ಭಾರ್ತಿ ಏರ್ ಟೆಲ್, ಭಾರ್ತಿ ಟೆಲಿಕಾಂ ಪ್ರಮೋಟರ್ (ಪ್ರವರ್ತಕರು) 1 ಬಿಲಿಯನ್ ಅಮೆರಿಕನ್ ಡಾಲರ್ (7500 ಕೋಟಿ ರುಪಾಯಿಗೂ ಹೆಚ್ಚು) ಮೌಲ್ಯದ ಷೇರಿನ ಪಾಲನ್ನು ಮಂಗಳವಾರ ಬ್ಲಾಕ್ ಡೀಲ್ ಮೂಲಕ ಮಾರಾಟ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರತಿ ಷೇರಿಗೆ 558 ರುಪಾಯಿಯಂತೆ, 2.75 ಪರ್ಸೆಂಟ್ ಷೇರನ್ನು ಜೆ.ಪಿ. ಮೋರ್ಗನ್ ಇಂಡಿಯಾ ಪ್ರೈ. ಲಿಮಿಟೆಡ್ ಮೂಲಕ ಮಾರಾಟ ಮಾಡಲಾಗುತ್ತದೆ.
"ಇದರಿಂದ ಸಾಲದ ಮರುಪಾವತಿಯಾಗುತ್ತದೆ, ಈ ವ್ಯವಹಾರದ ನಂತರ ಪ್ರಮೋಟರ್ ಹಂತದ ಸಾಲವು ಶೂನ್ಯವಾಗುತ್ತದೆ" ಎಂದು ಹೇಳಲಾಗಿದೆ. ಸದ್ಯಕ್ಕೆ ಪ್ರವರ್ತಕರ ಷೇರಿನ ಪ್ರಮಾಣ 58.98 ಪರ್ಸೆಂಟ್ ಇದೆ. ಈಗ ಪಾಲನ್ನು ಮಾರಾಟ ಮಾಡಿದ ನಂತರ ಆ ಪ್ರಮಾಣವು 56.23 ಪರ್ಸೆಂಟ್ ಗೆ ಕುಸಿಯುತ್ತದೆ. ಕಳೆದ ಮೂರು ವರ್ಷಗಳಿಂದ ಭಾರ್ತಿ ಏರ್ ಟೆಲ್ ವಿವಿಧ ಬಗೆಯಲ್ಲಿ ಹಣ ಸಂಗ್ರಹ ಮಾಡುತ್ತಾ ಬರುತ್ತಿದೆ.
ಎಜಿಆರ್ (ಅಡ್ಜಸ್ಟಡ್ ಗ್ರಾಸ್ ರೆವೆನ್ಯೂ) 35,586 ಕೋಟಿ ರುಪಾಯಿ ಪಾವತಿ ಮಾಡುವಂತೆ ಕಳೆದ ಅಕ್ಟೋಬರ್ ನಲ್ಲಿ ಸುಪ್ರೀಂ ಕೋರ್ಟ್ ಭಾರ್ತಿ ಏರ್ ಟೆಲ್ ಗೆ ಆದೇಶಿಸಿತ್ತು. ಕಳೆದ ಡಿಸೆಂಬರ್ ನಲ್ಲಿ ದರ ಏರಿಕೆಯಿಂದಾಗಿ ಜನವರಿ- ಮಾರ್ಚ್ ತ್ರೈ ಮಾಸಿಕದ ಫಲಿತಾಂಶ ಸುಧಾರಣೆ ಆಗಿದೆ.

ಭಾರ್ತಿ ಏರ್ ಟೆಲ್ ಷೇರು ಶುಕ್ರವಾರದ ದಿನಾಂತ್ಯಕ್ಕೆ (ಮೇ 22, 2020) ಪ್ರತಿ ಷೇರಿಗೆ 593 ರುಪಾಯಿಯಂತೆ ವ್ಯವಹಾರ ಮುಗಿಸಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ



Click it and Unblock the Notifications