For Quick Alerts
ALLOW NOTIFICATIONS  
For Daily Alerts

ಏರ್ ಟೆಲ್ ಪೋಸ್ಟ್ ಪೇಯ್ಡ್ ಬಳಕೆದಾರರಿಗೆ ವೇಗದ 4G ಡೇಟಾ ಸೇವೆ

|

ಭಾರ್ತಿ ಏರ್ ಟೆಲ್ ನಿಂದ ಆಯ್ದ ಪೋಸ್ಟ್ ಪೇಯ್ಡ್ ಬಳಕೆದಾರರಿಗೆ ಸೇವೆಗಳನ್ನು ಮೇಲ್ದರ್ಜೆಗೆ ಏರಿಸುವ ಘೋಷಣೆ ಮಾಡಲಾಗಿದೆ. ಈಗ "ಪ್ಲಾಟಿನಂ" ಸೇವೆಯಲ್ಲಿ ಇರುವ ಪೋಸ್ಟ್ ಪೇಯ್ಡ್ ಬಳಕೆದಾರರು ವೇಗದ 4G ಡೇಟಾವನ್ನು ಪಡೆಯಬಹುದು ಎಂದು ಕಂಪೆನಿ ಹೇಳಿಕೊಂಡಿದೆ. "ಪ್ರಯಾರಿಟಿ 4G ನೆಟ್ ವರ್ಕ್" ಅಡಿಯಲ್ಲಿ ಇದನ್ನು ಏರ್ ಟೆಲ್ ಆರಂಭಿಸಿದೆ.

ಪ್ಲಾಟಿನಂ ಮೊಬೈಲ್ ಬಳಕೆದಾರರಿಗೆ ನೆಟ್ ವರ್ಕ್ ನಲ್ಲಿ ಆದ್ಯತೆ ನೀಡಲಾಗುತ್ತದೆ. 499 ರುಪಾಯಿ ಹಾಗೂ ಅದಕ್ಕೆ ಮೇಲ್ಪಟ್ಟ ಪ್ಲಾನ್ ಗಳಾಲ್ಲಿ ಇರುವವರನ್ನು "ಪ್ಲಾಟಿನಂ" ಎಂದು ಗುರುತಿಸಲಾಗುತ್ತಿದೆ. ಏರ್ ಟೆಲ್ ಥ್ಯಾಂಕ್ಸ್ ಅಪ್ಲಿಕೇಷನ್ ನಲ್ಲಿ ಕಸ್ಟಮೈಸ್ಡ್ ಪ್ಲಾಟಿನಂ UI ಸೇರಿದಂತೆ ಇತರ ಅನುಕೂಲಗಳನ್ನು ಒದಗಿಸಲಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

 

ಸಣ್ಣ ಉದ್ಯಮದವರ ಬೆಂಬಲಕ್ಕಾಗಿ ಏರ್‌ಟೆಲ್ ತಂತು ಸುರಕ್ಷಾ ಸಂಬಳ

ಇದರ ಜತೆಗೆ ಉತ್ತಮ ಕಸ್ಟಮರ್ ಕೇರ್ ಹಾಗೂ ಕಾಲ್ ಸೆಂಟರ್ ಮತ್ತು ರೀಟೇಲ್ ಸ್ಟೋರ್ ಗಳಲ್ಲಿ ಪ್ರಾತಿನಿಧ್ಯ ನೀಡಲಾಗುತ್ತದೆ. ಪ್ಲಾಟಿನಂ ಗ್ರಾಹಕರಿಗಾಗಿಯೇ ಸಿಬ್ಬಂದಿ ನೇಮಕ ಮಾಡಲಾಗುತ್ತದೆ. ಆ ಮೂಲಕ ಗ್ರಾಹಕರಿಗೆ ಕಾಯಬೇಕಾದ ಸಮಯ ಕಡಿತ ಆಗುತ್ತದೆ.

ಏರ್ ಟೆಲ್ ಪೋಸ್ಟ್ ಪೇಯ್ಡ್ ಬಳಕೆದಾರರಿಗೆ ವೇಗದ 4G ಡೇಟಾ ಸೇವೆ

ಪ್ರಯಾರಿಟಿ 4G ನೆಟ್ ವರ್ಕ್ ಅನುಭವ ಪಡೆಯಬೇಕು ಎಂದಾದಲ್ಲಿ ಈಗಾಗಲೇ ಇರುವ ಹಾಗೂ ಹೊಸ ಗ್ರಾಹಕರು ಏರ್ ಟೆಲ್ ಪೋಸ್ಟ್ ಪೇಯ್ಡ್ 499 ರುಪಾಯಿ ಹಾಗೂ ಮೇಲ್ಪಟ್ಟ ಪ್ಲಾನ್ ಆರಿಸಿಕೊಳ್ಳಬೇಕು. ಏರ್ ಟೆಲ್ ನಿಂದ ಪ್ರಯಾರಿಟಿ 4G ಸಿಮ್ ಅನ್ನು ಗ್ರಾಹಕರಿಗೆ ಮನೆಗೇ ತಲುಪಿಸಲಾಗುತ್ತದೆ.

English summary

Bharti Airtel Faster 4G Data Offer To Post Paid Users

India's leading telecom operator Bharti Airtel offers faster 4G data offer to postpaid users, who are in the plan of 499 and above.
Company Search
COVID-19