For Quick Alerts
ALLOW NOTIFICATIONS  
For Daily Alerts

ಮೇ 30ರಂದು ಭಾರಿ ಕುಸಿತ ಕಂಡ ಬಿಟ್ ಕಾಯಿನ್, ಇಥೆರಿಯಂ ಮೌಲ್ಯ

|

ಬೆಂಗಳೂರು, ಮೇ 30: ಡಿಜಿಟಲ್ ಕರೆನ್ಸಿ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್, ಇಥೆರಿಯಂ, ಡೋಜ್ ಕಾಯಿನ್ ಸೇರಿದಂತೆ ಹಲವು ಕರೆನ್ಸಿಗಳ ಮೌಲ್ಯ ಸತತವಾಗಿ ಕುಸಿತ ಕಾಣುತ್ತಿವೆ. ಕೊರೊನಾ ಸಂಕಷ್ಟದ ಕಾಲದಲ್ಲಿ ಡಿಜಿಟಲ್ ದುಡ್ಡಿನ ಮೇಲೆ ಹೂಡಿಕೆ ಮಾಡಲು ಮುಂದಾಗಿದ್ದ ಅನೇಕ ಉದ್ಯಮಿಗಳು ಈಗ ಹಿಂದೇಟು ಹಾಕುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಮೌಲ್ಯ $2 ಟ್ರಿಲಿಯನ್‌ಗೆ ಏರಿಕೆಯಾಗಿದ್ದು, ಮೇ 30ರಂದು 1,560,378,535,255 ಡಾಲರ್‌ಗೆ ಕುಸಿದಿದೆ. ಈ ನಡುವೆ ಬಿಟ್ ಕಾಯಿನ್ ಏಪ್ರಿಲ್ ತಿಂಗಳ 14ರಂದು ಮೊದಲ ಬಾರಿಗೆ 64 ಸಾವಿರ ಡಾಲರ್ ಮೌಲ್ಯಕ್ಕೇರಿತ್ತು. ಇದಾದ ಬಳಿಕ ಈಗ ಶೇ 47.8 ರಷ್ಟು ಕುಸಿತ ಕಂಡಿದೆ. ಮೇ ತಿಂಗಳಲ್ಲೇ ಶೇ 38ರಷ್ಟು ಮೌಲ್ಯ ಕಳೆದುಕೊಂಡಿದೆ.

ಎಲ್ಲಾ ಕ್ರಿಪ್ಟೋಕರೆನ್ಸಿಗಳ ಮೌಲ್ಯ ಒಟ್ಟಾರೆ 2,304,740,338,363 ಟ್ರಿಲಿಯನ್ ಡಾಲರ್ ದಾಟಿದೆ. ಕಳೆದ ಒಂದು ವರ್ಷದಲ್ಲಿ, ಬಿಟ್‌ಕಾಯಿನ್ ಶೇಕಡಾ 103.72ರಷ್ಟು ಲಾಭವನ್ನು ನೀಡಿದೆ.

ಮೇ 30ರಂದು ಭಾರಿ ಕುಸಿತ ಕಂಡ ಬಿಟ್ ಕಾಯಿನ್, ಇಥೆರಿಯಂ ಮೌಲ್ಯ

ಮೇ 30ರಂದು ಈ ಸಮಯ(15.42) ಕ್ಕೆ ಬಿಟ್ ಕಾಯಿನ್ ಮೌಲ್ಯ:
ಬಿಟ್ ಕಾಯಿನ್ ಬೆಲೆ: $35,719.25
ಒಟ್ಟಾರೆ ಮಾರುಕಟ್ಟೆ ಮೌಲ್ಯ: $672,751,601,787
ಒಂದು ಬಿಟ್ ಕಾಯಿನ್ ಬೆಲೆ = 26,00,381.70 ರು
(1 USD=73.39 ರುಪಾಯಿ)

ಬಿಟ್ ಕಾಯಿನ್ ಕಳೆದ 24 ಗಂಟೆಗಳಲ್ಲಿ ಶೇ 1.32ರಷ್ಟು ಏರಿಕೆ ಕಂಡಿದೆ. ಈ ವಾರ ಶೇ 2.90ರಷ್ಟು ಏರಿಕೆಯಾಗಿದೆ. ಈ ನಡುವೆ ಮತ್ತೊಂದು ಡಿಜಿಟಲ್ ಕರೆನ್ಸಿ ಇಥೆರಿಯಂ (Ethereum) ಕಳೆದ 24 ಗಂಟೆಗಳಲ್ಲಿ ಶೇ 1.38ರಷ್ಟು ಇಳಿಕೆ ಕಂಡು 2,397.31ಡಾಲರ್ ಮೌಲ್ಯ ಪಡೆದಿದೆ. ಈ ವಾರದಲ್ಲಿ 15.63% ಏರಿಕೆಯಾಗಿ ಒಟ್ಟಾರೆ $282,102,804,586 ಮೌಲ್ಯ ಹೊಂದಿದೆ.

ಬಿಟ್‌ಕಾಯಿನ್‌: ಇದು ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿಯಾಗಿದೆ. ಡಿಜಿಟಲ್ ಕರೆನ್ಸಿಯಾಗಿರುವುದರಿಂದ ಯಾವುದೇ ರೀತಿಯಲ್ಲಿ ಮುದ್ರಣ ರೂಪದಲ್ಲಿ ಸಿಗುವುದಿಲ್ಲ. ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಯಾವುದೇ ದೇಶ, ಭಾಷೆ, ಬ್ಯಾಂಕುಗಳಿಗೆ ಇದು ಸೀಮಿತವಾಗಿಲ್ಲ. ಭಾರತ, ಸೌದಿ ಅರೇಬಿಯಾ, ಅಲ್ಜೀರಿಯಾ, ಬೊಲಿವಿಯಾ ಅನೇಕ ದೇಶಗಳಲ್ಲಿ ನಿಷೇಧವಾಗಿರುವ ಕ್ರಿಪ್ಟೋ ಕರೆನ್ಸಿ ಇತ್ತೀಚೆಗೆ ಭಾರಿ ಬೇಡಿಕೆ ಪಡೆದು ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ. ಆದರೆ, ಡಿಜಿಟಲ್ ಆಸ್ತಿ ರೂಪದಲ್ಲಿ ಕ್ರಿಪ್ಟೋ ಕರೆನ್ಸಿ ಬಳಕೆಯಾಗಬಹುದೇ ಹೊರತೂ ಸಾಮಾನ್ಯ ವ್ಯವಹಾರಕ್ಕೆ ಸೂಕ್ತವಲ್ಲ ಎಂದು ತಜ್ಞರು ಕೂಡಾ ಅಭಿಪ್ರಾಯಪಟ್ಟಿದ್ದಾರೆ.

English summary

Bitcoin and Ethereum price down on May 30

Popular Cryptocurrencies Bitcoin, Ethereum price today (May 30) is down.
Story first published: Sunday, May 30, 2021, 15:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X