ಗಣರಾಜ್ಯೋತ್ಸವ ಸಂದರ್ಭಕ್ಕೆ ಪ್ರತಿ ವರ್ಷ ಬಿಗ್ ಬಜಾರ್ ನಿಂದ ವಿಶೇಷ ಮಾರಾಟ ಘೋಷಣೆ ಮಾಡಲಾಗುತ್ತದೆ. ಈ ವರ್ಷವೂ ಮತ್ತೊಮ್ಮೆ ವಿಶೇಷ ಮಾರಾಟ ಬಂದಿದೆ. ಫ್ಯೂಚರ್ ಗ್ರೂಪ್ ನ ಬ್ರ್ಯಾಂಡ್ ಆದ ಬಿಗ್ ಬಜಾರ್ ನಿಂದ 'ಸಬ್ ಸೇ ಸಸ್ತೆ ಪಾಂಚ್ ದಿನ್ ಸೇಲ್' ನಡೆಯಲಿದೆ. ಈ ಐದು ದಿನಗಳ ಅವಧಿಯಲ್ಲಿ ಬಳಕೆದಾರರಿಗೆ ಎಲ್ಲ ಉತ್ಪನ್ನಗಳ ಮೇಲೂ ಭಾರೀ ರಿಯಾಯಿತಿ ಸಿಗಲಿದೆ.
ಜನವರಿ ಇಪ್ಪತ್ತೆರಡನೇ ತಾರೀಕಿನ ಮಧ್ಯರಾತ್ರಿಯಿಂದ ಈ ಮಾರಾಟ ಆರಂಭವಾಗಲಿದೆ. ಅರವತ್ತೈದು ಸಾವಿರ ಡೀಲ್ ಗಳಲ್ಲಿ ವಿಶೇಷ ಕೊಡುಗೆ ನೀಡಲಿದೆ. ಅಡುಗೆ ಮನೆ, ಗೃಹಬಳಕೆ ವಸ್ತುಗಳು ಮತ್ತು ಬಟ್ಟೆಗಳು ಮತ್ತಿತರ ಉತ್ಪನ್ನಗಳ ಮೇಲೆ ರಿಯಾಯಿತಿ ದೊರೆಯಲಿದ್ದು, ಈಗಾಗಲೇ ಬಿಗ್ ಬಜಾರ್ ನ ವೆಬ್ ಸೈಟ್ ನಲ್ಲಿ ಪಟ್ಟಿ ಮಾಡಲಾಗಿದೆ.

ಬಿಗ್ ಬಜಾರ್ 'ಸಬ್ ಸೇ ಸಸ್ತೆ ಪಾಂಚ್ ದಿನ್ ಸೇಲ್' ಐದು ಮುಖ್ಯ ಸಂಗತಿಗಳು
* ಬಿಗ್ ಬಜಾರ್ 'ಸಬ್ ಸೇ ಸಸ್ತೆ ಪಾಂಚ್ ದಿನ್ ಸೇಲ್' ಜನವರಿ ಇಪ್ಪತ್ತಾರನೇ ತಾರೀಕಿನ ತನಕ ಐದು ದಿನಗಳವರೆಗೆ ನಡೆಯಲಿದೆ.
* ಮನೆಗೆ ಅಗತ್ಯ ಇರುವ ವಸ್ತುಗಳು, ಫ್ಯಾಷನ್, ಎಲೆಕ್ಟ್ರಾನಿಕ್ಸ್, ಗೊಂಬೆಗಳು, ಸ್ಟೇಷನರಿ ಮತ್ತಷ್ಟು ವಸ್ತುಗಳ ಮೇಲೆ ಆಫರ್ ಇದೆ.
* ಬಿಗ್ ಬಜಾರ್ ನಿಂದ 43 ಇಂಚಿನ ಕೊರ್ಯೊ ಟೀವಿಯನ್ನು 14,999 ರುಪಾಯಿಗೆ ಮಾರಲಾಗುತ್ತಿದೆ. ಇನ್ನು ಕೊರ್ಯೊ 3 ಸ್ಟಾರ್ ಸ್ಪ್ಲಿಟ್ ಏಸಿಯನ್ನು 22,999 ರುಪಾಯಿಗೆ ಮಾರಲಾಗುತ್ತಿದೆ.
* ಅಮೆಜಾನ್ ಮೂಲಕ ಆನ್ ಲೈನ್ ನಲ್ಲಿ ಕೂಡ ಬಿಗ್ ಬಜಾರ್ ಸಬ್ ಸೇ ಸಸ್ತಾ ಪಾಂಚ್ ದಿನ್ ಸೇಲ್ ನಲ್ಲಿ ಖರೀದಿ ಮಾಡಬಹುದು.
* ಹತ್ತಿರದ ಯಾವುದೇ ಬಿಗ್ ಬಜಾರ್ ಸ್ಟೋರ್ ಗೆ ಭೇಟಿ ನೀಡಿ, ಜನವರಿ 26ನೇ ತನಕ ಈ ಕೊಡುಗೆ ಪಡೆಯಬಹುದು.
ಬಿಗ್ ಬಜಾರ್ ನ ಗಣರಾಜ್ಯೋತ್ಸವ ದಿನ ಮಾರಾಟ ಆರಂಭವಾಗಿದ್ದು 2006ರಲ್ಲಿ. ಗ್ರಾಹಕರು ಖರೀದಿ ಮಾಡುವುದಕ್ಕೆ ಅತ್ಯುತ್ತಮ ಸಮಯ ಎನಿಸಿದೆ. ಕಿಶೋರ್ ಬಿಯಾನಿ ನೇತೃತ್ವದ ಫ್ಯೂಚರ್ ರೀಟೇಲ್ ಈ ತಿಂಗಳ ಆರಂಭದಲ್ಲಿ ಅಮೆಜಾನ್ ಇಂಡಿಯಾ ಜತೆಗೆ ದೀರ್ಘಾವಧಿ ಒಪ್ಪಂದಕ್ಕೆ ಸಹಿ ಹಾಕಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications