ಬಿಟ್‌ಕಾಯಿನ್ ಪ್ರಸ್ತುತ 60,330.64 ಅಮೆರಿಕನ್ ಡಾಲರ್ ದರವನ್ನು ಹೊಂದಿದೆ. ಇದು ಪ್ರಸ್ತುತ ಶೇಕಡಾ 2.32 ರಷ್ಟು ಹೆಚ್ಚಾಗಿದ್ದು, ಈ ಮೂಲಕ ಬಿಟ್‌ಕಾಯಿನ್ ಮಾರುಕಟ್ಟೆ ಕ್ಯಾಪ್ 1.13 ಟ್ರಿಲಿಯನ್ ಡಾಲರ್ ಆಗಿದೆ.
ಕಳೆದ 24 ಗಂಟೆಗಳಲ್ಲಿ, ಬಿಟ್‌ಕಾಯಿನ್‌ನ ಗರಿಷ್ಠ ಬೆಲೆ 61,065.22 ಡಾಲರ್ ಮತ್ತು ಕಡಿಮೆ ಬೆಲೆ 58,395.78 ಡಾಲರ್ ಆಗಿದೆ. ಆದಾಯಕ್ಕೆ ಸಂಬಂಧಿಸಿದಂತೆ, ಕಳೆದ ಒಂದು ವರ್ಷದಲ್ಲಿ, ಬಿಟ್‌ಕಾಯಿನ್ 106.85% ಲಾಭವನ್ನು ನೀಡಿದೆ. ಬಿಟ್‌ಕಾಯಿನ್ ಸಾರ್ವಕಾಲಿಕ ಹೆಚ್ಚಿನ ಬೆಲೆ 61,712 ಆಗಿದ್ದು, ಇದೀಗ ಮತ್ತೊಮ್ಮೆ ಆ ದಾಖಲೆಯನ್ನೂ ಮುರಿಯುವ ಮುನ್ಸೂಚನೆ ನೀಡಿದೆ.

ಏನಿದು ಬಿಟ್‌ಕಾಯಿನ್?
ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯಾಗಿದ್ದು, ಇದು ಆಧುನಿಕ ಡಿಜಿಟಲ್ ಯುಗದ ಡಿಜಿಟಲ್ ಕರೆನ್ಸಿ. ಇದಕ್ಕೆ ಮುದ್ರಣ ರೂಪ ಇಲ್ಲ. ಬಿಟ್ ಕಾಯಿನ್ ಎಂಬ ಕರೆನ್ಸಿಯು ಕೇವಲ ಎಲೆಕ್ಟ್ರಾನಿಕ್ ರೂಪದಲ್ಲಿದ್ದು, ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಅಲ್ಲದೇ ಇದಕ್ಕೆ ಯಾವುದೇ ದೇಶ, ಭಾಷೆ, ಬ್ಯಾಂಕು ಇದ್ಯಾವುದು ಇರುವುದಿಲ್ಲ.
ಬಿಟ್‌ಕಾಯಿನ್ ಬೇಡಿಕೆಗೆ ಕಾರಣವೇನು?
ಡಾಲರ್, ಯೂರೋ, ಪೌಂಡ್ ಹೀಗೆ ನಾನಾ ಕರೆನ್ಸಿಗಳನ್ನು ವಿನಿಮಯ ಮಾಡಿಕೊಳ್ಳಲು ಇಷ್ಟಪಡದ ಜನರು ಬಿಟ್‌ಕಾಯಿನ್ ಮೊರೆ ಹೋಗುತ್ತಿದ್ದಾರೆ. ಯಾವುದೇ ದೇಶದಲ್ಲಿ ವಹಿವಾಟು ನಡೆಸಲು ಇದರಿಂದ ಸುಲಭವಾಗುತ್ತದೆ. ಹೀಗಾಗಿಯೇ ಇಂತಹ ಕ್ರಿಪ್ಟೋಕರೆನ್ಸಿಗಳ ಬೇಡಿಕೆ ಪ್ರತಿದಿನ ಹೆಚ್ಚುತ್ತಿದೆ. ಇಷ್ಟಾದರೂ ಕೆಲವು ದೇಶಗಳಲ್ಲಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲಾಗಿದೆ. ಭಾರತ, ಸೌದಿ ಅರೇಬಿಯಾ, ಅಲ್ಜೀರಿಯಾ, ಬೊಲಿವಿಯಾ ಹೀಗೆ ನಾನಾ ರಾಷ್ಟ್ರಗಳು ಕ್ರಿಪ್ಟೋಕರೆನ್ಸಿ ನಿಷೇಧಿಸಿವೆ.


Click it and Unblock the Notifications