ಪೆಟ್ರೋಲ್ ದರ: ರಾಮನ ಭಾರತದಲ್ಲಿ ರು. 93, ಸೀತೆಯ ನೇಪಾಳದಲ್ಲಿ ರು. 53, ರಾವಣನ ಲಂಕೆಯಲ್ಲಿ ರು. 51

ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದಿಂದ ಕೇಂದ್ರ ಬಜೆಟ್ ಮಂಡಿಸಿದ ನಂತರ, ರಾಜ್ಯಸಭೆಯಿಂದ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟ್ವಿಟ್ಟರ್ ನಲ್ಲಿ ಮಾಡಿದ ಪೋಸ್ಟ್ ಭಾರೀ ಸುದ್ದಿ ಆಗುತ್ತಿದೆ. ಬಿಜೆಪಿಯ ಸಂಸದ ಆಗಿರುವ ಸ್ವಾಮಿ, ಭಾರತದಲ್ಲಿನ ತೈಲ ಬೆಲೆಯನ್ನು ನೆರೆಯ ನೇಪಾಳ ಹಾಗೂ ಶ್ರೀಲಂಕಾದೊಂದಿಗೆ ಹೋಲಿಕೆ ಮಾಡಿದ್ದಾರೆ. ತಮ್ಮ ಅಭಿಪ್ರಾಯವನ್ನು ಮಂಡಿಸುವ ವಿಚಾರಕ್ಕೆ ಬಂದರೆ, ಸುಬ್ರಮಣಿಯನ್ ಸ್ವಾಮಿ ಯಾವ ಮುಲಾಜು ನೋಡದ ವ್ಯಕ್ತಿ.

ರಾಮನ ಭಾರತದಲ್ಲಿ ಪೆಟ್ರೋಲ್ ಲೀಟರ್ ಗೆ ರು. 93, ಸೀತೆಯ ನೇಪಾಳದಲ್ಲಿ ರು. 53 ಹಾಗೂ ರಾವಣನ ಲಂಕೆಯಲ್ಲಿ ರು. 51 ಎಂದು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ದೇಶದಲ್ಲಿ ಏರಿಕೆ ಆಗುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಬಗ್ಗೆ ಸುಬ್ರಮಣಿಯನ್ ಸ್ವಾಮಿ ಅಸಮಾಧಾನ ತುಂಬ ಸ್ಪಷ್ಟವಾಗುತ್ತದೆ.

ಈ ಮಧ್ಯೆ ಸತತ ಆರನೇ ದಿನ ಮೆಟ್ರೋ ನಗರಗಳಲ್ಲಿ ಪೆಟ್ರೋಲ್- ಡೀಸೆಲ್ ದರದಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ದೆಹಲಿ ಹಾಗೂ ಮುಂಬೈನಲ್ಲಿ ಕ್ರಮವಾಗಿ ಪೆಟ್ರೋಲ್ ಲೀಟರ್ ಗೆ ರು. 86.30 ಹಾಗೂ ರು. 92.86 ಇದೆ. ದೆಹಲಿಯಲ್ಲಿ ಡೀಸೆಲ್ ಲೀಟರ್ ಗೆ ರು. 76.48 ಮತ್ತು ಮುಂಬೈನಲ್ಲಿ ರು. 83.30 ಇದೆ.

ಪೆಟ್ರೋಲ್ ದರ: ರಾಮನ ಭಾರತದಲ್ಲಿ ರು. 93, ರಾವಣನ ಲಂಕೆಯಲ್ಲಿ ರು. 51

ಬಜೆಟ್ ನಲ್ಲಿ ತೈಲ ಬೆಲೆಯ ಮೇಲೆ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ಹಾಕಲಾಗಿದೆ. ಆದರೆ ಇದರಿಂದ ಬೆಲೆ ಏರಿಕೆ ಆಗುವುದಿಲ್ಲ ಎಂದು ಹೇಳಲಾಗಿದೆ. "ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆ ಆಗಲ್ಲ. ಜನರ ಮೇಲೆ ಹೆಚ್ಚಿನ ಹೊರೆ ಆಗುವುದಿಲ್ಲ. ತೆರಿಗೆಯ ಮರು ಹೊಂದಾಣಿಕೆಗಾಗಿ ಸೆಸ್ ಹಾಕಲಾಗಿದೆ. ಸರ್ಕಾರದಿಂದ ಸುಂಕ ಕಡಿಮೆ ಮಾಡಲಾಗಿದೆ. ಹೊಸದಾಗಿ ಕೃಷಿ ಸೆಸ್ ಶುರು ಮಾಡಲಾಗಿದೆ," ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+