ನಟ- ನಟಿಯರು, ಕ್ರಿಕೆಟ್ ಆಟಗಾರರು, ವಿವಿಧ ಕ್ಷೇತ್ರದ ಸೆಲೆಬ್ರಿಟಿಗಳು ಬಳಸುವ ಕಾರುಗಳ ಬಗ್ಗೆ ಸಣ್ಣದಾದರೂ ಕುತೂಹಲ ಇರುತ್ತದೆ. ಈ ಲೇಖನದಲ್ಲಿ ಹಿಂದಿ ಚಿತ್ರರಂಗದ ಹೀರೋಯಿನ್ ಗಳು ಬಳಸುವ ಕಾರುಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಈ ಹೀರೋಯಿನ್ ಗಳು ಬಳಸುವ ಕಾರುಗಳ ಬೆಲೆ ಕೋಟಿ ಕೋಟಿಗಳಲ್ಲಿ ಇದೆ.
ಈ ಹೀರೋಯಿನ್ ಗಳ ದುಬಾರಿ ಜೀವನಕ್ಕೆ ಇಷ್ಟು ದೊಡ್ಡ ಬೆಲೆಯ ಖರೀದಿ ಅಷ್ಟೇನೂ ವಜ್ಜೆ ಆಗಲಾರದು. ಆದರೆ ಸಾಮಾನ್ಯರ ಪಾಲಿಗೆ ಇಡೀ ಜೀವಮಾನ ದುಡಿದರೂ ಈ ಕಾರಿನ ಬೆಲೆಯನ್ನು ಸಹ ದುಡಿಯುವುದು ಕೆಲ ಬಾರಿ ಕಷ್ಟವಾಗುತ್ತದೆ. ಇರಲಿ, ಹಿಂದಿ ಸಿನಿಮಾ ಜಗತ್ತಿನ ಟಾಪ್ ಹೀರೋಯಿನ್ ಗಳು, ನಟಿಯರ ಬಳಿ ಇರುವ ದುಬಾರಿ ಕಾರುಗಳ ಬಗ್ಗೆ ಇಂಟರೆಸ್ಟಿಂಗ್ ಡೀಟೇಲ್ಸ್ ಇಲ್ಲಿದೆ.
ಪ್ರಿಯಾಂಕಾ ಚೋಪ್ರಾ
ಮುಂಬೈನಲ್ಲಿ ಇರುವ ಹೀರೋಯಿನ್ ಗಳ ಪೈಕಿ ರೋಲ್ಸ್ ರಾಯ್ಸ್ ಇರುವುದು ಪ್ರಿಯಾಂಕಾ ಚೋಪ್ರಾ ಬಳಿ ಮಾತ್ರ. ಪ್ರಿಯಾಂಕಾ ಮುಂಬೈನಲ್ಲಿ ಇರುವಾಗ ಬಳಸುವುದು ರೋಲ್ಸ್ ರಾಯ್ಸ್ ಘೋಸ್ಟ್. ಈ ಕಾರಿನ ಬೆಲೆ 5.25 ಕೋಟಿ ರುಪಾಯಿ. ಪ್ರಿಯಂಕಾ ಚೋಪ್ರಾ ಇಷ್ಟು ದುಬಾರಿ ಕಾರು ಖರೀದಿ ಮಾಡಬಲ್ಲರು.
ದೀಪಿಕಾ ಪಡುಕೋಣೆ
ನಟಿ ದೀಪಿಕಾ ಪಡುಕೋಣೆ ಬಳಿ ಸಾಕಷ್ಟು ಕಾರುಗಳಿವೆ. ಆದರೆ ಆಕೆ ಹೆಚ್ಚು ಬಳಕೆ ಮಾಡುವುದು ಮರ್ಸಿಡಿಸ್ S500 ಸೆಡಾನ್ ಕಾರು. ಇದರ ಬೆಲೆ ಕೋಟಿ ರುಪಾಯಿಗಿಂತ ಹೆಚ್ಚಾಗುತ್ತದೆ. ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಇದು ಲಭ್ಯವಿದ್ದು, ಬೆಲೆ 1.67 ಕೋಟಿ ರುಪಾಯಿ.
ಐಶ್ವರ್ಯಾ ರೈ ಬಚ್ಚನ್
ಐಶ್ವರ್ಯಾ ರೈ ಬಚ್ಚನ್ ಬಳಸುವುದು ಮರ್ಸಿಡಿಸ್ ಎಸ್ ಕ್ಲಾಸ್ ಕಾರನ್ನೇ ಹೆಚ್ಚು. ಅಭಿಷೇಕ್ ಹಾಗೂ ಐಶ್ವರ್ಯಾ ಬಳಿ ಪೋರ್ಶೆ ಕಾರು ಇದ್ದರೂ ಹೆಚ್ಚಾಗಿ ಬಳಸುವುದು ಮರ್ಸಿಡಿಸ್ ಕಾರುಗಳನ್ನೇ. ಇದರ ಬೆಲೆ 1.41 ಕೋಟಿ.
