ಬೆಂಗಳೂರು, ಮಾರ್ಚ್ 14: ಡಿಜಿಟಲ್ ದುಡ್ಡು ಬಿಟ್ ಕಾಯಿನ್ ಹಾಗೂ ಇತರೆ ಕ್ರಿಪ್ಟೋಕರೆನ್ಸಿಗಳ ಮೌಲ್ಯ ಭರ್ಜರಿಯಾಗಿ ಏರಿಕೆ ಕಂಡಿವೆ. ಭಾನುವಾರದಂದು ಬಿಟ್ ಕಾಯಿನ್ ಮತ್ತೊಮ್ಮೆ 60, 000 ಡಾಲರ್ ಮೌಲ್ಯ ದಾಟಿದೆ.
ಜನಪ್ರಿಯ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ 1 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ದಾಟಿದ ಬಳಿಕವೂ ಸತತ ಕುಸಿತ ಕಂಡಿತ್ತು. ಆದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 27,734 ಡಾಲರ್ ಮೌಲ್ಯ ಹೊಂದಿದ್ದ ಬಿಟ್ ಕಾಯಿನ್ ಶೇ 121.04ರಷ್ಟು ಏರಿಕೆ ಕಂಡಿದೆ.
ಮಾರ್ಚ್ 14ರಂದು ಈ ಸಮಯಕ್ಕೆ(ಸಂಜೆ 4.45) ಬಿಟ್ ಕಾಯಿನ್ ಮೌಲ್ಯ:
ಬಿಟ್ ಕಾಯಿನ್ ಬೆಲೆ: $60,249.04
ಒಟ್ಟಾರೆ ಮಾರುಕಟ್ಟೆ ಮೌಲ್ಯ: $ 1,126,325,144,653
ಒಂದು ಬಿಟ್ ಕಾಯಿನ್ ಬೆಲೆ = 44,31,565.55 ರು
(1 USD=72.71 ರುಪಾಯಿ)
ಕಳೆದ 24 ಗಂಟೆಗಳಲ್ಲಿ ಶೇ 5.194ರಷ್ಟು ಏರಿಕೆ ಕಂಡಿದ್ದರೆ, ಈ ವಾರ ಶೇ18.23ರಷ್ಟು ಏರಿಕೆಯಾಗಿದೆ.

ಈ ನಡುವೆ ಮತ್ತೊಂದು ಡಿಜಿಟಲ್ ಕರೆನ್ಸಿ ಎಥೆರೆಯಂ(Ethereum) ಕಳೆದ 24 ಗಂಟೆಗಳಲ್ಲಿ ಶೇ 5.18ರಷ್ಟು ಏರಿಕೆ ಕಂಡು 1,878 ಡಾಲರ್ ಮೌಲ್ಯಕ್ಕೇರಿದೆ. ಒಟ್ಟಾರೆ 216,165,009,047 ಡಾಲರ್ ಮೌಲ್ಯ ಹೊಂದಿದೆ.
ಬಿನಾನ್ಸ್ ಕಾಯಿನ್ ಕಳೆದ 24 ಗಂಟೆಗಳಲ್ಲಿ ಶೇ 2.49ರಷ್ಟು ಕುಸಿತ ಕಂಡು 268 ಡಾಲರ್ ಮೌಲ್ಯಕ್ಕೆ ಇಳಿದಿದೆ. ಒಟ್ಟಾರೆ 41,559,870,668 ಡಾಲರ್ ಮೌಲ್ಯ ಹೊಂದಿದೆ.
ಬಿಟ್‌ಕಾಯಿನ್: ಇದು ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿಯಾಗಿದೆ. ಡಿಜಿಟಲ್ ಕರೆನ್ಸಿಯಾಗಿರುವುದರಿಂದ ಯಾವುದೇ ರೀತಿಯಲ್ಲಿ ಮುದ್ರಣ ರೂಪದಲ್ಲಿ ಸಿಗುವುದಿಲ್ಲ. ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಯಾವುದೇ ದೇಶ, ಭಾಷೆ, ಬ್ಯಾಂಕುಗಳಿಗೆ ಇದು ಸೀಮಿತವಾಗಿಲ್ಲ. ಭಾರತ, ಸೌದಿ ಅರೇಬಿಯಾ, ಅಲ್ಜೀರಿಯಾ, ಬೊಲಿವಿಯಾ ಅನೇಕ ದೇಶಗಳಲ್ಲಿ ನಿಷೇಧವಾಗಿರುವ ಕ್ರಿಪ್ಟೋ ಕರೆನ್ಸಿ ಇತ್ತೀಚೆಗೆ ಭಾರಿ ಬೇಡಿಕೆ ಪಡೆದು ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ. ಆದರೆ, ಡಿಜಿಟಲ್ ಆಸ್ತಿ ರೂಪದಲ್ಲಿ ಕ್ರಿಪ್ಟೋ ಕರೆನ್ಸಿ ಬಳಕೆಯಾಗಬಹುದೇ ಹೊರತೂ ಸಾಮಾನ್ಯ ವ್ಯವಹಾರಕ್ಕೆ ಸೂಕ್ತವಲ್ಲ ಎಂದು ತಜ್ಞರು ಕೂಡಾ ಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications