ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಬಿಟ್‌ಕಾಯಿನ್ ಸದ್ಯ ಸಾಕಷ್ಟು ಸುದ್ದಿಯಲ್ಲಿದ್ದು, ಭಾರತದಲ್ಲಿ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸುವ ಸಿದ್ಧತೆಗಳ ಹೊರತಾಗಿಯೂ, ದೊಡ್ಡ ವಿದೇಶಿ ಸಂಸ್ಥೆಗಳು ತೋರಿಸಿದ ಆಸಕ್ತಿಯಿಂದಾಗಿ ಬಿಟ್‌ಕಾಯಿನ್ ಮೌಲ್ಯ ಮತ್ತಷ್ಟು ಹೆಚ್ಚಳವಾಗಿದೆ.
ಎರಡು ವಾರಗಳಲ್ಲಿ ಮೊದಲ ಬಾರಿಗೆ ಬಿಟ್ ಕಾಯಿನ್ ಬೆಲೆ ಬುಧವಾರ $55,000 ಮಟ್ಟವನ್ನು ಮೀರಿದೆ. ವಿಶ್ವದ ಎರಡನೇ ಅತಿದೊಡ್ಡ ಕ್ರಿಪ್ಟೋಕರೆನ್ಸಿಯಾದ ಎಥೆರಿಯಮ್‌ನ ಬೆಲೆಗಳು $1,800 ಅಂಕಗಳಲ್ಲಿ ಅಗ್ರಸ್ಥಾನದಲ್ಲಿದೆ.

CoinGecko ಪ್ರಕಾರ, ಕಳೆದ 24 ಗಂಟೆಗಳಲ್ಲಿ $ 53,337.05 ರಿಂದ 55,748.97 ಶ್ರೇಣಿಯಲ್ಲಿ ವಹಿವಾಟು ನಂತರ ಶೇಕಡಾ 1.7% ರಷ್ಟು ಏರಿಕೆಯಾಗಿ ವಿಶ್ವದ ಹಳೆಯ ಕ್ರಿಪ್ಟೋಕರೆನ್ಸಿ ಬಿಟ್‌ಕಾಯಿನ್ ಭಾರತೀಯ ಕಾಲಮಾನ ಸಂಜೆ 5.50 ಕ್ಕೆ 55,051.36 ಕ್ಕೆ ವಹಿವಾಟು ನಡೆಸುತ್ತಿದೆ. ಎಥೆರಿಯಮ್ ತನ್ನ 24 ಗಂಟೆಗಳ ಗರಿಷ್ಠ $1,883.85 ಅನ್ನು ಮುಟ್ಟಿದ ನಂತರ $1,819.78 ವಹಿವಾಟು ನಡೆಸುತ್ತಿದೆ.
ಬಿಟ್‌ಕಾಯಿನ್ ವಹಿವಾಟು ತನ್ನ ಜೀವಿತಾವಧಿಯ ಗರಿಷ್ಠ $58,640.77 ರಿಂದ ಶೇಕಡಾ 6ರಷ್ಟು ದೂರದಲ್ಲಿದ್ದರೆ, ಎಥೆರಿಯಮ್ ತನ್ನ ಸಾರ್ವಕಾಲಿಕ ಗರಿಷ್ಠ 2,042.93 ಗಿಂತ ಶೇಕಡಾ 11ರಷ್ಟಿದೆ.
ಕಳೆದ ಕೆಲವು ವಾರಗಳ ಹಿಂದೆ ಇತ್ತೀಚೆಗೆ, ಅಮೆರಿಕದ ಎಲೆಕ್ಟ್ರಿಕ್ ಕಾರು ತಯಾರಕ ಟೆಸ್ಲಾ ಸಹ 1.5 ಬಿಲಿಯನ್ ಮೌಲ್ಯದ ಬಿಟ್‌ಕಾಯಿನ್‌ಗಳನ್ನು ಖರೀದಿಸಿದರು, ಇದು ಕ್ರಿಪ್ಟೋಕರೆನ್ಸಿಯತ್ತ ಹೆಚ್ಚಿನ ಹೂಡಿಕೆದಾರರ ಆಸಕ್ತಿಯನ್ನು ಉಂಟುಮಾಡಿದೆ.


Click it and Unblock the Notifications