ಆಲಿಯಾ ಭಟ್
ಹಳೇ ಕಾರುಗಳ ಸಂಗ್ರಹ ಮಾಡುವುದು ಆಲಿಯಾ ಹವ್ಯಾಸ್. ಆದರೆ ಆಕೆ ದೈನಂದಿನ ಬಳಕೆಗೆ ರೇಂಜ್ ರೋವರ್ ವೋಗ್ ಇಟ್ಟುಕೊಂಡಿದ್ದಾರೆ. ಈ ವಾಹನದ ಬೆಲೆ 1.70 ಕೋಟಿ ರುಪಾಯಿಗೂ ಹೆಚ್ಚು. ಆಲಿಯಾ ಬಳಿ ಮರ್ಸಿಡಿಸ್ ಎಸ್ ಕ್ಲಾಸ್ ಕಾರು ಸಹ ಇದೆ. ಅದರೆ ಅದನ್ನು ಬಳಸುವುದು ಅಪರೂಪ. ರೇಂಜ್ ರೋವರ್ ಕಾರು ವಿಶಾಲವಾಗಿ ಇರುವುದರಿಂದ ಅದನ್ನೇ ಬಳಸುತ್ತಾರೆ.
ಸೋನಂ ಕಪೂರ್
ಸೋನಂ ಕಪೂರ್ ಬಳಿ ಇರುವ ಕಾರನ್ನು ಆಕೆಯ ಇಪ್ಪತ್ತೊಂದನೇ ವರ್ಷದ ಜನ್ಮ ದಿನಕ್ಕೆ ತಂದೆ ಅನಿಲ್ ಕಪೂರ್ ಉಡುಗೊರೆ ನೀಡಿದ್ದಾರೆ. ಅದು ಮರ್ಸಿಡಿಸ್ S400 ಕಾರು. ಬೆಲೆ 1.28 ಕೋಟಿ ರುಪಾಯಿ.
ಮಲೈಕಾ ಅರೋರಾ
ಮಲೈಕಾ ಅರೋರಾ ರೇಂಜ್ ರೋವರ್ ವೋಗ್ ಕಾರನ್ನು ಬಳಸುತ್ತಾರೆ. ಅದರ ಬೆಲೆ 1.78 ಕೋಟಿ ರುಪಾಯಿ.
ಅನುಷ್ಕಾ ಶರ್ಮಾ
ಕ್ರಿಕೆಟರ್ ವಿರಾಟ್ ಕೊಹ್ಲಿ ಹೆಂಡತಿ ಅನುಷ್ಕಾ ಶರ್ಮಾ ರೇಂಜ್ ರೋವರ್ ವೋಗ್ ಬಳಸುತ್ತಾರೆ. ಆದರೆ ಆಲಿಯಾ, ಮಲೈಕಾ ಬಳಸುವುದಕ್ಕಿಂತ ಇದು ದುಬಾರಿ. ಅನುಷ್ಕಾ ಬಳಿ ಇರುವ ಕಾರಿನ ಬೆಲೆ 2.27 ಕೋಟಿ ರುಪಾಯಿ.
ಸನ್ನಿ ಲಿಯೋನ್
ನೀಲಿ ಚಿತ್ರಗಳ ಮಾಜಿ ತಾರೆ ಸನ್ನಿ ಲಿಯೋನ್ ಬಳಿ ಇರುವುದು ವಿಶಿಷ್ಟವಾದ ವಾಹನ. ಆ ಕಾರಿನ ಹೆಸರು ಮಸರೆಟಿ. ಬೆಲೆ 1.40 ಕೋಟಿ ರುಪಾಯಿ. ಈ ವಾಹನದ ವೈಶಿಷ್ಟ್ಯ ಏನೆಂದರೆ, ಜಗತ್ತಿನಲ್ಲಿ ಇದು 450 ಕಾರುಗಳು ಮಾತ್ರ ಇವೆ. ಅದರಲ್ಲಿ ಒಂದು ಕಾರು ಸನ್ನಿ ಲಿಯೋನ್ ಬಳಿ ಇದೆ.
ಕರೀನಾ ಕಪೂರ್
ಸೈಫ್ ಅಲಿ ಖಾನ್- ಕರೀನಾ ಕಪೂರ್ ಬಳಿ ಸಾಕಷ್ಟು ವಾಹನಗಳಿವೆ. ಆದರೂ ಕರೀನಾ ಕಪೂರ್ ಹೆಚ್ಚು ಬಳಕೆ ಮಾಡುವುದು ರೇಂಜ್ ರೋವರ್ ವೋಗ್ ಕಾರನ್ನೇ. ಅದರ ಸದ್ಯದ ಮಾರುಕಟ್ಟೆ ಮೌಲ್ಯ 1.74 ಕೋಟಿ ರುಪಾಯಿ.


Click it and Unblock the Notifications