ಬೆಂಗಳೂರಿಗರೇ ಇಲ್ಲಿ ಕೇಳಿ..! ಇನ್ಮುಂದೆ ನಿಮ್ಮ ಜೇಬಿಗೆ ಕತ್ತರಿ ಬೀಳುವುದಂತೂ ಗ್ಯಾರಂಟಿ. ಇದು ಕಾಂಗ್ರೆಸ್ ಗ್ಯಾರಂಟಿ ಸರ್ಕಾರದ ಹೊಸ ವರ್ಷದ ಉಡುಗೊರೆ. ಹೌದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ( Bengaluru) ಇಂದು ಮಧ್ಯರಾತ್ರಿಯಿಂದಲೇ ಸಂಚಾರ ಜೀವನಾಡಿ ಬಿಎಂಟಿಸಿ ( BMTC) ಟಿಕೆಟ್ ದರ ಹೆಚ್ಚಳವಾಗಲಿದೆ.
ಸಚಿವ ಸಂಪುಟ ಸಭೆಯಲ್ಲಿ ಬಸ್ ಪ್ರಯಾಣ ದರ (bus fare hike) ಶೇ.15ರಷ್ಟು ಹೆಚ್ಚಳ ಮಾಡುವುದಕ್ಕೆ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದೆ. ಅದರಂತೆ, ಇಂದು ಮಧ್ಯರಾತ್ರಿಯಿಂದಲೇ ಹೊಸ ಬಸ್ ಟಿಕೆಟ್ ದರ ಜಾರಿಯಾಗಲಿದೆ. ಬನ್ನಿ, ಮೆಜೆಸ್ಟಿಕ್‌ನಿಂದ ನಿಮ್ಮ ಏರಿಯಾಗಳಿಗೆ ಎಷ್ಟು ದರ ಏರಿಕೆಯಾಗಿದೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ.

ಹೌದು, ಈ ಬಸ್ ಟಿಕೆಟ್ ಹೆಚ್ಚಳಕ್ಕೆ ಹೊಸ ವರ್ಷದ ಮರುದಿನ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್‌ನಲ್ಲಿ ಶೇ.15ರಷ್ಟು ಟಿಕೆಟ್ ದರ ಏರಿಕೆಗೆ ಅನುಮೋದನೆ ಸಿಕ್ಕಿದೆ ಹಿನ್ನೆಲೆಯಲ್ಲಿ ಸಾರಿಗೆ ನಿಗಮಗಳು ದರವನ್ನು ಏರಿಕೆ ಮಾಡಿದ್ದು, ಇಂದು ಮಧ್ಯರಾತ್ರಿಯಿಂದಲೇ ಹೊಸ ಬಸ್ ಟಿಕೆಟ್ ದರ ಜಾರಿಗೆ ಬರಲಿದೆ.
ಬಿಎಂಟಿಸಿಯಲ್ಲಿ ನೀವು ಇಲ್ಲಿಯವರೆಗೆ ದರ ಒಂದು ಸ್ಟೇಜ್‌ಗೆ 5 ರೂ. ಇತ್ತು. ಈಗ 1 ರೂಪಾಯಿ ಹೆಚ್ಚಳವಾಗಿ 6 ರೂ. ಆಗಿದೆ. ಹೀಗಾಗಿ ಬಸ್ಸು ಹತ್ತಿದ ನಂತರ ಬರುವ ಮೊದಲ ಸ್ಟೇಜ್‌ಗೆ 6 ರೂ. ದರವನ್ನು ನಿಗದಿ ಪಡಿಸಲಾಗಿದೆ. ಬಿಎಂಟಿಸಿ ಬಸ್ಸಿನಲ್ಲಿ 25 ಸ್ಟೇಜ್ ಇದ್ದು,ಪ್ರತಿನಿತ್ಯ ಸುಮಾರು 5,800 ಬಿಎಂಟಿಸಿ ಬಸ್ಸುಗಳು 1,800 ಮಾರ್ಗಗಳಲ್ಲಿ ಸಂಚಾರ ಮಾಡುತ್ತಿವೆ.

ಎಷ್ಟು ಏರಿಕೆ?
ಮೆಜೆಸ್ಟಿಕ್‌ನಿಂದ (Majestic) ಜೆಪಿನಗರ 6ನೇ ಹಂತಕ್ಕೆ ಹಳೆಯ ಟಿಕೆಟ್ ದರ 20 ರೂ ಆಗಿದ್ದರೆ ಇನ್ನು ಮುಂದೆ 24 ರೂ. ಆಗಲಿದೆ. ಮೆಜೆಸ್ಟಿಕ್‌ನಿಂದ ದೊಡ್ಡಬಳ್ಳಾಪುರಕ್ಕೆ ಹಳೆಯ ದರ 25 ರೂ. ಇದ್ದರೆ ಭಾನುವಾರದಿಂದ ಹೊಸ ದರ 30 ರೂಪಾಯಿ ಆಗಲಿವೆ.
ಪ್ರಮುಖ ಮಾರ್ಗಗಳ ಪ್ರಯಾಣ ದರದಗಳ ವ್ಯತ್ಯಾಸದ ವಿವರದ ಪಟ್ಟಿ ಇಲ್ಲಿದೆ
| ಕ್ರಮ ಸಂಖ್ಯೆ | ಮಾರ್ಗ ಸಂಖ್ಯೆ | ಎಲ್ಲಿಂದ | ಎಲ್ಲಿಗೆ | ಹಾಲಿ ಪ್ರಯಾಣ ದರ | ಪರಿಷ್ಕೃತ ಪ್ರಯಾಣ ದರ |
| 1 | 2 | ಕೆಂಪೇಗೌಡ ಬಸ್ ನಿಲ್ಯಾಣ | ಜೆ.ಪಿ.ನಗರ | 20 | 24 |
| 2 | 13 | ಶಿವಾಜಿನಗರ ಬಸ್ ನಿಲ್ದಾಣ | ಬನಶಂಕರಿ | 20 | 24 |
| 3 | 15E | ಕೆಂಪೇಗೌಡ ಬಸ್ ನಿಲ್ಯಾಣ | ಕುಮಾರಸ್ವಾಮಿ ಬಡಾವಣೆ | 25 | 28 |
| 4 | 254 | ಕೆಂಪೇಗೌಡ ಬಸ್ ನಿಲ್ಯಾಣ | ಬಿಟಿಎಂ ಬಡಾವಣೆ | 25 | 28 |
| 5 | 45D | ಕೆಂಪೇಗೌಡ ಬಸ್ ನಿಲ್ಯಾಣ | ಎಸ್ ಜಿ ಲೇ ಔಟ್ | 25 | 28 |
| 6 | 80A | ಕೆಂಪೇಗೌಡ ಬಸ್ ನಿಲ್ಯಾಣ | ನಂದಿನಿ ಲೇಔಟ್ | 25 | 28 |
| 7 | 90E | ಕೆಂಪೇಗೌಡ ಬಸ್ ನಿಲ್ಯಾಣ | ಯಶವಂತಪುರ ರೈಲ್ವೆ ನಿಲ್ದಾಣ | 20 | 23 |
| 8 | 96G | ಕೆಂಪೇಗೌಡ ಬಸ್ ನಿಲ್ಯಾಣ | ಶಂಕರನಾಗ್ ಬಸ್ ನಿಲ್ದಾಣ | 20 | 23 |
| 9 | 143 | ಕೃ.ರಾ.ಮಾರುಕಟ್ಟೆ | ನೀಲಸಂದ್ರ | 20 | 23 |
| 10 | 171G | ಕೆಂಪೇಗೌಡ ಬಸ್ ನಿಲ್ಯಾಣ | ಕೋರಮಂಗಲ 1ನೇ ಬ್ಲಾಕ್ | 25 | 28 |
| 11 | 210N | ಕೆಂಪೇಗೌಡ ಬಸ್ ನಿಲ್ಯಾಣ | ಉತ್ತರಹಳ್ಳಿ | 25 | 28 |
| 12 | 225C | ಕೆಂಪೇಗೌಡ ಬಸ್ ನಿಲ್ಯಾಣ | ಬಿಇಎಂಎಲ್ 5 ಹಂತ | 20 | 24 |
| 13 | 252 | ಕೆಂಪೇಗೌಡ ಬಸ್ ನಿಲ್ಯಾಣ | ಪೀಣ 2ನೇ ಹಂತ | 25 | 28 |
