ಅತಿದೊಡ್ಡ ಕ್ರಿಪ್ಟೋಕರೆನ್ಸಿಯಾದ ಬಿಟ್‌ಕಾಯಿನ್ (ಬಿಟಿಸಿ) ಒಂದೇ ದಿನದಲ್ಲಿ ಶೇಕಡಾ 30 ಪ್ರತಿಶತದಷ್ಟು ಕಡಿಮೆ $ 30,001 ಕ್ಕೆ ಇಳಿದಿದೆ, ಇದು ಹಿಂದಿನ ವಾರದ ನಷ್ಟವನ್ನು ವಿಸ್ತರಿಸಿದ್ದು, ಈ ವರ್ಷದಲ್ಲಿ ಅತ್ಯಂತ ಭಾರೀ ಕುಸಿತ ಇದಾಗಿದೆ.
ಜನವರಿ ಅಂತ್ಯದಿಂದ, ಅತ್ಯಂತ ಜನಪ್ರಿಯ ಕರೆನ್ಸಿ $ 30,000 ಗಿಂತ ಕಡಿಮೆ ವಹಿವಾಟು ನಡೆಸಲಿಲ್ಲ. ಟೆಸ್ಲಾ ಸಿಇಒ ಮತ್ತು ಸಂಸ್ಥಾಪಕ ಎಲೋನ್ ಮಸ್ಕ್ 1.5 ಬಿಲಿಯನ್ ಡಾಲರ್ ಮೌಲ್ಯದ ಬಿಟ್‌ಕಾಯಿನ್ ಖರೀದಿ ಕುರಿತು ತಿಳಿಸಿದ ಬಿಟ್‌ಕಾಯಿನ್ ಏರುತ್ತಲೇ ಸಾಗಿತ್ತು. ಆದರೆ ಎಲೋನ್ ಮಸ್ಕ್ ಕ್ರಿಪ್ಟೋಕರೆನ್ಸಿ ಕುರಿತು ಯು ಟರ್ನ್ ಹೊಡೆದ ಬಳಿಕ ಬಿಟ್‌ಕಾಯಿನ್ ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿಯತೊಡಗಿದೆ.

ಕಳೆದ 24 ಗಂಟೆಗಳಲ್ಲಿ, ಬಿಟ್‌ಕಾಯಿನ್‌ನ ಗರಿಷ್ಠ ಬೆಲೆ 45,850.23 ಡಾಲರ್ ಮತ್ತು ಕಡಿಮೆ ಬೆಲೆ 38,966.54 ಡಾಲರ್ ಆಗಿದೆ. ಆದಾಯಕ್ಕೆ ಸಂಬಂಧಿಸಿದಂತೆ, ಕಳೆದ ಒಂದು ವರ್ಷದಲ್ಲಿ, ಬಿಟ್‌ಕಾಯಿನ್ ಶೇಕಡಾ 39.22ರಷ್ಟು ಲಾಭವನ್ನು ನೀಡಿದೆ. ಬಿಟ್‌ಕಾಯಿನ್‌ನ ಸಾರ್ವಕಾಲಿಕ ಹೆಚ್ಚಿನ ಬೆಲೆ 64,829.14 ಡಾಲರ್ ಆಗಿದೆ.
ಕ್ರಿಪ್ಟೋಕರೆನ್ಸಿಯಲ್ಲಿನ ಪ್ರಸ್ತುತ ತೀಕ್ಷ್ಣವಾದ ಕುಸಿತಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಟೆಸ್ಲಾ ವಾಹನಗಳ ಖರೀದಿಯಲ್ಲಿ ಬಿಟ್‌ಕಾಯಿನ್ ಬಳಕೆಯನ್ನು ಅನರ್ಹಗೊಳಿಸಿರುವುದು. ಅಲ್ಲದೆ, ಕಳೆದ ವಾರ ಹೂಡಿಕೆದಾರರು ತಮ್ಮ ಹಣವನ್ನು ಬಿಟ್‌ಕಾಯಿನ್‌ನಿಂದ ಇತರ ಕ್ರಿಪ್ಟೋಗಳಿಗೆ ಸ್ಥಳಾಂತರಿಸಿದ್ದರಿಂದ ಬಿಟ್‌ಕಾಯಿನ್‌ನಿಂದ ಭಾರಿ ಹೊರಹರಿವು ಕಂಡುಬಂದಿದೆ.


Click it and Unblock the Notifications