For Quick Alerts
ALLOW NOTIFICATIONS  
For Daily Alerts

ಬೆಂಗಳೂರಿನ ಕಾಫಿ ಡೇ ಟೆಕ್‌ ಪಾರ್ಕ್ ಸ್ವಾಧೀನಕ್ಕೆ ಮುಂದಾದ ಬ್ಲ್ಯಾಕ್‌ ಸ್ಟೋನ್

|

ದಿವಂಗತ ಉದ್ಯಮಿ ಸಿದ್ದಾರ್ಥ್ ಒಡೆತನದ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಟೆಕ್ನಾಲಜಿ ಪಾರ್ಕ್ ಅನ್ನು ಬ್ಲ್ಯಾಕ್‌ಸ್ಟೋನ್ ಗ್ರೂಪ್ ಇಂಕ್. ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ ಎಂದು 'ಲೈವ್ ಮಿಂಟ್' ವರದಿ ಮಾಡಿದೆ. ಮೊದಲ ಹಂತವಾಗಿ 150 ಕೋಟಿ ರುಪಾಯಿ (21 ಮಿಲಿಯನ್ ಡಾಲರ್) ಅನ್ನು ಬುಧವಾರದಂದು ಪಾವತಿಸಲು ಸಿದ್ಧವಾಗಿದೆ ಎಂದು ಲೈವ್ ಮಿಂಟ್' ಹೇಳಿದೆ.

 

ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್‌ಗಾಗಿ ಮುಂದಿನ ಎರಡು ವಾರಗಳಲ್ಲಿ ಇನ್ನೂ 2,000 ಕೋಟಿ ರುಪಾಯಿ ಪಾವತಿಸಲಿದೆ ಎಂದು ಲೈವ್ ಮಿಂಟ್‌ಗೆ ಹೆಸರು ಹೇಳಲಿಚ್ಚಿಸದ ವ್ಯಕ್ತಿಯು ಮಾಹಿತಿ ನೀಡಿದ್ದಾರೆ. ಉಳಿದ 550 ಕೋಟಿ ರುಪಾಯಿ ಮೊತ್ತವನ್ನು ಒಂದು ವರ್ಷದೊಳಗೆ ಪಾವತಿಸಲಾಗುವುದು ಎಂದು ಕಂಪನಿ ತಿಳಿಸಿದೆ. ಟೆಕ್ನಾಲಜಿ ಪಾರ್ಕ್ ಖರೀದಿಯ ಒಟ್ಟು ಒಪ್ಪಂದವು 2,700 ಕೋಟಿ ಮೌಲ್ಯದ್ದಾಗಿದೆ.

 
ಕಾಫಿ ಡೇ ಟೆಕ್‌ ಪಾರ್ಕ್ ಸ್ವಾಧೀನಕ್ಕೆ ಮುಂದಾದ ಬ್ಲ್ಯಾಕ್‌ ಸ್ಟೋನ್

ಭಾರತದ ಅತಿದೊಡ್ಡ ಕಾಫಿ ಡೇ ಶಾಪ್‌ಗಳನ್ನು ನಡೆಸುತ್ತಿದ್ದ ಕಾಫಿ ಡೇ, ಕಳೆದ ವರ್ಷ ಸಂಸ್ಥಾಪಕ ವಿ. ಜಿ. ಸಿದ್ಧಾರ್ಥ್ ಅವರ ಅನಿರೀಕ್ಷಿತ ಮರಣದ ನಂತರ ಸಾಲವನ್ನು ಮರುಪಾವತಿಸಲು ಆಸ್ತಿಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದೆ. ಆಗಸ್ಟ್ 14 ರಂದು ಬೆಂಗಳೂರಿನ ಟೆಕ್ನಾಲಜಿ ಪಾರ್ಕ್ ಅನ್ನು ಬ್ಲ್ಯಾಕ್‌ಸ್ಟೋನ್‌ಗೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿಲ್ಲ ಎಂದು ಕಂಪನಿ ಘೋಷಿಸಿದರೂ, ಅದರ ಸಾಲಗಾರ ಯೆಸ್ ಬ್ಯಾಂಕ್ ಲಿಮಿಟೆಡ್ ಯಾವುದೇ ಆಕ್ಷೇಪಣೆ ಪ್ರಮಾಣಪತ್ರವನ್ನು ನೀಡದ ಕಾರಣ ಒಪ್ಪಂದವು ವಿಳಂಬವಾಯಿತು ಎಂದು ಬ್ಲೂಮ್‌ಬರ್ಗ್ ನ್ಯೂಸ್ ಡಿಸೆಂಬರ್‌ನಲ್ಲಿ ವರದಿ ಮಾಡಿದೆ.

ಈ ಒಪ್ಪಂದದ ಕುರಿತಾಗಿ ಬ್ಲಾಕ್‌ಸ್ಟೋನ್ ಮತ್ತು ಕಾಫಿ ಡೇ ಪ್ರತಿನಿಧಿಗಳು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ ಎಂದು ಲೈವ್ ಮಿಂಟ್ ವರದಿ ಮಾಡಿದೆ.

English summary

Blackstone Acquire Coffee Day's Tech Park In Bengaluru

Blackstone group inc. has proceeded with the acquisition of Coffee Day Enterprises Ltd.’s technology park in bengaluru
Story first published: Wednesday, February 26, 2020, 17:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X