ಭಾರತದಲ್ಲಿ ಈಗ ಪೆಟ್ರೋಲ್ ಹಾಗೂ ಡಿಸೈಲ್ ಕಾರ್‌ಗಳ ಬದಲಿಗೆ ಬೇರೆ ಪರ್ಯಾಯ ವಾಹನಗಳತ್ತ ಯುವಕರು ಚಿತ್ತ ಹರಿಸಿದ್ದಾರೆ. ಈ ಸಾಲಿನಲ್ಲಿ ಎಲೆಕ್ಟ್ರಿಕ್ ಕಾರು, ಬೈಕ್, ತ್ರಿಚಕ್ರವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇಷ್ಟೇ ಏಕೆ ಸಾರ್ವಜನಿಕ ಸಾರಿಗೆ ಕ್ಷೇತ್ರಕ್ಕೂ ಈ ಎಲೆಕ್ಟ್ರಿಕ್ ಬಸ್‌ಗಳು ಲಗ್ಗೆ ಇಟ್ಟಿವೆ.
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಜನರನ್ನು ಆಕರ್ಷಿಸುತ್ತಿವೆ. ಒಮ್ಮೆ ಹಣ ಹೂಡುವಾಗ ಹೆಚ್ಚು ಹಣವನ್ನು ಹೂಡಿದರೆ, ಚಿಂತೆ ಇಲ್ಲದೆ ವರ್ಷಗಟ್ಟಲೇ ಇರಬಹುದು ಎಂಬ ಲೆಕ್ಕಾಚಾರಕ್ಕೆ ಜನ ಬಂದಂತಾಗಿದೆ. ಇನ್ನು ಪರಿಸರ ರಕ್ಷಣೆಯತ್ತ ಸಹ ಜನರು ತಮ್ಮ ಒಲವನ್ನು ಹೊಂದಿರುವುದು ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಏರಲು ಕಾರಣವಾಗಿವೆ.

ಎಲೆಕ್ಟ್ರಿಕ್ ವಾಹನಗಳ ಮಾರ್ಕೆಟ್ ಭಾರತದಲ್ಲಿ ಎಷ್ಟಿದೆ
ಈಗ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರ್ಕೆಟ್ 3.21 ಬಿಲಿಯನ್ ಡಾಲರ್‌ಗಳಷ್ಟು ವ್ಯಾಪಾಕವಾಗಿದೆ. ಈ ಸಂಖ್ಯೆ 2029ರಲ್ಲಿ 113.99 ಬಿಲಿಯನ್ ಡಾಲರ್‌ಗೆ ಏರಿಕೆ ಆಗುವ ಸಾಧ್ಯತೆ ಹೆಚ್ಚಿದೆ. ಇನ್ನು 2024ರ ಹಣಕಾಸಿ ವಾರ್ಷಿಕ ವರ್ಷ ಮುಗಿಯುವದರೊಳಗೆ ಇ-ಬೈಕ್‌ಗಳ ಮಾರುಕಟ್ಟೆ ಬೆಳೆಯುವ ಸಾಧ್ಯತೆ ಇದೆ. ಅಂದಹಾಗೆ ಈ ವರ್ಷ ಸುಮಾರು 27 ಮಿಲಿಯನ್ ಡಾಲರ್ ಗಳಷ್ಟು ವಾಪಾರ ನಡೆಯಬಹುದು.
ಮಾಲಿನ್ಯ ಮುಕ್ತ ಹಾಗೂ ಸುಲಭ ಸಾರಿಗೆ ಎಂದೇ ಪರಿಗಣಿಸಲ್ಪಡುವ ಎಲೆಕ್ಟ್ರಿಕ್ ಬೈಸಿಕಲ್ ಪಟ್ಟಿಗೆ ಇನ್ನೊಂದು ಹೆಸರು ಸೇರಿಕೊಂಡಿದೆ. ಇದರ ಒಂದು ವಿಶೇಷತೆ ಎಂದರೆ ದೇಶೀ ಸೊಗಡನ್ನು ಈ ಬೈಸಿಕಲ್ ಹೊಂದಿರಲಿದೆ. ಅಂದರೆ ವಿದೇಶಿ ಕಂಪನಿಗಳಿಗೆ ಸೆಡ್ಡು ಹೊಡೆಯಲು ಬೆಂಗಳೂರು ಮೂಲದ ಇಜೀ ಸೈಕಲ್ ಕಂಪನಿ ನಗರದಲ್ಲಿ ಇತ್ತೀಚಿಗೆ ತನ್ನ ಹೊಸ ಬೈಸಿಕಲ್‌ನ್ನು ಬಿಡುಗಡೆ ಮಾಡಿದೆ. ಈ ಬೈಸಿಕಲ್ ನಿಜಕ್ಕೂ ಚಿಕ್ಕದಾದ ಬೈಕ್‌ನಂತೆಯೇ ಕಾಣುತ್ತಿದೆ. ಹೀಗಾಗಿ ಈ ಬೈಸಿಕಲ್ ಗ್ರಾಹಕರನ್ನು ಸೆಳೆಯಬಲ್ಲದು ಎಂದು ಕಂಪನಿ ನಂಬಿದೆ. ಇದರ ಬೆಲೆ ಸಹ ಗ್ರಾಹಕರಿಗೆ ಭಾರವಾಗದಂತೆ ನೋಡಿಕೊಳ್ಳುವ ಗುರಿಯನ್ನು ಹೊಂದಿದೆ.
ಮೇಡ್‌ಇನ್ ಇಂಡಿಯಾ ಉಪಕ್ರಮದ ಭಾಗವಾಗಿ ಈ ಬೈಸಿಕಲ್ ಟ್ರೆಂಡ್ ಮಾಡುತ್ತಿದೆ. ಈ ಬೈಸಿಕಲ್ ವಿನ್ಯಾಸ ಹಾಗೂ ಇದರ ಫೀಚರ್ ನೋಡಿದರು ಗ್ರಾಹಕರು ಬುಕ್ಕಿಂಗ್ ಆರಂಭಿಸಿದ್ದಾರೆ.

