ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯಲ್ಲಿರುವ ಕ್ರಿಪ್ಟೋಕರೆನ್ಸಿ ಬಿಟ್‌ಕಾಯಿನ್ ಸೋಮವಾರ 58,000 ಯುಎಸ್ ಡಾಲರ್ ಮಟ್ಟಕ್ಕೆ ಮರಳಿದೆ. ಡಿಜಿಟಲ್ ಪಾವತಿ ದೈತ್ಯ ಸಂಸ್ಥೆ ವೀಸಾ ಇಂಕ್ ತನ್ನ ನೆಟ್‌ವರ್ಕ್‌ನಲ್ಲಿ ಬಿಟ್‌ಕಾಯಿನ್ ಬಳಕೆಗೆ ಅವಕಾಶ ನೀಡುವುದಾಗಿ ಹೇಳಿದ ಬಳಿಕ ಕ್ರಿಪ್ಟೋಕರೆನ್ಸಿ ಬಿಟ್‌ಕಾಯಿನ್ ಬೆಲೆ 58,000 ಡಾಲರ್‌ಗೆ ಜಿಗಿದಿದೆ.
ಯುಎಸ್‌ಡಿ ಕಾಯಿನ್ (ಯುಎಸ್‌ಡಿಸಿ) ಒಂದು ಸ್ಟೇಬಲ್ ಕಾಯಿನ್ ಕ್ರಿಪ್ಟೋಕರೆನ್ಸಿಯಾಗಿದ್ದು, ಇದರ ಮೌಲ್ಯವನ್ನು ಯುಎಸ್ ಡಾಲರ್‌ಗೆ ಜೋಡಿಸಲಾಗಿದೆ.

ಕಳೆದ 24 ಗಂಟೆಗಳಲ್ಲಿ 54,719.23 ರಿಂದ 58,230.98 ಡಾಲರ್ ಹಂತದಲ್ಲಿ ವಹಿವಾಟು ನಡೆದ ನಂತರ ಡಿಜಿಟಲ್ ಕ್ರಿಪ್ಟೋಕರೆನ್ಸಿ 58,005.54 ಡಾಲರ್‌ಗೆ ತಲುಪಿದ್ದು, ಶೇಕಡಾ 3.5ರಷ್ಟು ಏರಿಕೆಯಾಗಿದೆ. ಬಿಟ್‌ಕಾಯಿನ್ ಇದುವರೆಗೂ ಸಾರ್ವಕಾಲಿಕ ಗರಿಷ್ಠ 61,711.87 ಡಾಲರ್‌ಗೆ ತಲುಪಿದ್ದು, ಶೇಕಡಾ 5ಕ್ಕಿಂತ ಹೆಚ್ಚಾಗಿದೆ.
ಜಾಗತಿಕ ಷೇರುಗಳ ಕುಸಿತದ ನಡುವೆ ಕಳೆದ ವಾರ ಬಿಟ್‌ಕಾಯಿನ್ 51,000 ಡಾಲರ್ ಮಟ್ಟಕ್ಕಿಂತ ಕುಸಿದಿತ್ತು. ಇದೀಗ ಸಾರ್ವಕಾಲಿಕ ಗರಿಷ್ಠ ಮಟ್ಟದತ್ತ ಸಾಗುತ್ತಿದೆ.
ಬಿಟ್‌ಕಾಯಿನ್ ಬೇಡಿಕೆಗೆ ಕಾರಣವೇನು?
ಡಾಲರ್, ಯೂರೋ, ಪೌಂಡ್ ಹೀಗೆ ನಾನಾ ಕರೆನ್ಸಿಗಳನ್ನು ವಿನಿಮಯ ಮಾಡಿಕೊಳ್ಳಲು ಇಷ್ಟಪಡದ ಜನರು ಬಿಟ್‌ಕಾಯಿನ್ ಮೊರೆ ಹೋಗುತ್ತಿದ್ದಾರೆ. ಯಾವುದೇ ದೇಶದಲ್ಲಿ ವಹಿವಾಟು ನಡೆಸಲು ಇದರಿಂದ ಸುಲಭವಾಗುತ್ತದೆ. ಹೀಗಾಗಿಯೇ ಇಂತಹ ಕ್ರಿಪ್ಟೋಕರೆನ್ಸಿಗಳ ಬೇಡಿಕೆ ಪ್ರತಿದಿನ ಹೆಚ್ಚುತ್ತಿದೆ.


Click it and Unblock the Notifications