Karnataka Bike Taxi Ban: ಬೈಕ್ ಟ್ಯಾಕ್ಸಿಗಳ ಸಂಚಾರಕ್ಕೆ ಹೈಕೋರ್ಟ್ ರಾಜ್ಯಾದ್ಯಂತ ನಿಷೇಧವನ್ನು ಹೇರಿದೆ.ಒಂದೇ ಒಂದು ವಾರದಲ್ಲಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಶೇಕಡ 18 ರಷ್ಟು ಹೆಚ್ಚಳವಾಗುತ್ತುತ್ತಿದೆ ಎಂದು ಮನಿ ಕಂಟ್ರೋಲ್ ವರದಿಯನ್ನು ಮಾಡಿದೆ.
ಹೌದು,ರಾಜ್ಯಾದ್ಯಂತ ಹೈಕೋರ್ಟ್ ಬೈಕ್ ಮತ್ತು ಟ್ಯಾಕ್ಸಿ ಸೇವೆಗಳನ್ನು ಸ್ಥಗಿತಗೊಳಿಸಿದೆ. ಈ ಮಹತ್ವದ ಆದೇಶಗಳನ್ನು ನೀಡಿದ ಬಳಿಕ ಕೇವಲ ಒಂದು ವಾರದ ನಂತರ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಶೇಕಡ 18 ರಷ್ಟು ಹೆಚ್ಚಳವಾಗಿದೆ. ಇದರಿಂದಾಗಿ ದಿನನಿತ್ಯದ ಪ್ರಯಾಣಿಕರು ಹಾಗೂ ಗಿಗ್ ಎಕಾನಮಿ ಕಾರ್ಮಿಕರಲ್ಲಿ ಹೆಚ್ಚಿನ ಕಳವಳವನ್ನು ಹುಟ್ಟಿ ಹಾಕಿದೆ.

ಬೆಂಗಳೂರಿನ ಸಂಚಾರ ದಡ್ಡಣೆಯ ಕುರಿತು ನೆದರ್ಲ್ಯಾಂಡ್ಸ್ ಮೂಲದ ಸ್ಥಳ ತಂತ್ರಜ್ಞಾನ ಸಂಸ್ಥೆಯಾದ ಟಾಮ್‌ಟಾಮ್‌ನ ದತ್ತಾಂಶವು, ಕಳೆದ ವಾರದಲ್ಲಿ ಗರಿಷ್ಠ ಸಮಯದಲ್ಲಿ ದಟ್ಟಣೆಯಲ್ಲಿ ಸ್ಪಷ್ಟ ಏರಿಕೆಯನ್ನು ಕಂಡಿದೆ ಎಮದು ಮಾಹಿತಿಯನ್ನು ಬಹಿರಂಗಪಡಿಸಿದ್ಧಾರೆ. ಅದರಲ್ಲೂ ಸಂಜೆ 7 ಗಂಟೆಗೆ ವೇಳೆಯಲ್ಲಿ ಸಂಚಾರವು ನಿರಂತರವಾಹಿ ಏರಿಕೆ ಮಟ್ಟವನ್ನು ಮೀರುವಂತೆ ಇದೆ
ಬೈಕ್ ಟ್ಯಾಕ್ಸಿಗಳ ಸಂಚಾರ ನಿಷೇಧವು ಶುರುವಾದ ದಿನದಿಂದ ಸಂಚಾರ ದಟ್ಟಣೆಯು ಸಾಮಾನ್ಯವಾಗಿ ಶೇಕಡಾ 59 ಕ್ಕೆ ಹೋಲಿಸಿದರೆ ಶೇ 77ಕ್ಕೆ ಏರಿಕೆಯಾಗುತ್ತದೆ.ಇದ ಆದ ಎರಡು ದಿನಗಳ ನಂತರ ಸಂಚಾರ ದಟ್ಟಣೆಯ ಮಟ್ಟವು ಶೇ 83 ಕ್ಕೆ ಹೆಚ್ಚಳವಾಗಿತ್ತು. ವರದಿಯ ಪ್ರಕಾರ ಸರಾಸರಿ ಸುಮಾರು ಶೇಕಡಾ 61 ರಿಂದ ಶೇ 22 ರಷ್ಟು ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಬೈಕ್ ಟ್ಯಾಕ್ಸಿ ನಿಷೇಧದ ನಂತರ ಸಾರ್ವಜನಿಕರು ವೆಚ್ಚ ಮತ್ತು ವೇಗವುಳ್ಳ ದ್ವಿಚಕ್ರ ವಾಹನ ಸವಾರಿಗಳನ್ನು ಅವಲಂಬಿಸಿದ್ದ ಸಾವಿರಾರು ಕಚೇರಿ ಸಿಬ್ಬಂದಿ ಈಗ ವೈಯಕ್ತಿಕ ವಾಹನಗಳು ಅಥವಾ ಆಟೋಗಳಿಗೆ ಬದಲಾಯಿಸಲು ಒತ್ತಾಯಿಸಲ್ಪಟ್ಟಿದ್ದಾರೆ, ಇದು ಈಗಾಗಲೇ ಅಧಿಕ ಹೊರೆಯಿಂದ ಕೂಡಿರುವ ರಸ್ತೆ ಜಾಲಕ್ಕೆ ಮತ್ತಷ್ಟು ಒತ್ತಡವನ್ನು ತಂದಿದೆ.
