ಬೆಂಗಳೂರಿನ ನಿವಾಸಿಗಳಿಗೆ ಸಿಹಿ ಸುದ್ದಿ..ಬೆಂಗಳೂರು ಟ್ರಾಫಿಕ್ ಹಬ್, ಟ್ರಾಫಿಕ್ ಸಿಟಿ ಅಂತಲೇ ಹೆಸರುವಾಸಿ. ಟ್ರಾಫಿಕ್ ನಿಯಂತ್ರಣಕ್ಕೆ ಬೆಂಗಳೂರು ಸಂಚಾರಿ ಪೊಲೀಸರು ಮಾಡದೇ ಇರುವ ಕಸರತ್ತಿಲ್ಲ.ದಿನೇ ದಿನೆ ವಾಹನ ಸಂಚಾರ ದಟ್ಟಣೆ ಹೆಚ್ಚಾಗುತ್ತಲೇ ಇದೆ. ಬೆಂಗಳೂರಿನ ಹಲವೆಡೆ ಟ್ರಾಫಿಕ್‌ದೇ ಜಾಸ್ತಿ ಗೋಳಾಗಿದೆ. ಸಂಚಾರ ದಟ್ಟನೆ ನಿಯಂತ್ರಿಸುವುದಕ್ಕೆ ಕಷ್ಟಕರವಾಗಿದೆ. ಆದರೆ ಇನ್ಮುಂದೆ ಟ್ರಾಫಿಕ್ ಇರುವುದಿಲ್ಲ ಯಾಕೆಂದರೆ ಸಂಚಾರ ದಟ್ಟಣೆಗೆ ಬ್ರೇಕ್ ಹಾಕಲು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ದೊಡ್ಡ ನಿರ್ಧಾರ ಮಾಡಿದ್ದಾರೆ.
ಹೌದು,ಇನ್ಮುಂದೆ ಟ್ರಾಫಿಕ್ ಇರಲ್ಲ ...ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಡಬಲ್ ಡೆಕ್ಕರ್ ಫ್ಲೈಓವರ್‌ಗಳು, ಸುರಂಗ ರಸ್ತೆಗಳು, ಬಫರ್ ರಸ್ತೆಗಳು, ಎಲಿವೇಟೆಡ್ ಕಾರಿಡಾರ್‌ಗಳು ಮತ್ತು ಇತರ ಮೂಲಸೌಕರ್ಯ ಯೋಜನೆಗಳನ್ನು ಯೋಜಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗುರುವಾರ ಘೋಷಣೆ ಮಾಡಿದ್ದಾರೆ.

ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯರಾದ ಸುಧಾಮ್ ದಾಸ್ ಅವರು ಬೆಂಗಳೂರಿನ ಸಂಚಾರಿ ದಟ್ಟಣೆ ಸಮಸ್ಯೆ ನಿವಾರಣೆಗೆ ಕೈಗೊಂಡಿರುವ ಯೋಜನೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ ಶಿವಕುಮಾರ್ ಅವರು ಬೆಂಗಳೂರಿನ ಜವಾಬ್ದಾರಿಯನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ದೆಹಲಿಯಂತಲ್ಲದೆ, ಬೆಂಗಳೂರು ಯೋಜಿತ ನಗರವಲ್ಲ ಜಯನಗರ, ಇಂದಿರಾನಗರ ಮತ್ತು ಮಲ್ಲೇಶ್ವರಂನಂತಹ ಪ್ರದೇಶಗಳಲ್ಲಿ ಮಾತ್ರ ಸಂಚಾರ ದಟ್ಟಣೆಯಿದೆ ಎಂದು ಅವರು ಸಂಚಾರದ ಸುಧಾರಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ಮಾತನಾಡಿದ್ದರು.
ಪೆರಿಫೆರಲ್ ರಿಂಗ್ ರಸ್ತೆ ಯೋಜನೆಯು ನಗರದ ಸಂಚಾರ ಸಮಸ್ಯೆಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದಿತ್ತು, ಆದರೆ ಅದನ್ನು ಕಾರ್ಯಗತಗೊಳಿಸಲಾಗಿಲ್ಲ ಎಂದು ಮಾಹಿತಿಯನ್ನು ತಿಳಿಸಿದ್ದರು. ಮೊದಲೇ ಪಿಆರ್‌ಆರ್ ಜಾರಿಗೆ ತಂದಿದ್ದರೆ 3,000-4,000 ಕೋಟಿ ವೆಚ್ಚವಾಗುತ್ತಿತ್ತು , ಆದರೆ ಇಂದು ವೆಚ್ಚ 26,000 ಕೋಟಿಗೆ ಏರಿಕೆಯಾಗಿದ ಎಂದರು.
ನಾವು HUDCO ನಿಂದ ಸಾಲ ಪಡೆಯುವ ಮೂಲಕ PRR ನೊಂದಿಗೆ ಮುಂದುವರಿಯುತ್ತಿದ್ದೇವೆ. ಕೆ.ಜೆ. ಜಾರ್ಜ್ ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದಾಗ, ಅವರು ಬಳ್ಳಾರಿ ರಸ್ತೆಯಲ್ಲಿ ಉಕ್ಕಿನ ಸೇತುವೆಯ ಪ್ರಸ್ತಾಪವನ್ನು ಮಾಡಿದರು, ಆದರೆ ಬಲವಾದ ವಿರೋಧವು ಯೋಜನೆಯನ್ನು ಸ್ಥಗಿತಗೊಳಿಸಿತು ಎಂದು ಶಿವಕುಮಾರ್ ತಿಳಿಸಿದ್ದರು.
ಇನ್ನೂ ಆ ನಿರ್ಧಾರಕ್ಕೆ ನಾವು ಇಂದು ಬೆಲೆ ತೆರುತ್ತಿದ್ದೇವೆ. ಈಗ, ನಾವು ಎರಡು ಸುರಂಗ ರಸ್ತೆಗಳನ್ನು ಯೋಜಿಸಿದ್ದೇವೆ - ಪೂರ್ವದಿಂದ ಪಶ್ಚಿಮಕ್ಕೆ 17 ಕಿ.ಮೀ ಉದ್ದ ಮತ್ತು ಉತ್ತರದಿಂದ ದಕ್ಷಿಣಕ್ಕೆ 23 ಕಿ.ಮೀ ಉದ್ದ. ಮೊದಲ ಹಂತದ ಟೆಂಡರ್‌ಗಳನ್ನು ಶೀಘ್ರದಲ್ಲೇ ಕರೆಯಲಾಗುವುದು.
ಸಂಚಾರ ದಟ್ಟಣೆಯನ್ನು ಮತ್ತಷ್ಟು ಕಡಿಮೆ ಮಾಡಲು ಮಳೆನೀರಿನ ಚರಂಡಿಗಳ ಉದ್ದಕ್ಕೂ ಡಬಲ್ ಡೆಕ್ಕರ್ ಫ್ಲೈಓವರ್‌ಗಳು ಮತ್ತು ಅಗಲವಾದ ಬಫರ್ ರಸ್ತೆಗಳನ್ನು ನಿರ್ಮಿಸುವ ಯೋಜನೆಗಳನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಬಹಿರಂಗಪಡಿಸಿದರು
ಹಾಗೆಯೇ ಹೊಸ ಮೆಟ್ರೋ ಮಾರ್ಗಗಳನ್ನು ಅಭಿವೃದ್ಧಿಪಡಿಸುವಲ್ಲೆಲ್ಲಾ ನಾವು ಡಬಲ್ ಡೆಕ್ಕರ್ ಫ್ಲೈಓವರ್‌ಗಳನ್ನು ಯೋಜಿಸುತ್ತಿದ್ದೇವೆ. ಬಿಬಿಎಂಪಿ ಮತ್ತು ಬಿಎಂಆರ್‌ಸಿಎಲ್ ವೆಚ್ಚವನ್ನು ಸಮಾನವಾಗಿ ಹಂಚಿಕೊಳ್ಳುತ್ತವೆ. ಡಬಲ್ ಡೆಕ್ಕರ್ ಫ್ಲೈಓವರ್‌ನ ಒಂದು ಕಿಲೋಮೀಟರ್ ನಿರ್ಮಿಸಲು 120 ಕೋಟಿ ವೆಚ್ಚವಾಗುತ್ತದೆ ಮತ್ತು ಈ ಯೋಜನೆಗೆ ನಾವು 9,000 ಕೋಟಿ ಹಂಚಿಕೆ ಮಾಡಿದ್ದೇವೆ ಎಂದು ಅವರು ತಮ್ಮ ಕಚೇರಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿಯನ್ನು ತಿಳಿಸಿದ್ದಾರೆ.
ನಗರದಲ್ಲಿ ಹೆಚ್ಚುವರಿಯಾಗಿ, ಸಂಚಾರವನ್ನು ಸುಗಮಗೊಳಿಸಲು ಮಳೆನೀರಿನ ಚರಂಡಿಗಳ ಉದ್ದಕ್ಕೂ 50 ಅಡಿ ಅಗಲದ 300 ಕಿ.ಮೀ. ಉದ್ದದ ಬಫರ್ ರಸ್ತೆಗಳನ್ನು ನಿರ್ಮಿಸಲಾಗುವುದು, ಈ ಉಪಕ್ರಮಕ್ಕಾಗಿ 3,000 ಕೋಟಿ ಮೀಸಲಿಡಲಾಗಿದೆ ಎಂದು ಮಾಹಿತಿಯನ್ನು ತಿಳಿಸಿದ್ದರು.
ನಾವು ಟಿಡಿಆರ್‌ಗಳನ್ನು ನೀಡುವ ಮೂಲಕ ರಸ್ತೆಗಳನ್ನು ನಿರ್ಮಿಸುತ್ತಿದ್ದೇವೆ. ಹೆಬ್ಬಾಳದಿಂದ ಹೆಣ್ಣೂರುವರೆಗಿನ 7.8 ಕಿ.ಮೀ ರಸ್ತೆಗೆ ಅಧಿಸೂಚನೆ ಹೊರಡಿಸಲಾಗಿದೆ. ಬೆಂಗಳೂರಿನಲ್ಲಿ ಒಟ್ಟಾರೆಯಾಗಿ 320 ಕಿ.ಮೀ ಹೊಸ ರಸ್ತೆಗಳು ನಿರ್ಮಾಣ ಹಂತದಲ್ಲಿವೆ ಎಂದು ಅವರು ಹೇಳಿದರು.
ಇದಲ್ಲದೆ, 1,682 ಕಿ.ಮೀ ರಸ್ತೆಗಳ ವೈಟ್-ಟಾಪಿಂಗ್‌ಗಾಗಿ 9,000 ಕೋಟಿ ಹಂಚಿಕೆ ಮಾಡುವುದಾಗಿ ಸಹ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಘೋಷಿಸಿದರು. ಇದಲ್ಲದೇ ನಾವು 850 ಕಿ.ಮೀ. ಮಳೆನೀರು ಚರಂಡಿಗಳನ್ನು ನಿರ್ಮಿಸಲು ವಿಶ್ವಬ್ಯಾಂಕ್‌ನಿಂದ 2,000 ಕೋಟಿ ಸಾಲವನ್ನು ಪಡೆದುಕೊಂಡಿದ್ದೇವೆ. ಇದರಲ್ಲಿ 480 ಕಿ.ಮೀ. ಈಗಾಗಲೇ ಪೂರ್ಣಗೊಂಡಿದೆ ಎಂದು ಹೇಳಿದ್ದರು.


Click it and Unblock the Notifications