ಬೆಂಗಳೂರು, ಜನವರಿ 09: ಜನವರಿ 16 ರಂದು ರಾತ್ರಿ 11 ರಿಂದ ಜನವರಿ 19 ರ ಬೆಳಿಗ್ಗೆ 11 ರವರೆಗೆ ಎಲ್ಲಾ ವಾಹನಗಳ ಸಂಚಾರಕ್ಕಾಗಿ ಪೀಣ್ಯ ಮೇಲ್ಸೇತುವೆಯನ್ನು ಮುಚ್ಚಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಯೋಜಿಸಿದೆ. ಈ ನಿಟ್ಟಿನಲ್ಲಿ ತುಮಕೂರು ರಸ್ತೆ ಮುಂದಿನ ವಾರ ಬೃಹತ್ ವಾಹನ ದಟ್ಟಣೆ ಉಂಟಾಗಲಿದೆ ಎಂದು ಡಿಎಚ್ ವರದಿ ಮಾಡಿದೆ.
15-ಮೀಟರ್ ಅಗಲದ, 4.2-ಕಿಮೀ-ಉದ್ದದ ಫ್ಲೈಓವರ್ ಪೀಣ್ಯದಲ್ಲಿ ಪ್ರಾರಂಭವಾಗುತ್ತದೆ. ಇದು ತುಮಕೂರು ರಸ್ತೆಯ ನಾಗಸಂದ್ರದಲ್ಲಿ ಕೊನೆಗೊಳ್ಳುತ್ತದೆ, ಇದು ಎಲ್ಲಾ ಉತ್ತರ ದಿಕ್ಕಿನ ಸಂಚಾರಕ್ಕೆ ನಿರ್ಣಾಯಕ ಸಾರಿಗೆ ಕೇಂದ್ರವಾಗಿದೆ. ಅದರ ಮೂರು ಸ್ಪ್ಯಾನ್‌ಗಳಲ್ಲಿ (ಎರಡು ಕಂಬಗಳ ನಡುವಿನ ಅಂತರ) ಪ್ರಿಸ್ಟ್ರೆಸ್ಡ್ ಕೇಬಲ್‌ಗಳು ತುಕ್ಕು ಹಿಡಿದಿರುವುದರಿಂದ ಅದನ್ನು ಡಿಸೆಂಬರ್ 2021 ರಲ್ಲಿ ಸಂಚಾರಕ್ಕಾಗಿ ಮುಚ್ಚಲಾಗಿತ್ತು.

ಆದರೆ ಫೆಬ್ರವರಿ 2022 ರಲ್ಲಿ ಅಧಿಕಾರಿಗಳು ಫ್ಲೈಓವರ್ ಮೇಲೆ ಲಘು ಮೋಟಾರು ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದರು. ಬಸ್ಸುಗಳು ಮತ್ತು ಟ್ರಕ್‌ಗಳ ಸಂಚಾರವನ್ನು ನಿರ್ಬಂಧಿಸಿದರು. 2023 ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 38.5-ಕೋಟಿ ರೂ. ರಿಪೇರಿ ಕಾರ್ಯವನ್ನು ಪ್ರಾರಂಭಿಸಿತು. ಇದು ಪ್ರತಿ ಸ್ಪ್ಯಾನ್‌ನಲ್ಲಿ ಎರಡು ಕೇಬಲ್‌ಗಳನ್ನು ಹೆಚ್ಚುವರಿ ಸ್ಲಾಟ್‌ಗಳಾಗಿ ಸೇರಿಸುವುದನ್ನು ಒಳಗೊಂಡಿರುತ್ತದೆ ಮತ್ತು ಫ್ಲೈಓವರ್ ಅನ್ನು ಬಲಪಡಿಸಲು ಒತ್ತು ನೀಡಿತು. ಮೇಲ್ಸೇತುವೆಯಲ್ಲಿ ಒಟ್ಟು 120 ಸ್ಪ್ಯಾನ್‌ಗಳಿವೆ.