| 14 | 300E | ಶಿವಾಜಿನಗರ ಬಸ್ ನಿಲ್ದಾಣ | ಕೆ.ಆರ್.ಪುರಂ | 25 | 28 |
| 15 | KBS3A | ಕೆಂಪೇಗೌಡ ಬಸ್ ನಿಲ್ಯಾಣ | ಅತ್ತಿಬೆಲೆ | 25 | 30 |
| 16 | 276 | ಕೆಂಪೇಗೌಡ ಬಸ್ ನಿಲ್ಯಾಣ | ವಿದ್ಯಾರಣ್ಯಪುರ | 25 | 28 |
| 17 | 285M | ಕೆಂಪೇಗೌಡ ಬಸ್ ನಿಲ್ಯಾಣ | ದೊಡ್ಡಬಳ್ಳಾಪುರ | 25 | 30 |
KSRTC ಬಸ್‌ಗಳಲ್ಲೂ ಡಿಜಿಟಲ್ ಪೇಮೆಂಟ್ ಲಭ್ಯ: ಪ್ರಯಾಣಿಕರ ಮುಖದಲ್ಲಿ ಮಂದಹಾಸ
ಸಾರಿಗೆ ಸಂಸ್ಥೆಗಳು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ
ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳು ಆರ್ಥಿಕವಾಗಿ ಮುಂದುವರಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿಯ ಸುಧಾರಣೆಗೆ ಹಾಗೂ ಹಮ್ಮಿಕೊಳ್ಳಲಾಗಿರುವ ಯೋಜನೆಗಳನ್ನು ಜಾರಿಗೊಳಿಸಲು ಪ್ರಯಾಣಿಕ ಬಸ್ ದರಗಳನ್ನು ಶೇ.33ರಷ್ಟು ಹೆಚ್ಚಿಸಲು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಶೇ.42ರಷ್ಟು ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು ಇದಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟದಲ್ಲಿ ಸಭೆಯಲ್ಲಿ ಚರ್ಚಿ ಮಾಡಿದ ನಂತರ ಶೇ.15ರಷ್ಟು ಟಿಕೆಟ್ ದರ ಪರಿಷ್ಕರಣೆ ಮಾಡಲು ಗ್ರೀನ್ ಸಿಗ್ನಲ್ ಸಿಕ್ಕಿದೆ.
ಇನ್ನೂ ಸಾರಿಗೆ ಇಲಾಖೆಯಲ್ಲಿ ಸಿಬ್ಬಂದಿಗಳ ಭವಿಷ್ಯ ನಿಧಿ, ನಿವೃತ್ತ ನೌಕರರ ವೇತನ,ಗ್ರಾಚ್ಯುಟಿ, ಪೂರೈಕೆದಾರರ ಬಾಕಿ ಬಿಲ್‌ಗಳು, ಡೀಸೆಲ್ ಸರಬರಾಜು ಬಿಲ್, ಮೋಟಾರ್ ವಾಹನ ತೆರಿಗೆ ಪಾವತಿ ಮಾಡದಿರುವುದು ಮತ್ತು ಇತರ ಬಿಲ್‌ಗಳ ಬಾಕಿಯಿಂದಾಗಿ ನಾಲ್ಕು ಸಾರಿಗೆ ಸಂಸ್ಥೆಗಳ ಮೇಲೆ ಆರ್ಥಿಕ ಹೊಣೆಗಾರಿಕೆ ಜಾಸ್ತಿ ಇದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications