ಬಾಷ್ ಲಿಮಿಟೆಡ್ 3ನೇ ತ್ರೈಮಾಸಿಕ: ಆದಾಯ ಶೇ.2.6 ರಷ್ಟು ಹೆಚ್ಚಳ

ಬೆಂಗಳೂರು, ಫೆ.09: ತಂತ್ರಜ್ಞಾನ ಮತ್ತು ಸೇವೆಗಳ ಪೂರೈಕೆಯಲ್ಲಿ ಮುಂಚೂಣಿಯಲ್ಲಿರುವ ಬಾಷ್ ಲಿಮಿಟೆಡ್ 2021-2022 ನೇ ಹಣಕಾಸು ಸಾಲಿನ 3 ನೇ ತ್ರೈಮಾಸಿಕದಲ್ಲಿ ತನ್ನ ಕಾರ್ಯಾಚರಣೆಗಳಲ್ಲಿ 3,109 ಕೋಟಿ ರೂಪಾಯಿಗಳಷ್ಟು ಆದಾಯ ಗಳಿಸಿದೆ. ಈ ಮೂಲಕ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.2.6 ರಷ್ಟು ಹೆಚ್ಚಳ ಸಾಧಿಸಿದೆ. ಭಾರತದಲ್ಲಿ ಒಟ್ಟಾರೆ ಆಟೋಮೋಟಿವ್ ಮಾರುಕಟ್ಟೆಯ ಉತ್ಪಾದನೆ (2ಡಬ್ಲ್ಯೂ ಹೊರತುಪಡಿಸಿ) ಶೇ.12 ರಷ್ಟು ಕಡಿಮೆಯಾಗಿರುವುದು ವ್ಯಾಪಾರದ ಬೆಳವಣಿಗೆಗೆ ಈ ಹೆಚ್ಚಳವು ಕಾರಣವಾಗಿದೆ.

ತೆರಿಗೆ ಪೂರ್ವ ಲಾಭವು 336 ಕೋಟಿ ರೂಪಾಯಿಗಳಾಗಿದ್ದು, ಕಾರ್ಯಾಚರಣೆಗಳ ಒಟ್ಟು ಆದಾಯದ ಶೇ.10.8 ರಷ್ಟಾಗಿದೆ. ತೆರಿಗೆ ನಂತರದ ಲಾಭವು 235 ಕೋಟಿ ರೂಪಾಯಿಗಳಾಗಿದ್ದು, ಕಾರ್ಯಾಚರಣೆಗಳ ಒಟ್ಟು ಆದಾಯದ ಶೇ.7.6 ರಷ್ಟಾಗಿದೆ.

ಈ ವರ್ಷ ಬಾಷ್ ಭಾರತದಲ್ಲಿ ತನ್ನ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಬಾಷ್ ಭಾರತದಲ್ಲಿ 1922 ರಲ್ಲಿ ಕೋಲ್ಕತ್ತಾದಲ್ಲಿ ತನ್ನ ಮೊದಲ ಮಾರಾಟ ಏಜೆನ್ಸಿಯನ್ನು ಆರಂಭಿಸಿತು. ಇದರೊಂದಿಗೆ ಆರಂಭವಾದ ಬಾಷ್ ಪ್ರಯಾಣದಿಂದ ಇದೀಗ 18 ಉತ್ಪಾದನಾ ಘಟಕಗಳು ಮತ್ತು 7 ಅಭಿವೃದ್ಧಿ ಹಾಗೂ ಅಪ್ಲಿಕೇಷನ್ ಸೆಂಟರ್ ಗಳ ಸ್ಥಾಪನೆ, 31,500 ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಭಾರತದಲ್ಲಿ ಬಾಷ್ ಸಮೂಹದ ಅಧ್ಯಕ್ಷ ಮತ್ತು ಬಾಷ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಸೌಮಿತ್ರ ಭಟ್ಟಾಚಾರ್ಯ ಅವರು ಮಾತನಾಡಿ, ''ಭಾರತದಲ್ಲಿ ಬಾಷ್ 100 ವರ್ಷವನ್ನು ಪೂರ್ಣಗೊಳಿಸಿರುವುದು ಕೇವಲ ಪರಂಪರೆಯಲ್ಲ, ಇದೊಂದು ಪ್ರಮುಖ ಮೈಲಿಗಲ್ಲಾಗಿದೆ. ಕಂಪನಿಯು ಕಳೆದ ಹಲವು ದಶಕಗಳಲ್ಲಿ ಹಲವಾರು ಮೈಲಿಗಲ್ಲುಗಳನ್ನು ಸ್ಥಾಪಿಸಿದೆ ಮತ್ತು ಮೇಕ್ ಇನ್ ಇಂಡಿಯಾ' ನಿರ್ಮಾಣ ಮಾಡುವಲ್ಲಿ ಹಲವಾರು ಸಾಧನೆಗಳನ್ನು ಮಾಡಿದೆ. ಭಾರತದಲ್ಲಿ ನಾವು 8,000 ಕೋಟಿ ರೂಪಾಯಿಗಳಿಗೂ ಅಧಿಕ ಹೂಡಿಕೆ ಮಾಡಿದ್ದೇವೆ'' ಎಂದು ತಿಳಿಸಿದರು.