ಕಾಮಗಾರಿ ಪೂರ್ಣಗೊಂಡಿದ್ದು, ಪ್ರಿಸ್ಟ್ರೆಸ್ಡ್ ಕೇಬಲ್‌ಗಳ ಶಕ್ತಿಯನ್ನು ನಿರ್ಣಯಿಸಲು ನಾವು ಲೋಡ್ ಪರೀಕ್ಷೆಗಳನ್ನು ನಡೆಸಬೇಕಾಗಿದೆ. ಲೋಡ್ ಪರೀಕ್ಷೆಯ ಸಮಯದಲ್ಲಿ ತಲಾ 32 ಟನ್‌ಗಳನ್ನು ಹೊತ್ತ ಎಂಟು ಟ್ರಕ್‌ಗಳನ್ನು 48 ಗಂಟೆಗಳಿಗೂ ಹೆಚ್ಚು ಕಾಲ ಫ್ಲೈಓವರ್‌ನಲ್ಲಿ ಓಡಿಸಲಾಗುತ್ತದೆ. ನಾವು ಸಂಪೂರ್ಣ ಮೇಲ್ಸೇತುವೆಯನ್ನು ಪರಿಶೀಲಿಸುವುದಿಲ್ಲ. ಅದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ನಾವು ಎರಡು ಸ್ಪ್ಯಾನ್‌ಗಳನ್ನು ಮಾತ್ರ ಪರಿಶೀಲಿಸುತ್ತೇವೆ. ಲೋಡ್ ಪರೀಕ್ಷೆಗಾಗಿ 105-106 ಮತ್ತು 117-118 ಕಂಬಗಳನ್ನು ಸಂಪರ್ಕಿಸುವ ವ್ಯಾಪ್ತಿಯನ್ನು NHAI ಗುರುತಿಸಿದೆ ಎಂದು ಜಯಕುಮಾರ್ ತಿಳಿಸಿದರು.
ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊ.ಚಂದ್ರ ಕಿಶನ್ ಜೆಎಂ ನೇತೃತ್ವದ ನಾಲ್ವರು ಸದಸ್ಯರ ತಜ್ಞರ ಸಮಿತಿಗೆ ಪರೀಕ್ಷಾ ವರದಿಯನ್ನು ಸಲ್ಲಿಸಲಾಗುವುದು. ಸಮಿತಿಯ ಶಿಫಾರಸುಗಳನ್ನು ಎನ್‌ಎಚ್‌ಎಐ ಪ್ರಧಾನ ಕಚೇರಿಗೆ ಕಳುಹಿಸಲಾಗುವುದು, ಎಲ್ಲಾ ವಾಹನಗಳಿಗೆ ಫ್ಲೈಓವರ್ ಅನ್ನು ಯಾವಾಗ ತೆರೆಯಬೇಕು ಎಂಬುದನ್ನು ನಿರ್ಧರಿಸುತ್ತದೆ ಎಂದು ಜಯಕುಮಾರ್ ಹೇಳಿದರು.
ಪ್ರೊ.ಕಿಶನ್ ಮಾತನಾಡಿ, ತುಕ್ಕು ಹಿಡಿದಿರುವುದರಿಂದ ಕೇಬಲ್‌ಗಳು ಒಡೆದುಹೋಗಿವೆ, ಇದು ತೇವಾಂಶ ಮತ್ತು ಸೂರ್ಯನ ಬೆಳಕಿನಿಂದಾಗಿ ಹೀಗಾಗಿದೆ. ಸಮಿತಿಯು ಕೇಬಲ್‌ಗಳಿಗೆ (ಗ್ಯಾಲ್ವನೈಸಿಂಗ್, ಗ್ರೀಸ್, ಎಪಾಕ್ಸಿ ಕೋಟಿಂಗ್ ಮತ್ತು ಶೀಥಿಂಗ್) ರಕ್ಷಣೆಯ ನಾಲ್ಕು ಪದರಗಳನ್ನು ನೀಡಲು ಸೂಚಿಸಿದೆ ಎಂದು ಹೇಳಿದ್ದಾರೆ.
ಸಮಿತಿಯು ಸೂಚಿಸಿದಂತೆ ಹೆದ್ದಾರಿ ಪ್ರಾಧಿಕಾರ ಮುಂದಿನ ಆರು ತಿಂಗಳಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ 1,243 ಪ್ರಿಸ್ಟ್ರೆಸ್ಡ್ ಕೇಬಲ್‌ಗಳನ್ನು ಬದಲಾಯಿಸುತ್ತದೆ. ಭವಿಷ್ಯದಲ್ಲಿ ತುಕ್ಕು ಹಿಡಿಯದಂತೆ ಆ ಕೇಬಲ್‌ಗಳನ್ನು ತೆಗೆದು ರಿಫಿಕ್ಸ್ ಮಾಡುತ್ತೇವೆ. ಕಾಮಗಾರಿಯಿಂದ ಸಂಚಾರಕ್ಕೆ ತೊಂದರೆಯಾಗುವುದಿಲ್ಲ ಎಂದು ಜಯಕುಮಾರ್ ತಿಳಿಸಿದರು.


Click it and Unblock the Notifications