ಬಿಎಂಡಬ್ಲ್ಯೂ ಎಂ 1000 ಆರ್‌ಆರ್ ಸ್ಪೋರ್ಟ್ಸ್ ಬೈಕ್ ಅನ್ನು ಭಾರತದಲ್ಲಿ ಗುರುವಾರ ಬಿಡುಗಡೆ ಮಾಡಿದೆ. ಈ ಬೈಕ್‌ನ ಆರಂಭಿಕ ಬೆಲೆ 42 ಲಕ್ಷ ರೂ (ಎಕ್ಸ್‌ಶೋರೂಂ) ದರದಲ್ಲಿ ಬಿಡುಗಡೆ ಮಾಡಲಾಗಿದೆ.
ಇದೇ ವೇಳೆಯಲ್ಲಿ ಹೈ-ಸ್ಪೆಕ್ ರೂಪಾಂತರವನ್ನು 45 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ದರದಲ್ಲಿ ಬಿಡುಗಡೆ ಮಾಡಲಾಗಿದೆ. ಬಿಎಂಡಬ್ಲ್ಯು ಎಂ 1000 ಆರ್‌ಆರ್, ಕಂಪನಿಯ ಮೊದಲ ಉನ್ನತ ಕಾರ್ಯಕ್ಷಮತೆಯ ಸ್ಪೋರ್ಟ್ಸ್ ಬೈಕ್ ಆಗಿದೆ.
M ಸರಣಿಯಲ್ಲಿ ಸ್ಪೋರ್ಟ್ಸ್ ಬೈಕ್ ಬಿಡುಗಡೆ
ಬಿಎಂಡಬ್ಲ್ಯೂ ಕಂಪನಿಯು ಎಂ ಸರಣಿಯ ಅಡಿಯಲ್ಲಿ ಉತ್ತಮ ಪರ್ಫಾರ್ಮೆನ್ಸ್ ಕಾರುಗಳನ್ನು ತಯಾರಿಸುತ್ತದೆ. ಆದರೆ ಈಗ ಕಂಪನಿಯು ಈ ಸರಣಿಯಲ್ಲಿ ಶಕ್ತಿಯುತ ಬೈಕುಗಳನ್ನು ಸಹ ನೀಡುತ್ತಿದೆ. BMW M 1000R R ನ ವಿನ್ಯಾಸವನ್ನು S 1000 RR ನಿಂದ ಪಡೆಯಲಾಗಿದೆ. ಈ ಬೈಕು 5 ಕೆಜಿ ಹಗುರವಾಗಿದ್ದು ಮತ್ತು S 1000 ಆರ್ಆರ್ ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ.
ಬಲಿಷ್ಟ ಎಂಜಿನ್ ಹೊಂದಿರುವ ಬೈಕ್
ಬಿಎಂಡಬ್ಲ್ಯೂ ಎಂ 1000 ಆರ್ಆರ್ಗೆ 999 ಸಿಸಿ 4-ಸಿಲಿಂಡರ್ ಎಂಜಿನ್ ಅನ್ನು ಬಳಸುತ್ತದೆ, ಇದು 209 ಬಿಹೆಚ್‌ಪಿ ಶಕ್ತಿಯನ್ನು ಮತ್ತು 113 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಒದಗಿಸುತ್ತದೆ. ಇದು ಎಸ್ 1000 ಆರ್ಆರ್ ಗಿಂತ 5 ಬಿಹೆಚ್‌ಪಿ ಹೆಚ್ಚಿನ ಶಕ್ತಿಯನ್ನು ಉತ್ಪಾದಿಸುತ್ತದೆ.
192 ಕೆಜಿ ತೂಕದ ಬೈಕ್
ಹೆಚ್ಚು ಶಕ್ತಿಶಾಲಿ ಎಂಜಿನ್ ಹೊಂದಿರುವ ಬಿಎಂಡಬ್ಲ್ಯೂ ಎಂ 1000 ಆರ್ಆರ್ ಒಟ್ಟು 192 ಕೆಜಿ ತೂಕವನ್ನು ಹೊಂದಿದೆ. ಈ ರೇಸಿಂಗ್ ಬೈಕು , ಆಧುನಿಕ ಯುಗದ ರೇಸಿಂಗ್‌ಗೆ ಹೊಂದಾಣಿಕೆಯಾಗುವ ಅನುಭವ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ಈ ಬೈಕು ಡ್ಯುಯಲ್ ಎಲ್ಇಡಿ ಹೆಡ್‌ಲೈಟ್, ಎಲ್ಇಡಿ ಟೈಲ್ ಲೈಟ್ ಮತ್ತು ಎಲ್ಇಡಿ ಟರ್ನ್ ಇಂಡಿಕೇಟರ್ ಹೊಂದಿದೆ. ಲೈಟ್ ವೈಟ್, ರೇಸಿಂಗ್ ಬ್ಲೂ ಮೆಟಾಲಿಕ್ ಮತ್ತು ರೇಸಿಂಗ್ ರೆಡ್ ಎಂಬ ಮೂರು ಬಣ್ಣ ಆಯ್ಕೆಗಳಲ್ಲಿ ಈ ಬೈಕು ನೀಡಲಾಗುತ್ತದೆ.
ಕಳೆದ ತಿಂಗಳು ಕ್ರೂಸರ್ ಬೈಕ್ ಬಿಡುಗಡೆ
ಕಂಪನಿಯು ಕಳೆದ ತಿಂಗಳು ಮಾತ್ರ ಭಾರತದಲ್ಲಿ ಆರ್ ನೈನ್ ಟಿ ಮತ್ತು ಆರ್ ನೈನ್ ಟಿ ಸ್ಕ್ರಾಂಬರ್ ಬೈಕುಗಳನ್ನು ಬಿಡುಗಡೆ ಮಾಡಿದೆ. ಇದರ ಜೊತೆಗೆ ಕಂಪನಿಯು ಕ್ರೂಸರ್ ಬೈಕ್ ಅನ್ನು ಸಹ ಬಿಡುಗಡೆ ಮಾಡಿದೆ. ಬಿಎಂಡಬ್ಲ್ಯು ಆರ್ 18 ಕ್ಲಾಸಿಕ್ ಅನ್ನು ಭಾರತದಲ್ಲಿ 24 ಲಕ್ಷ ರೂ (ಎಕ್ಸ್ ಶೋ ರೂಂಗೆ) ಬಿಡುಗಡೆ ಮಾಡಲಾಗಿದೆ.


Click it and Unblock the Notifications