ವಾಹನ ಸವಾರರಿಗೆ ಸಿಹಿ ಸುದ್ದಿ..ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಆರಂಭ ಯಾವಾಗ?BMRCLನಿಂದ ದೊಡ್ಡಅಪ್ಡೇಟ್‌

ವಾಹನ ಸವಾರರಿಗೆ ಸಿಹಿ ಸುದ್ದಿ...ಬೆಂಗಳೂರಿನ ಸವಾರರಿಗೆ ದೊಡ್ಡ ತಲೆನೋವು ಆಗಿರುವ ಟಾಫ್ರಿಕ್‌ ಸಮಸ್ಸೆಗೆ ಶ್ರೀಘ್ರವೇ ತೆರೆ ಬೀಳಲಿದೆ. ಹೌದು, ದಕ್ಷಿಣ ಭಾರತದ ಮೊದಲ ಡಬಲ್ ಡೆಕ್ಕರ್ ಫ್ಲೈ ಓವರ್‌ನ ನಿರ್ಮಾಣ ಮಾಡಲಾಗಿದೆ.ರಾಗಿಗುಡ್ಡ ಸಿಲ್ಕ್ ಬೋರ್ಡ್ ಜಂಕ್ಷನ್‌ನ ಎರಡೂ ಬದಿ ಮಾರ್ಗವನ್ನು ಈ ವರ್ಷದ ಮಧ್ಯ ಭಾಗದಲ್ಲಿ ಆರಂಭ ಮಾಡುವ ಸಾಧ್ಯತೆ ಇದೆ.

ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ರಾಗಿಗುಡ್ಡ ನಡುವಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ 2025 ರ ಮಧ್ಯಭಾಗದಲ್ಲಿ ಆರಂಭವಾಗಲಿದ್ದು, ಸಂಚಾರ ದಟ್ಟಣೆಯ ಸಮಸ್ಸೆ ಇಲ್ಲದೇ ವಾಹನ ಸವಾರು ಸಂಚಾರ ಮಾಡಬಹುದು BMRCL ಹೇಳಿದೆ.

ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಆರಂಭ ಯಾವಾಗ?

ಈ ಫ್ಲೈಓವರ್, ಎರಡು ಮಹತ್ವಪೂರ್ಣ ರಸ್ತೆಯ ಸಂಪರ್ಕಿಸುವುದರಿಂದ,ನಗರದಲ್ಲಿ ಸಂಚಾರ ದಟ್ಟಣೆಗೆ ಕಡಿವಾಣವಾಗಬಹುದು. ಇದರಿಂದ ಸಿಲ್ಕ್ ಬೋರ್ಡ್, ಪಾರ್ಕ್‌ಸ್ಟ್ರೀಟ್, ವಿಕ್ಟೋ ಲೇಔಟ್ ಸೇರಿದಂತೆ ಅನೇಕ ಪ್ರಮುಖ ಸ್ಥಳಗಳಿಗೆ ಬೇಗನೇ ತಲುಪುಲು ಸಾದ್ಯವಾಗುತ್ತದೆ.

2024ರ ಜುಲೈನಲ್ಲಿ ಬಿಎಂಆರ್‌ಸಿಎಲ್ (ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್), ರಾಗಿಗುಡ್ಡ-ಸಿಲ್ಕ್‌ ಬೋರ್ಡ್‌ ಜಂಕ್ಷನ್‌ವರೆಗೆ ಡಬಲ್ ಡೆಕ್ಕರ್ ಫ್ಲೈಓವರ್‌ನ ಒಂದು ಭಾಗವನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಿದೆ.ಇದರಿಂದ ಬೆಂಗಳೂರು ನಗರದಲ್ಲಿ ಸಂಚಾರ ಸುಗಮಗೊಳಿಸುವ ದೃಷ್ಠಿಯಲ್ಲಿ ಒಂದು ಮಹತ್ವದ ಹೆಜ್ಜೆಯನ್ನು ಬಿಎಂಆರ್‌ಸಿಎಲ್ ಇಟ್ಟಿದೆ ಜನರ ದಟ್ಟಣೆ ಕಡಿಮೆಯಾಗಿದೆ.

ಈ ಫ್ಲೈಓವರ್‌ನ ಸಿಲ್ಕ್‌ ಬೋರ್ಡ್‌ ಜಂಕ್ಷನ್- ರಾಗಿಗುಡ್ಡ ನಡುವೆ ಕೇವಲ ಒಂದು ಭಾಗ ಮಾತ್ರ ಸಂಚಾರಕ್ಕೆ ಮುಕ್ತವಾಗಿದೆ, ಆದರೆ ಇನ್ನೂ ಪೂರ್ಣ ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿಲ್ಲ. BMRC ಅಧಿಕಾರಿಗಳು ತಿಳಿಸಿದ್ದಾರೆ. ಈ ಮಾರ್ಗವು 2024ರ ಜೂನ್ ಅಂತ್ಯ ಅಥವಾ ಜುಲೈನಲ್ಲಿ ಮೊದಲೇ ವಾಹನ ಸಂಚಾರವನ್ನು ಆರಂಭ ಮಾಡಬಹುದು.
ಬಿಎಂಆರ್‌ಸಿಎಲ್ ಈಗ ಎಚ್‌ಎಸ್‌ಆರ್ ಲೇಔಟ್‌ನಿಂದ ಬಿಟಿಎಂ ಲೇಔಟ್‌ಗೆ ರ‍್ಯಾಂಪ್ ನಿರ್ಮಿಸಲು ಅಗತ್ಯವಿರುವ ಹೆಚ್ಚಿನ ಪಿಯರ್‌ಗಳನ್ನು ನಿರ್ಮಿಸಿದೆ. ರಾಗಿಗುಡ್ಡ ಕಡೆಗೆ ಪ್ರಯಾಣಿಸುವವರ ಅನುಕೂಲಕ್ಕಾಗಿ ಹೊಸ ರ‍್ಯಾಂಪ್ ಅನ್ನು ಸಿಲ್ಕ್ ಬೋರ್ಡ್ ಮೆಟ್ರೋ ನಿಲ್ದಾಣದಲ್ಲಿ (ಹಳದಿ ರೇಖೆಯ ಭಾಗವಾಗಿ ನಿರ್ಮಿಸಲಾಗಿದೆ) ರಸ್ತೆ ಫ್ಲೈಓವರ್‌ನೊಂದಿಗೆ ಸಂಯೋಜಿಸಲಾಗುವುದು ಮತ್ತು ಬಿಟಿಎಂ ಲೇಔಟ್ ಕಡೆಗೆ ಪ್ರಯಾಣಿಸುವವರಿಗೆ ಡೌನ್ ರ‍್ಯಾಂಪ್ ಅನ್ನು ಒದಗಿಸಲಾಗುವುದು.

ರ‍್ಯಾಂಪ್ ನಿರ್ಮಿಸಲು ಅಗತ್ಯವಿರುವ ನಾಲ್ಕರಿಂದ ಐದು ಕಂಬಗಳನ್ನು ಹೊರತುಪಡಿಸಿ, ಉಳಿದ ಕಂಬಗಳನ್ನು ಸುಮಾರು ಒಂದು ಕಿಲೋಮೀಟರ್ ವಿಸ್ತಾರದಲ್ಲಿ ಪೂರ್ಣಗೊಳಿಸಲಾಗಿದೆ. ರ‍್ಯಾಂಪ್ ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಹೊಸದಾಗಿ ನಿರ್ಮಿಸಲಾದ ರ‍್ಯಾಂಪ್ (ಹೊಸೂರು ರಸ್ತೆಯನ್ನು ಸಂಪರ್ಕಿಸುವ) ಮೇಲೆ ಹಾದುಹೋಗುವುದರಿಂದ, ಎಚ್‌ಎಸ್‌ಆರ್ ಲೇಔಟ್‌ನಿಂದ ಬಿಟಿಎಂ ಲೇಔಟ್‌ಗೆ ರ‍್ಯಾಂಪ್ ನಿರ್ಮಿಸಲು ನಾವು 24 ಮೀಟರ್ ಕಂಬಗಳನ್ನು ನಿರ್ಮಿಸಿದೆ.

ಬಿಟಿಎಂ ಲೇಔಟ್ ಬದಿಯಲ್ಲಿರುವ ಅಸ್ತಿತ್ವದಲ್ಲಿರುವ ರಸ್ತೆ ಫ್ಲೈಓವರ್‌ನೊಂದಿಗೆ ಸಂಯೋಜಿಸಿದ ನಂತರ, ವಾಹನ ಸವಾರರು ಟ್ರಾಫಿಕ್ ಸಿಗ್ನಲ್ ಅನ್ನು ಎದುರಿಸದೆ ರಾಗಿಗುಡ್ಡ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಸಾಧ್ಯವಾಗುತ್ತದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

19 ಕಿಮೀ ಹಳದಿ ಮಾರ್ಗದ ಭಾಗವಾಗಿ ಬಿಎಂಆರ್‌ಸಿಎಲ್ ಡಬಲ್ ಡೆಕ್ಕರ್ ಅನ್ನು ನಿರ್ಮಿಸಿದೆ. ಮೆಟ್ರೋ ಬೋಗಿಗಳ ಲಭ್ಯತೆಯಿಲ್ಲದ ಕಾರಣ ಎಲೆಕ್ಟ್ರಾನಿಕ್ಸ್ ಸಿಟಿಯನ್ನು ಸಂಪರ್ಕಿಸುವ ಮಾರ್ಗವನ್ನು ತೆರೆಯುವಲ್ಲಿ ಅತಿಯಾದ ವಿಳಂಬವಾಗಿದೆ.

ಡಬಲ್ ಡೆಕ್ಕರ್ ಫ್ಲೈ ಓವರ್‌ನ ಎರಡೂ ಬದಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರೆ ಸಿಲ್ಕ್ ಬೋರ್ಡ್ ಜಂಕ್ಷನ್ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಿಗಲಿದೆ. ಈಗ ಸಿಲ್ಕ್ ಬೋರ್ಡ್ ಜಂಕ್ಷನ್ ಸಿಗ್ನಲ್‌ನಲ್ಲಿ ಕಾಯುವ ಬದಲು ಹೆಚ್‌ಎಸ್ಆರ್ ಲೇಔಟ್, ಹೊಸೂರು ರಸ್ತೆ ಕಡೆಗೆ ಡಬಲ್ ಡೆಕ್ಕರ್ ಫ್ಲೈ ಓವರ್ ಮೂಲಕ ಸಾಗಬಹುದು.

ಇನ್ನೂ ಡಬಲ್ ಡೆಕ್ಕರ್ ಫ್ಲೈ ಓವರ್‌ನ ಮತ್ತೊಂದು ಬದಿಯೂ ವಾಹನ ಸಂಚಾರ ಆರಂಭವಾದರೆ ಮಾರೇನಹಳ್ಳಿ ಬಳಿ ಸಂಚಾರ ದಟ್ಟಣೆ ಉಂಟಾಗಬಹುದು.ಇದರಿಂದಾಗಿ ಕನಕಪುರ ರಸ್ತೆ, ಜಯದೇವ ಆಸ್ಪತ್ರೆ ಕಡೆಗೆ ಹೆಚ್ಚಿನ ವಾಹನ ದಟ್ಟಣೆ ಉಂಟಾಗುವ ನಿರೀಕ್ಷೆ ಕೂಡ ಇದೆ.