ವಿಶೇಷತೆಗಳು ಏನು?
ಈ ಬೈಸಿಕಲ್ ನೋಡಿದರೆ ಸೈಕಲ್ ನಂತೆ ಕಾಣುವುದಿಲ್ಲ. ಇದರ ವಿನ್ಯಾಸ ಗ್ರಾಹಕರನ್ನು ಆಕರ್ಷಿಸುತ್ತಿದೆ. ಈ ಬೈಸಿಕಲ್ ಮೋಟಾರ್‌ದಿಂದ ಚಲಿಸಬಲ್ಲದು. ನೋಡಲು ಸುಂದರವಾದ ವಿನ್ಯಾಸದಲ್ಲಿರುವ ಎಲೆಕ್ಟ್ರಿಕ್ ಬೈಸಿಕಲ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಸುಸಜ್ಜಿತ ಫ್ರೆಮ್‌ನೊಂದಿಗೆ ಬೈಸಿಕಲ್ ಹೈಟೆಕ್ ತಂತ್ರಜ್ಞಾನದಿಂದ ಕೂಡಿದೆ.
ಈ ಬೈಸಿಕಲ್‌ನಲ್ಲಿ ಅಳವಡಿಸಿರುವ ಬ್ಯಾಟರಿ ರಿಮೋವೆಬಲ್ ಆಗಿದೆ. ಅಂದರೆ ಇದರ ಚಾರ್ಜ್ ಖಾಲಿ ಆದಲ್ಲಿ ನೀವು ಬ್ಯಾಟರಿ ತೆಗೆದು ಎಲ್ಲಿ ಆದರೂ ಚಾರ್ಜ್ ಮಾಡಬಹುದು. ಒಮ್ಮೆ ಬ್ಯಾಟರಿ ಫುಲ್ ಚಾರ್ಜ್ ಆದಲ್ಲಿ 50 ಕಿಲೋ ಮೀಟರ್ ಮೈಲೆಜ್ ನೀಡಬಲ್ಲದು.


Click it and Unblock the Notifications