ಬೆಂಗಳೂರಿನ ಪ್ರತಿಷ್ಠಿತಿ ಹೊಟೇಲ್‌ಗಳಲ್ಲಿ ಒಂದಾಗಿರುವ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದೆ. ಈ ಘಟನೆಗೆ ನಿಖರವಾದ ಕಾರಣ ಏನೆಂಬುದು ನಿಖರವಾಗಿ ತಿಳಿದು ಬಂದಿಲ್ಲ. ಕುಂದಲಹಳ್ಳಿಯಲ್ಲಿ ನಡೆದ ಘಟನೆಯಲ್ಲಿ ಹಲವು ಜನರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಸ್ಥಳಕ್ಕೆ ವೈಟ್‌ಫೀಲ್ಡ್, ಎಚ್‌ಎಎಲ್, ಇಂದಿರಾನಗರ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಸ್ಥಳಕ್ಕೆ ಎಫ್‌ಎಸ್‌ಎಲ್ ತಂಡ ಭೇಟಿ ನೀಡಿದ್ದು, ತಪಾಸಣೆ ನಡೆಸಿದೆ. ಮೇಲ್ನೋಟಕ್ಕಂತು ಈ ಸ್ಪೋಟ ಸಿಲಿಂಡರ್ ನಿಂದ ಅಥವಾ ಹೊಟೇಲ್‌ನಲ್ಲಿ ಇರುವ ಎಲಿಕ್ಟ್ರಿಕ್ ವಸ್ತುಗಳಿಂದ ಸಂಭವಿಸಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಸ್ಥಳೀಯರಿಂದ ಮಾಹಿತಿ
ಇನ್ನು ರಾಮೇಶ್ವರಂ ಹೊಟೇಲ್ ಮುಂಭಾಗದಲ್ಲಿ ಸ್ಫೋಟವಾಗಿದ್ದನ್ನು ನೋಡಿದ ಪ್ರತ್ಯಕ್ಷ ದರ್ಶಿಗಳ ಹೇಳಿಕೆಯನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಇದೇ ವೇಳೆ ಹೊಟೇಲ್‌ಗೆ ಮೂರು ಜನ ಅನುಮಾನಾಸ್ಪದ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ. ಇನ್ನು ಬ್ಲಾಸ್ಟ್ ಆಗುತ್ತಿದ್ದಂತೆ ಹೆದರಿದ ಜನ ಚೆಲ್ಲಾಪಿಲ್ಲಿ ಆಗಿ ಓಡಿದ್ದಾರೆ.
ಅನುಮಾನ
ಕೈಯಲ್ಲಿ ಏನೋ ಹಿಡಿದ ಮೂರು ಜನ ಸ್ಥಳದಲ್ಲಿ ನೋಡಿದ್ದಾರೆಂದು ಪ್ರತ್ಯೇಕ ದರ್ಶಿಗಳು ಹೇಳಿದ್ದಾರೆ. ಸಿಸಿಟಿವಿ ತಪಾಸಣೆ, ಎಫ್‌ಎಸ್‌ಎಲ್ ತಂಡದಿಂದ ಸ್ಥಳ ಪರಿಶೀಲನೆ ನಡೆದಿದೆ.
ಘಟನಾ ಸ್ಥಳದಲ್ಲಿ ಹಲವರ ಐ ಕಾರ್ಡ್ ಲಭ್ಯವಾಗಿದ್ದು, ಪೊಲೀಸರು ಇದರ ಬೆನ್ನು ಬಿದ್ದಿದ್ದಾರೆ. ರಾಮೆಶ್ವರಂ ಕೆಫೆಯಲ್ಲಿ ಯಾವುದೇ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂಬ ಆರೋಪಗಳ ಸಹ ಕೇಳಿ ಬಂದಿವೆ.
ಸ್ಫೋಟವು ಮಧ್ಯಾಹ್ನದ ವೇಳೆಗೆ ಸಂಭವಿಸಿದ್ದರಿಂದ ಹೊಟೇಲ್‌ನಲ್ಲಿ ಊಟಕ್ಕೆ ಬಂದಿದ್ದ ಗ್ರಾಹಕರು ಪೇಚೆಗೆ ಸಿಲುಕಿದ್ದಾರೆ. ಅಲ್ಲದೆ ಸ್ಫೋಟ ಗೊಂಡನಂತರ ಗಾಯಾಳುಗಳನ್ನು ಆಟೋ ಹಾಗೂ ಬೇರೆ ಬೇರೆ ವಾಹನಗಳಲ್ಲಿ ಪಕ್ಕದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಮೇಶ್ವರಂ ಕೆಫೆಯ ಆವರಣದಲ್ಲಿ ಸ್ಫೋಟ ಸಂಭವಿಸಿದ್ದರಿಂದ ಸ್ಫೋಟ ಗೊಂಡ ಸ್ಥಳ ಛಿದ್ರ ಛಿದ್ರವಾಗಿದೆ. ಈ ಸದ್ದುನ್ನು ಕೇಳಿದ ಸ್ಥಳೀಯರು ಆರಂಭದಲ್ಲಿ ವಾಹನದ ಟೈಯರ್ ಬ್ಲಾಸ್ಟ್ ಆಗಿರಬಹುದೆಂದು ಶಂಕೆ ವ್ಯಕ್ತ ಪಡಿಸಿದ್ದರು. ನಂತರ ರಾಮೇಶ್ವರಂ ಕೆಫೆಯ ಒಳಗಿನಿಂದ ಹೊಗೆ ಬರಲು ಆರಂಭಿಸಿತು. ಜನ ಹೊಟೇಲ್ ಸುತ್ತು ಜಮಾಯಿಸಲು ಆರಂಭಿಸಿದರು.


Click it and Unblock the Notifications