ಇದಲ್ಲದೇ ಆಟೋ ಚಾಲಕರು ಸಹ ಬೈಕ್ ಟ್ಯಾಕ್ಸಿ ನಿಷೇಧ ನಂತರ ದುಪ್ಪಟ್ಟು ಹಣವನ್ನು ವಸೂಲಿ ಮಾಡಲು ಆಟೋ ರಿಕ್ಷಾ ಚಾಲಕರು ಮುಂದಾಗಿದ್ದರು. ಅದರಲ್ಲೂ ಪೀಕ್ ಸಮಯದಲ್ಲಿ ಹೆಚ್ಚಾಗಿ ಸವಾರಿಗಳನ್ನು ನಿರಾಕರಿಸುವ ಮೂಲಕ ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡಿದ್ದಾರೆ ಎಂದು ವರದಿಗಳು ಆಗಿವೆ.
ಬೈಕ್ ಟ್ಯಾಕ್ಸಿ ನಿಷೇಧದ ಕುರಿತು ಸರ್ಕಾರವು ತೆಗೆದುಕೊಂಡಿರುವ ಕಠಿಣ ಕ್ರಮವನ್ನು ಹಿಂತೆಗೆದುಕೊಳ್ಳಬೇಕೆಂದು ಬೈಕ್ ಟ್ಯಾಕ್ಸಿ ಸವಾರರು ಒತ್ತಾಯಿಸುತ್ತಿದ್ದಾರೆ.
ಈ ನಿಷೇಧವು ಗಿಗ್ ಕಾರ್ಮಿಕರ ಪ್ರತಿಭಟನೆಗೂ ಕಾರಣವಾಗಿದೆ, ಅವರಲ್ಲಿ ಹಲವರು ಅಪ್ಲಿಕೇಶನ್ ಆಧಾರಿತ ಪ್ಲಾಟ್‌ಫಾರ್ಮ್‌ಗಳಿಗೆ ಬೈಕ್ ಟ್ಯಾಕ್ಸಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ನಮ್ಮ ಬೈಕ್ ಟ್ಯಾಕ್ಸಿ ಅಸೋಸಿಯೇಷನ್ ಬ್ಯಾನರ್ ಅಡಿಯಲ್ಲಿ ನೂರಕ್ಕೂ ಹೆಚ್ಚು ಬೈಕ್ ಟ್ಯಾಕ್ಸಿ ಸವಾರರು ಬೈಕ್ ಟ್ಯಾಕ್ಸಿ ಸೇವೆಗಳ ಮೇಲಿನ ಕಠಿಣ ಕ್ರಮವನ್ನು ಮರುಪರಿಶೀಲಿಸುವಂತೆ ಒತ್ತಾಯವನ್ನು ಕೂಡ ಮಾಡಿದ್ದಾರೆ.
ಆಟೋ ಚಾಲಕರು ದುಪ್ಪಟ್ಟು ಹಣ ಕೇಳುತ್ತಿದ್ದಾರೆ
ಬೆಂಗಳೂರಿನಾದ್ಯಂತ ಅನೇಕ ಜನರು ಆಟೋ ಚಾಲಕರ ದರ ಏರಿಕೆಗೆ ಬೇಸತ್ತು ಹೋಗಿದ್ದಾರೆ. ಬೆಂಗಳೂರಿನಲ್ಲಿ 2,500 ಕ್ಕೂ ಹೆಚ್ಚು ಆಟೋ ನಿಲ್ದಾಣಗಳಿವೆ. ಅವರೆಲ್ಲರೂ ಬುಕಿಂಗ್‌ಗಳಿಗೆ ಹೆಚ್ಚಿನ ಹಣವನ್ನು ಕೇಳುತ್ತಾರೆ. ಈ ಸಂದರ್ಭದಲ್ಲಿ, ಸರ್ಕಾರ ನಿಯಂತ್ರಿತ ಬೈಕ್ ಟ್ಯಾಕ್ಸಿಗಳನ್ನು ಏಕೆ ನಿಷೇಧಿಸುತ್ತಿದೆ ಎಂದು ಬೆಂಗಳೂರು ಮೂಲದ ಪ್ರಯಾಣಿಕರೊಬ್ಬರು ಪ್ರಶ್ನೆಯನ್ನು ಮಾಡಿದ್ದಾರೆ.
103 ಬೈಕ್ ಪೊಲೀಸರ ವಶಕ್ಕೆ
ಹೈಕೋರ್ಟ್ ಆದೇಶವನ್ನು ಪಾಲಿಸದೇ ಸೇವೆ ಮಾಡುತ್ತಿದ್ದ ಬೈಕ್ ಸವಾರರ ವಿರುದ್ಧ ಕ್ರಮ ಕೈಗೊಂಡ ಸಾರಿಗೆ ಇಲಾಖೆ, ಒಟ್ಟು 103 ಬೈಕ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದೆ. ನಗರದ ವಿವಿಧ ಭಾಗಗಳಲ್ಲಿ ತಪಾಸಣೆ ನಡೆಸಿದಾಗ, ಸಾರಿಗೆ ಇಲಾಖೆ ಅಧಿಕಾರಿಗಳು ಬೈಕ್ ಟ್ಯಾಕ್ಸಿ ಸೇವೆ ಒದಗಿಸುತ್ತಿದ್ದ 103 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 103 ಬೈಕ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತಲಾ 5,000 ರೂ. ದಂಡವನ್ನು ವಿಧಿಸಲಾಗಿದೆ.


Click it and Unblock the Notifications