ಡಬಲ್ ಡೆಕ್ಕರ್ ತೆರೆಯುವುದರಿಂದ ಎಚ್‌ಎಸ್‌ಆರ್ ಲೇಔಟ್ ಮತ್ತು ಹೊಸೂರು ರಸ್ತೆಯ ಕಡೆಗೆ ಹೋಗುವ ಜನರು ಸಿಲ್ಕ್ ಬೋರ್ಡ್ ಫ್ಲೈಓವರ್‌ನ ಕೆಳಗಿನ ಟ್ರಾಫಿಕ್ ಸಿಗ್ನಲ್‌ನಿಂದ ತಪ್ಪಿಸಿಕೊಳ್ಳಲು ಸಹಾಯವಾಗಬಹುದು. ವಾಹನ ಚಾಲಕರು ಎದುರು ಬದಿಯಲ್ಲಿರುವ ಡಬಲ್ ಡೆಕ್ಕರ್ ಫ್ಲೈಓವರ್ ಅನ್ನು ಬಳಸಲು ಪ್ರಾರಂಭಿಸಿದ ನಂತರ, ದಟ್ಟಣೆಯಲ್ಲಿ ಮತ್ತಷ್ಟು ಇಳಿಕೆಯಾಗುವ ಸಾದ್ಯತೆ ಇದೆ.

ಹೊಸೂರು ರಸ್ತೆಯಿಂದ ಎಚ್‌ಎಸ್‌ಆರ್ ಲೇಔಟ್ ಕಡೆಗೆ ಬರುವ ವಾಹನ ಚಾಲಕರು ಮತ್ತು ಎಚ್‌ಎಸ್‌ಆರ್ ಲೇಔಟ್ ಕಡೆಯಿಂದ ಮಡಿವಾಳ ಕಡೆಗೆ ಹೋಗುವ ವಾಹನ ಚಾಲಕರು ಟ್ರಾಫಿಕ್ ಸಿಗ್ನಲ್‌ಗಾಗಿ ಕಾಯಬೇಕಾಗುತ್ತದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡಬಲ್ ಡೆಕ್ಕರ್ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದ ನಂತರ, ಸಿಲ್ಕ್ ಬೋರ್ಡ್‌ನಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಂಚಾರ ದಟ್ಟಣೆಯನ್ನು ರಾಗಿಗುಡ್ಡ ಮೆಟ್ರೋ ನಿಲ್ದಾಣಕ್ಕೆ ಸ್ಥಳಾಂತರಿಸಲಾಗುವುದು, ಮಾರೇನಹಳ್ಳಿ ರಸ್ತೆಯ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನದ ಬಳಿಯ ಜಂಕ್ಷನ್‌ಗಳು ಮತ್ತು ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣದ ಬಳಿಯ ಜಂಕ್ಷನ್ ಮತ್ತು ಇತರವುಗಳಿಗೆ ಸ್ಥಳಾಂತರಗೊಳ್ಳುವ ಸಾದ್ಯತೆ ಇದೆ.

ಖಾಸಗಿ ವಾಹನ ಬಳಕೆದಾರರು ನಮ್ಮ ಮೆಟ್ರೋ ಸೇವೆಗೆ ಬದಲಾಯಿಸುವ ಸಾಧ್ಯತೆ ಇರುವುದರಿಂದ ಹಳದಿ ಮಾರ್ಗವನ್ನು ತೆರೆಯುವುದು ನಿರ್ಣಾಯಕವಾಗಿದೆ ಎಂದು ಅಧಿಕಾರಿ ಹೇಳಿದರು.

ಹಳದಿ ಮಾರ್ಗ ಸಂಚಾರಕ್ಕೆ ಒಪ್ಪಿಗೆ ಸಿಕ್ಕರೂ ಸಹ ತಕ್ಷಣ ರೈಲು ಸಂಚಾರ ಆರಂಭಿಸಲು ರೈಲುಗಳು ಕೊರತೆ ಇದೆ. ಏಪ್ರಿಲ್ ಅಂತ್ಯ ಅಥವ ಮೇ ತಿಂಗಳಿನಲ್ಲಿ ನಮ್ಮ ಮೆಟ್ರೋ ರೈಲು ಸಂಚಾರ ನಡೆಸಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+