ಬಾಷ್ ಲಿಮಿಟೆಡ್ 3ನೇ ತ್ರೈಮಾಸಿಕ: ಆದಾಯ ಶೇ.2.6 ರಷ್ಟು ಹೆಚ್ಚಳ

''ಇದಲ್ಲದೇ, ಬಾಷ್ ಇಂಡಿಯಾ ಅಡ್ವಾನ್ಸ್ಡ್ ಆಟೋಮೋಟಿವ್ ಟೆಕ್ನಾಲಾಜೀಸ್ ಗೆ ಮುಂದಿನ ಐದು ವರ್ಷಗಳಲ್ಲಿ ಇನ್ನೂ 1,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ ಆತ್ಮನಿರ್ಭರ್ ಭಾರತ್ ನಿರ್ಮಾಣ ಮಾಡಲು ತನ್ನದೇ ಆದ ಕೊಡುಗೆ ನೀಡಲಿದೆ. ಇದೇ ವೇಳೆ ಮೊಬಿಲಿಟಿ ಮಾರ್ಕೆಟ್ ಪ್ಲೇಸ್ ಮತ್ತು ಮೊಬಿಲಿಟಿ ಕ್ಲೌಡ್ ಪ್ಲಾಟ್ ಫಾರ್ಮ್ ವಿಸ್ತರಣೆಗೆ 1000 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ಹೂಡಿಕೆ ಮಾಡಲಾಗುತ್ತದೆ'' ಎಂದು ಅವರು ಹೇಳಿದರು.

2030 ರ ವೇಳೆಗೆ ಭಾರತದಲ್ಲಿ ಪ್ರತಿ ಮೂರು ವಾಹಗಳಲ್ಲಿ ಒಂದು ವಾಹನ ವಿದ್ಯುತ್ ಚಾಲಿತವಾಗಿರುತ್ತದೆ ಎಂದು ಬಾಷ್ ಭವಿಷ್ಯ ನುಡಿದಿದೆ. ಈ ದಿಸೆಯಲ್ಲಿ ವಿದ್ಯುದ್ದೀಕರಣ ಅಭಿವೃದ್ಧಿಗಳನ್ನು ಹೆಚ್ಚು ಮಾಡಲು ಅಗತ್ಯವಿರುವ ಬಹು ಅವಕಾಶಗಳನ್ನು ಕಂಪನಿಯು ಪರಿಶೀಲಿಸುತ್ತಿದೆ ಮತ್ತು ಸುಸ್ಥಿರವಾದ ಹಾಗೂ ಸ್ವಾವಲಂಬಿ ಸಾರಿಗೆ ಪರಿಸರ ವ್ಯವಸ್ಥೆಯನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸಲಿದೆ.

