ವಿಶ್ವದ 500 ಶ್ರೀಮಂತರಲ್ಲಿ ಒಬ್ಬನಾದ ಬಯೋಟೆಕ್ ಸಂಸ್ಥಾಪಕ
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಲಸಿಕೆ ತಯಾರಕ ಕಂಪನಿ ಬಯೋಟೆಕ್‌ನ ಸಂಸ್ಥಾಪಕ ಉಗುರ್ ಸಾಹಿನ್ ವಿಶ್ವದ 500 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ ಬಯೋಟೆಕ್‌ನ ಸಂಸ್ಥಾಪಕ ಉಗುರ್ ಸಾಹಿನ್ ವಿಶ್ವದ 493ನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದು ಇವರ ನಿವ್ವಳ ಆಸ್ತಿ ಮೌಲ್ಯ 5.1 ಬಿಲಿಯನ್ ಡಾಲರ್‌ನಷ್ಟಿದೆ.
ಇಂಗ್ಲೆಂಡ್ ಈ ವಾರ ಕೋವಿಡ್-19 ಲಸಿಕೆಯನ್ನು ಸಾರ್ವಜನಿಕ ಬಳಕೆಗೆ ಅನುಮೋದಿಸಿದ ಬಳಿಕ ಬಯೋಟೆಕ್ ಎಸ್‌ಇ ಸಂಸ್ಥಾಪಕ ವಿಶ್ವದ 500 ಶ್ರೀಮಂತ ಜನರಲ್ಲಿ ಒಬ್ಬರಾದರು. ಜೊತೆಗೆ
ಬಯೋಟೆಕ್ ಷೇರುಗಳು ಈ ವಾರ ಸುಮಾರು ಶೇಕಡಾ 8ರಷ್ಟು ನಷ್ಟು ಜಿಗಿದವು ಮತ್ತು ವರ್ಷದಲ್ಲಿ ಶೇಕಡಾ 250ಕ್ಕಿಂತ ಹೆಚ್ಚಾಗಿದೆ.
ಇಂಗ್ಲೆಂಡ್ ಕೋವಿಡ್-19 ಲಸಿಕೆಯನ್ನು ಅನುಮೋದಿಸಿದ ಮೊದಲ ಪಾಶ್ಚಿಮಾತ್ಯ ರಾಷ್ಟ್ರವಾಗಿದ್ದು, ಸೋಂಕು ತಡೆಗಟ್ಟಲು ಶೇಕಡಾ 95ರಷ್ಟು ಪರಿಣಾಮಕಾರಿ ಎಂದು ಫಿಜರ್ ಮತ್ತು ಬಯೋಟೆಕ್ ಕುರಿತು ಸ್ಪಷ್ಟಪಡಿಸಿದೆ.
ಇಂಗ್ಲೆಂಡ್ ಲಸಿಕೆಗೆ ಅನುಮೋದನೆ ನೀಡಿದರೂ ಸಹ ಅಮೆರಿಕಾದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಮತ್ತು ಯುರೋಪಿಯನ್ ಯೂನಿಯನ್ ರೆಗ್ಯುಲೇಟರ್ ನಿರ್ಧಾರಕ್ಕಾಗಿ ಬಯೋಟೆಕ್ ಇನ್ನೂ ಕಾಯುತ್ತಿದೆ.