Bengaluru traffic police: ಇಂದಿನಿಂದ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ಬೆಂಗಳೂರು, ಜುಲೈ 9: ಪಾಣತ್ತೂರು ರೈಲ್ವೆ ಸೇತುವೆ ಅಂಡರ್‌ಪಾಸ್‌ನಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಯಿಂದಾಗಿ ಬೆಂಗಳೂರು ಪೊಲೀಸರು ಸಂಚಾರ ಸಲಹೆಯನ್ನು ಹೊರಡಿಸಿ ನಿರ್ಬಂಧಗಳನ್ನು ವಿಧಿಸಿದ್ದಾರೆ.

ಜುಲೈ 9, 2024 ರಿಂದ ಜುಲೈ 12, 2024 ರವರೆಗೆ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿರ್ಬಂಧಿಸಲಾಗುವುದು ಎಂದು ಬೆಂಗಳೂರು ಪೊಲೀಸರು ಸಲಹೆಯಲ್ಲಿ ತಿಳಿಸಿದ್ದಾರೆ.

Bengaluru: ಇಂದಿನಿಂದ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ದಿನಾಂಕ 9-7-2024ರ ಮಧ್ಯರಾತ್ರಿಯಿಂದ ದಿನಾಂಕ 12-7-2024 ರವರೆಗೆ ವೈಟ್‌ಫೀಲ್ಡ್‌ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯ ವಣತ್ತೂರು ರೈಲ್ವೇ ಬಿಡ್ಜ್ರ್‌ ಬಳಿ ರೈಲ್ವೆ ಇಲಾಖೆಯ ವತಿಯಿಂದ ಅಂಡರ್‌ಪಾಸ್‌ ನಿರ್ಮಾಣ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಪಣತ್ತೂರು ದಿಣ್ಣೆಯಿಂದ ಪಣತ್ತೂರು ರೈಲ್ವೆ ಸೇತುವೆವರೆಗೆ ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ವಾಹನಗಳ ಸಂಚಾರಕ್ಕೆ ಪರ್ಯಾಯಯ ಮಾರ್ಗ:

ಪಣತ್ತೂರು ದಿಣ್ಣೆ ಕಡೆಯಿಂದ ಪಣತ್ತೂರು ಮತ್ತು ಕುಂದಲಹಳ್ಳಿ ಕಡೆಗೆ ಹೋಗುವ ವಾಹನ ಸವಾರರು ಗುಂಜೂರು ಪಾಳ್ಯ ರಸ್ತೆಯಿಂದ ಸಿಲ್ವರ್‌ ಓಕ್‌ ರಸ್ತೆ ಮುಖಾಂತರ ಬಳಗೆರೆ ಮುಖ್ಯ ರಸ್ತೆಯನ್ನು ಬಳಸಿ ಪಣತ್ತೂರು ಹಾಗೂ ಕುಂದಲಹಳ್ಳಿ ಕಡೆಗೆ ಸಂಚರಿಸಬಹುದಾಗಿದೆ.

ಪಣತ್ತೂರು ಕಡೆಯಿಂದ ಪಣತ್ತೂರು ದಿಣ್ಣೆ ಕಡೆಗೆ ಹೋಗುವ ಸವಾರರು ಬಳಗೆರೆ ಮುಖ್ಯರಸ್ತೆಯಿಂದ ಸಿಲ್ವರ್‌ ಓಕ್‌ ಮುಖಾಂತರ ಗುಂಜೂರು ಪಾಳ್ಯ ರಸ್ತೆಯನ್ನು ಬಳಸಿ ಪಣತ್ತೂರು ದಿಣ್ಣೆ ಕಡೆಗೆ ಸಂಚರಿಸಬಹುದು ಎಂದು ನಗರ ಸಂಚಾರಿ ಪೊಲೀಸ್‌ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+