ಭಾರತೀಯ ಜನತಾ ಪಕ್ಷಕ್ಕೆ 2018-19ನೇ ಸಾಲಿನಲ್ಲಿ 'ಗೊತ್ತಿಲ್ಲದ ಮೂಲಗಳಿಂದ' ಬಂದಿರುವ ದೇಣಿಗೆ ಎಷ್ಟು ಗೊತ್ತಾ? 1612.04 ಕೋಟಿ ರುಪಾಯಿ. ರಾಷ್ಟ್ರೀಯ ಪಕ್ಷಗಳಿಗೆಲ್ಲ ಸೇರಿ 'ಗೊತ್ತಿಲ್ಲದ ಮೂಲಗಳಿಂದ ಬಂದಿರುವ ಮೊತ್ತದ (2,512.98 ಕೋಟಿ) ಶೇಕಡಾ 64ರಷ್ಟು ದೇಣಿಗೆ ಬಿಜೆಪಿಯೊಂದಕ್ಕೆ ಬಂದಿದೆ ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರೀಫಾರ್ಮ್ಸ್ (ಎಡಿಆರ್) ತಿಳಿಸಿದೆ.
ಇತರ ಐದು ರಾಷ್ಟ್ರೀಯ ಪಕ್ಷಗಳ ಇದೇ ದೇಣಿಗೆ (900.94 ಕೋಟಿ ರುಪಾಯಿ) ಮೂಲದಿಂದ ಬಂದ ಮೊತ್ತಕ್ಕಿಂತ ಒಂದೂವರೆ ಪಟ್ಟು ಹೆಚ್ಚು ಮೊತ್ತ ಬಿಜೆಪಿಗೆ ಬಂದಿದೆ. ಕಾಂಗ್ರೆಸ್ ಪಕ್ಷವು 728.88 ಕೋಟಿ ರುಪಾಯಿ ಘೋಷಣೆ ಮಾಡಿಕೊಂಡಿದೆ. ಈ ಹಣವನ್ನು ಯಾರಿಂದ ದೇಣಿಗೆ ಪಡೆಯಲಾಯಿತು ಎಂಬ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿಲ್ಲ.
2004-05ರಿಂದ 2018-19ನೇ ಸಾಲಿನ ಮಧ್ಯೆ ರಾಷ್ಟ್ರೀಯ ಪಕ್ಷಗಳು 11,234.12 ಕೋಟಿ ರುಪಾಯಿಯನ್ನು ಗೊತ್ತಿಲ್ಲದ ಮೂಲಗಳಿಂದ ದೇಣಿಗೆ ಪಡೆದಿವೆ. ಬಿಜೆಪಿ, ಕಾಂಗ್ರೆಸ್, ಟಿಎಂಸಿ, ಸಿಪಿಎಂ, ಎನ್ ಸಿಪಿ, ಬಿಎಸ್ ಪಿ ಹಾಗೂ ಸಿಪಿಐನಿಂದ ಚುನಾವಣೆ ಆಯೋಗದ ಬಳಿ ದಾಖಲಿಸಿರುವ ಮಾಹಿತಿಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

ಗೊತ್ತಿಲ್ಲದ ಮೂಲಗಳು ಅಂದರೆ, ಇಪ್ಪತ್ತು ಸಾವಿರ ರುಪಾಯಿಗಿಂತ ಕಡಿಮೆ ಮೊತ್ತದ ದೇಣಿಗೆಯನ್ನು ನೀಡಿದವರ ಮಾಹಿತಿಯನ್ನು ಬಹಿರಂಗ ಮಾಡದೆ, ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವುದು. ಇಂಥ ದೇಣಿಗೆಗಳು ಎಲೆಕ್ಟೋರಲ್ ಬಾಂಡ್ಸ್, ಕೂಪನ್ ಗಳ ಮಾರಾಟ, ಪರಿಹಾರ ನಿಧಿ, ಇತರ ಆದಾಯ, ಸ್ವಯಂಪ್ರೇರಿತ ದೇಣಿಗೆ ಮತ್ತು ಸಭೆ/ಮೋರ್ಚಾಗಳಿಂದ ಕೊಡುಗೆ ರೂಪದಲ್ಲಿ ಪಡೆದಿರುವಂಥದ್ದಾಗಿರುತ್ತದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಪ್ರಾಪ್ಶೇರ್ ಸೆಲೆಸ್ಟಿಯಾ ಐಪಿಒ: ಹೂಡಿಕೆಗೆ ಇಂದು ಕೊನೆಯ ಅವಕಾಶ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications