ್ಭಗಳಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ಧರಿಸದೆ ದ್ವಿಚಕ್ರ ವಾಹನವನ್ನು ಓಡಿಸುತ್ತಿರುವುದು ಕಂಡುಬಂದಿದೆ.
ಕೊರಿಯರ್ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುವ ತನ್ನ ಮಗನಿಗೆ ತಾನು ಸ್ಕೂಟರ್ ಖರೀದಿಸಿದ್ದೇನೆ ಎಂದು ಎಲುಮಲೈ ಪೊಲೀಸರಿಗೆ ತಿಳಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಪ್ರಕಾರ ಅವರು ದ್ವಿಚಕ್ರ ವಾಹನವನ್ನು ತಂದೆ ಎಲುಮಲೈ ಅತೀ ಅಧಿಕವಾಗಿ ಬಳಕೆ ಮಾಡುವುದಿಲ್ಲ.
ಐಟಿಎಂಎಸ್‌ನೊಂದಿಗೆ 50 ಅಥವಾ ಅದಕ್ಕಿಂತ ಹೆಚ್ಚು ಸಂಚಾರ ಉಲ್ಲಂಘನೆ ಹೊಂದಿರುವ ವಾಹನಗಳ ಬಗ್ಗೆ ಅವರು ನಿಯಮಿತವಾಗಿ ಡೇಟಾವನ್ನು ಸಂಗ್ರಹಿಸುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎಲುಮಲೈ ಸ್ಪಾಟ್ ಫೈನ್ ಆಗಿ ಹತ್ತು ಸಾವಿರ ರೂಪಾಯಿ ಪಾವತಿಸಿ 20 ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ತಿಳಿಸಿದೆ. ಪೊಲೀಸರು ಅವರ ಸುಜುಕಿ ಆಕ್ಸೆಸ್ ಸ್ಕೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ನಡುವೆ ಬೆಂಗಳೂರು ಟ್ರಾಫಿಕ್ ಪೊಲೀಸರು ಈ ವಾರ ವಿಶಿಷ್ಟವಾದ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಅದರ ಅಡಿಯಲ್ಲಿ ವ್ಯಕ್ತಿಯ ಸಂಚಾರ ಉಲ್ಲಂಘನೆಯ ಬಗ್ಗೆ ಅವನ / ಅವಳ ಕಂಪನಿಗೆ ನೇರವಾಗಿ ತಿಳಿಸುತ್ತದೆ. ಸಂಚಾರ ಪೊಲೀಸರ ಪ್ರಕಾರ, ಈ ಉಪಕ್ರಮದೊಂದಿಗೆ, ಅವರು ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಬಯಸುತ್ತಾರೆ.
ಸದ್ಯಕ್ಕೆ ಸಂಚಾರ ಪೊಲೀಸ್‌ನ ಪೂರ್ವ ವಿಭಾಗಕ್ಕೆ ಮಾತ್ರ ಚಾಲನೆ ನೀಡಲಾಗಿದೆ. ಆದರೆ ಮಾರ್ಗದುದ್ದಕ್ಕೂ ಉಲ್ಲಂಘನೆಗಳಲ್ಲಿ ಗಮನಾರ್ಹ ಇಳಿಕೆ ಕಂಡುಬಂದರೆ, ಬೆಂಗಳೂರಿನ ಇತರ ಪ್ರಮುಖ ಭಾಗಗಳಿಗೂ ಇದನ್ನು ವಿಸ್ತರಿಸಲಾಗುವುದು ಎಂದು ಬೆಂಗಳೂರು ಸಂಚಾರ ಪೊಲೀಸರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ.


Click it and Unblock the Notifications