ಮೂರನೇ ತ್ರೈಮಾಸಿಕದಲ್ಲಿ ವ್ಯವಹಾರ ವಿಭಾಗದ ಸಾಧನೆಯ ಪಕ್ಷಿನೋಟ

2021-22 ನೇ ಸಾಲಿನ 3 ನೇ ತ್ರೈಮಾಸಿಕದಲ್ಲಿ ಮಾರಾಟದಲ್ಲಿ ಶೇ.3.6 ರಷ್ಟು ಹೆಚ್ಚಳವಾಗಿದ್ದು, ಮಾರುಕಟ್ಟೆ ನಂತರದಲ್ಲಿ ಡೀಸೆಲ್ ಉತ್ಪನ್ನಗಳಿಗೆ ಮತ್ತು ಪೂರೈಕೆ ಜಾಲದಲ್ಲಿ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಶೇ.29 ರಷ್ಟು ಹೆಚ್ಚಳವಾಗಿದೆ. ಇನ್ನು ಮೊಬಿಲಿಟಿ ಸಲೂಶನ್ಸ್ ಹೊರಗಿನ ವಿಭಾಗದಲ್ಲಿ ಬಾಷ್ ಶೇ.11 ರಷ್ಟು ಹೆಚ್ಚಳ ಸಾಧಿಸಿದ್ದು, ಇದಕ್ಕೆ ಪ್ರಮುಖ ಕಾರಣ ಬಿಲ್ಡಿಂಗ್ ಟೆಕ್ನಾಲಜಿ ವಿಭಾಗದಲ್ಲಿನ ವಹಿವಾಟು ಹೆಚ್ಚಳವಾಗಿರುವುದಾಗಿದೆ.

ಮತ್ತೆ ಬಾಷ್ ಲಿಮಿಟೆಡ್‌ಗೆ ಅತ್ಯುತ್ತಮ ಕರ್ತವ್ಯ ನಿರ್ವಹಣೆ ಸ್ಥಳ ಎಂಬ ಪ್ರಮಾಣಪತ್ರ

ಬಾಷ್ ಲಿಮಿಟೆಡ್‌ಗೆ ಮತ್ತೆ ಪ್ರತಿಷ್ಠಿತ ಅತ್ಯುತ್ತಮ ಕರ್ತವ್ಯ ನಿರ್ವಹಣೆ ಸ್ಥಳ ಎಂಬ ಪ್ರಮಾಣ ಪತ್ರ ಲಭಿಸಿದೆ. ಇದು ಎರಡನೇ ಬಾರಿ ಲಭಿಸಿರುವ ಪ್ರಮಾಣಪತ್ರವಾಗಿದೆ. ಉದ್ಯೋಗಿಗಳು ಮತ್ತು ಉದ್ಯೋಗದಾತರ ನಡುವೆ ಇರುವ ಅತ್ಯುತ್ತಮ ಬಾಂಧವ್ಯವನ್ನು ಪರಿಗಣಿಸಿ ಜಾಗತಿಕ ಮಟ್ಟದಲ್ಲಿ 'ಗೋಲ್ಡ್ ಸ್ಟಾಂಡರ್ಡ್' ಎಂದು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಅತ್ಯಧಿಕ ವಿಶ್ವಾಸ, ಅತ್ಯಧಿಕ ಕಾರ್ಯಕ್ಷಮತೆ ಸಂಸ್ಕೃತಿ, ಗೌರವ, ಮುಕ್ತ, ಹೆಮ್ಮೆ ಸೇರಿದಂತೆ ಇನ್ನಿತರೆ ಅಂಶಗಳಲ್ಲಿ ತನ್ನೆಲ್ಲಾ ಕಾರ್ಮಿಕರನ್ನು ಗೌರವದಿಂದ ಕಾಣುತ್ತಿರುವುದನ್ನು ಪರಿಗಣಿಸಿ ಕಂಪನಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+