ಬೆಂಗಳೂರು: ಯಾವುದೇ ಹಬ್ಬ, ವಿಶೇಷ ದಿನಗಳಿದ್ದಾಗ ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೇ (Indian Railways) ವಿಶೇಷ ಕ್ರಮಗಳನ್ನು ಕೈಗೊಳ್ಳುತ್ತದೆ. ಇದರಿಂ ಪ್ರಯಾಣಿಕರಿಗೂ ಸಂಚಾರದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಅಂದರೆ ಭಾರತೀಯ ರೈಲ್ವೇ ಆಯಾ ಪ್ರದೇಶದ ಆಚರಣೆಗೆ ತಕ್ಕಂತೆ, ಸ್ಪೆಷಲ್ ಟ್ರೈನ್ (Special Train) ಅಥವಾ ಹೆಚ್ಚುವರಿ ರೈಲುಗಳನ್ನು ನಿಯೋಜಿಸುತ್ತದೆ. ಇದೀಗ ಮುಂದಿನ ವಾರದಲ್ಲಿ ಮಹಾಶಿವರಾತ್ರಿ (Maha Shivaratri) (ಫೆ.15) ಬರುತ್ತಿದೆ. ಈ ಹಿನ್ನೆಲೆ ಬೆಂಗಳೂರಿನಲ್ಲಿರುವವರಿಗೆ ರೈಲ್ವೇ ಇಲಾಖೆ ಗುಡ್ ನ್ಯೂಸ್ ಕೊಟ್ಟಿದೆ. ಶಿವರಾತ್ರಿ ರಜೆಯಲ್ಲಿ ಊರಿಗೆ ಹೋಗುವ ಪ್ಲಾನ್ ಮಾಡಿರುವವರಿಗೆ ಸಿಹಿ ಸುದ್ದಿ ಅಂತಾನೇ ಹೇಳ್ಬಹುದು.

ಹೌದು, ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸುವ ಉದ್ದೇಶದಿಂದ ನೈಋತ್ಯ ರೈಲ್ವೇ (SWR) ಯಶವಂತಪುರದಿಂದ ಮಡಗಾಂವ್‌ಗೆ (ಗೋವಾ) ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಘೋಷಿಸಿದೆ.
ಯಶವಂತಪುರ ಟು ಮಡಗಾಂವ್ ಎಕ್ಸ್‌ಪ್ರೆಸ್ ರೈಲು!
- ರೈಲು ಸಂಖ್ಯೆ 06507 ಯಶವಂತಪುರ-ಮಡಗಾಂವ್ ವಿಶೇಷ ಎಕ್ಸ್‌ಪ್ರೆಸ್ ರೈಲು ಫೆಬ್ರವರಿ 13ರ ಮಧ್ಯಾಹ್ನ 12:30 ಕ್ಕೆ ಯಶವಂತಪುರದಿಂದ ಹೊರಡಲಿದೆ. ಈ ರೈಲು ಮರುದಿನ ಬೆಳಿಗ್ಗೆ 6:45 ಕ್ಕೆ ಮಡಗಾಂವ್ ತಲುಪುತ್ತದೆ.
- ರೈಲು ಸಂಖ್ಯೆ 06508 ಮಡಗಾಂವ್‌ನಿಂದ ಯಶವಂತಪುರಕ್ಕೆ ಸಂಚಾರ. ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಫೆಬ್ರವರಿ 16 ರಂದು ಬೆಳಿಗ್ಗೆ 11:00 ಗಂಟೆಗೆ ಮಡಗಾಂವ್‌ನಿಂದ ಹೊರಡಲಿದೆ. ಈ ರೈಲು ಮರು ದಿನ ಬೆಳಿಗ್ಗೆ 04:45 ಕ್ಕೆ ಯಶವಂತಪುರವನ್ನು ತಲುಪುತ್ತದೆ.
ಮಾರ್ಗ ಮತ್ತು ನಿಲುಗಡೆಗಳು:
ಚಿಕ್ಕಬಾಣಾವರ, ಚೆನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಬಂಟ್ವಾಳ
ಸುರತ್ಕಲ್, ಉಡುಪಿ, ಕುಂದಾಪುರ, ಭಟ್ಕಳ, ಮುರುಡೇಶ್ವರ, ಗೋಕರ್ಣ ರೋಡ್, ಅಂಕೋಲಾ, ಕಾರವಾರ ನಿಲ್ದಾಣಗಳಲ್ಲಿ ನಿಲುಗಡೆಗಳನ್ನು ಹೊಂದಿದೆ.
ಹಿಂದಿರುಗುವ ರೈಲಿನ ನಿಲುಗಡೆ ವಿವರ:
ಇನ್ನು ಹಿಂದಿರುಗುವ 06508 ರೈಲು, ಕಾರವಾರ, ಅಂಕೋಲಾ, ಗೋಕರ್ಣ ರೋಡ್, ಕುಮಟಾ, ಹೊನ್ನಾವರ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕ ರೋಡ್, ಕುಂದಾಪುರ, ಉಡುಪಿ, ಮುಲ್ಕಿ, ಸುರತ್ಕಲ್, ಬಂಟ್ವಾಳ, ಕಬಕಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಚೆನ್ನರಾಯಪಟ್ಟಣ, ಚಿಕ್ಕಬಾಣಾವರ ನಿಲ್ದಾಣಗಳನ್ನು ಹೊಂದಿದೆ.
ರೈಲು ಸೌಲಭ್ಯಗಳು ಮತ್ತು ಬುಕಿಂಗ್ ವ್ಯವಸ್ಥೆ:
- ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಸ್ಲೀಪರ್, ಎಸಿ ಮತ್ತು ಜನರಲ್ ಕೋಚ್‌ಗಳನ್ನು ಹೊಂದಿರುತ್ತದೆ.
- ಬುಕಿಂಗ್ IRCTC ವೆಬ್‌ಸೈಟ್ ಅಥವಾ ಆಪ್ ಮೂಲಕ ಲಭ್ಯವಿದ್ದು, ಶೀಘ್ರದಲ್ಲೇ ಆರಂಭವಾಗಲಿದ್ದು, ಪ್ರಯಾಣಿಕರು ಈ ಸೌಲಭ್ಯ ಪಡೆಯಬಹುದು.
- ಪ್ರಯಾಣಿಕರು ಪ್ರಿ ರಿಸರ್ವೇಷನ್ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ. ಏಕೆಂದರೆ ಹಬ್ಬದ ಸಂದರ್ಭದಲ್ಲಿ ರೈಲ್ವೇ ಟಿಕೆಟ್‌ಗಳಿಗೆ ಹೆಚ್ಚಿನ ಡಿಮ್ಯಾಂಡ್ ಇರುವುದರಿಂದ, ಬೇಗನೆ ಸೇಲ್ ಆಗುವ ಸಾಧ್ಯತೆ ಇರುತ್ತದೆ.
ಮಹಾ ಶಿವರಾತ್ರಿ ಹಬ್ಬ:
ಮಹಾ ಶಿವರಾತ್ರಿ ಹಬ್ಬವು ಈ ವರ್ಷ ಫೆಬ್ರವರಿ 15, 2026 ಭಾನುವಾರ ಬರುತ್ತಿದೆ. ಶಿವಭಕ್ತರು ಉಪವಾಸ, ಜಾಗರಣೆ, ರಾತ್ರಿ ಪೂಜೆ ಮತ್ತು ವಿಶೇಷ ದರ್ಶನಗಳ ಮೂಲಕ ಭಗವಾನ್ ಶಿವನನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಇನ್ನು ಮಹಾ ಶೀವರಾತ್ರಿಯ ಸಮಯದಲ್ಲಿ ಪ್ರಯಾಣಿಕರ ಹೆಚ್ಚಿನ ದಟ್ಟಣೆಯನ್ನು ನಿಭಾಯಿಸಲು ನೈಋತ್ಯ ರೈಲ್ವೇ ಹಲವು ವಿಶೇ ರೈಲು ಸೇವೆಗಳನ್ನು ಇದೀಗ ಘೋಷಿಸಿದೆ.


Click it and Unblock the Notifications