For Quick Alerts
ALLOW NOTIFICATIONS  
For Daily Alerts

ಸರ್ಕಾರಕ್ಕೆ 10,000 ಕೋಟಿ ರುಪಾಯಿ ಪಾವತಿಸಿದ ಭಾರ್ತಿ ಏರ್‌ಟೆಲ್

|

ಬಾಕಿ ಉಳಿಸಿಕೊಂಡಿರುವ ಆದಾಯದ ಹಣವನ್ನು ಬಡ್ಡಿ ಹಾಗೂ ದಂಡ ಸಹಿತವಾಗಿ ಸರ್ಕಾರಕ್ಕೆ ಪಾವತಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆ ಏರ್‌ಟೆಲ್‌ ಸೋಮವಾರ ಮೊದಲ ಹಂತದಲ್ಲಿ 10,000 ಕೋಟಿ ರುಪಾಯಿಯನ್ನು ಸರ್ಕಾರಕ್ಕೆ ಪಾವತಿ ಮಾಡಿದೆ.

ಸುಪ್ರೀಂ ಸಿಡಿಲಿಗೆ ಹೆದರಿದ ಏರ್‌ಟೆಲ್ : ಫೆಬ್ರವರಿ 20ರೊಳಗೆ 10 ಸಾವಿರ ಕೋಟಿ ಪಾವತಿಸುಪ್ರೀಂ ಸಿಡಿಲಿಗೆ ಹೆದರಿದ ಏರ್‌ಟೆಲ್ : ಫೆಬ್ರವರಿ 20ರೊಳಗೆ 10 ಸಾವಿರ ಕೋಟಿ ಪಾವತಿ

ಹೊಂದಾಣಿಕೆಯ ಒಟ್ಟು ಆದಾಯ (AGR) ಕುರಿತಾಗಿ ವೊಡಾಫೋನ್ , ಐಡಿಯಾ ಭಾರ್ತಿ ಏರ್‌ಟೆಲ್ ಸಂಸ್ಥೆಗಳು ಒಟ್ಟಾರೆ 92,000 ಕೋಟಿ ರುಪಾಯಿಯಷ್ಟು ಬಾಕಿ ಮೊತ್ತ ಹಾಗೂ ಬಡ್ಡಿ ಸೇರಿದ ಹಣವನ್ನು ಪಾವತಿಸಬೇಕಾಗಿತ್ತು. ಭಾರ್ತಿ ಏರ್‌ಟೆಲ್ 35,586 ಕೋಟಿ ಹಾಗೂ ತನ್ನ ವ್ಯವಹಾರವನ್ನು ಏರ್‌ಟೆಲ್ ಗೆ ಮಾರಾಟ ಮಾಡಿರುವ ಟಾಟಾ ಟೆಲೆ ಸರ್ವಿಸಸ್ 14 ಸಾವಿರ ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ.

ಸರ್ಕಾರಕ್ಕೆ 10,000 ಕೋಟಿ ರುಪಾಯಿ ಪಾವತಿಸಿದ ಭಾರ್ತಿ ಏರ್‌ಟೆಲ್

ಈ ಕುರಿತಾಗಿ ಮೊದಲ ಹಂತವಾಗಿ ಏರ್‌ಟೆಲ್ 10,000 ಕೋಟಿ ರುಪಾಯಿಯನ್ನು ಸರ್ಕಾರಕ್ಕೆ ಪಾವತಿ ಮಾಡಿದೆ. ಇನ್ನುಳಿದ ಹಣವನ್ನು ಮಾರ್ಚ್ 17ರೊಳಗೆ ಪಾವತಿಸುವುದಾಗಿ ಏರ್ ಟೆಲ್ ಡಿಒಟಿಗೆ ತಿಳಿಸಿದೆ.

ಟೆಲಿಕಾಂ ಕಂಪನಿಗಳು ಬಾಕಿ ಉಳಿಸಿಕೊಂಡಿರುವ ಹೊಂದಾಣಿಕೆ ಮಾಡಿದ ಒಟ್ಟು ವರಮಾನ(ಎಜಿಆರ್‌)ದ ಹಣ ಪಾವತಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ, ಕಂಪನಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ, ಸುಪ್ರೀಂ ಕೋರ್ಟ್ ಆದೇಶವನ್ನೇ ತಡೆ ಹಿಡಿದಿದ್ದ ಕೇಂದ್ರ ಟೆಲಿಕಮ್ಯುನಿಕೇಷನ್ ಇಲಾಖೆಯನ್ನು ಸರ್ವೋಚ್ಛ ನ್ಯಾಯಾಲಯ ಶುಕ್ರವಾರ(ಫೆಬ್ರವರಿ 14)ರಂದು ತೀವ್ರ ತರಾಟೆಗೆ ತೆಗೆದುಕೊಂಡಿತ್ತು.

ಕಂಪನಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ಯಾಕೆ ದಾಖಲಿಸಿಕೊಳ್ಳಬಾರದು ಎಂದೂ ಪ್ರಶ್ನಿಸಿತ್ತು. ಹಣ ಪಾವತಿಸುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶಕ್ಕೆ ತಡೆ ನೀಡಿದ್ದಕ್ಕೆ ದೂರಸಂಪರ್ಕ ಇಲಾಖೆಯ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿತ್ತು. ಇದರಿಂದ ಎಚ್ಚೆತ್ತ ಟೆಲಿಕಮ್ಯುನಿಕೇಷನ್ ಇಲಾಖೆ ಫೆಬ್ರವರಿ 14ರ ಮಧ್ಯರಾತ್ರಿಯೇ ಹಣ ಪಾವತಿಸುವಂತೆ ಆದೇಶಿಸಿತ್ತು. ಇದರ ಮೊದಲ ಭಾಗವಾಗಿ ಏರ್‌ಟೆಲ್ ಹಣ ಡೆಪಾಸಿಟ್ ಮಾಡಿದೆ.

English summary

Bharti Airtel Pays 10000 Crore To The Government

Bharti Airtel monday deposited Rs. 10,000 crore as part of its adjusted gross revenue(AGR) dues to the government
Story first published: Monday, February 17, 2020, 12:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X