ನಾವು ಎಲ್ಲದರೂ ಹೊರಗಡೆ ಹೋದರೆ ಬಾಟಲ್ ನೀರಿನ ಮೋರೆ ಹೋಗುತ್ತಿವೆ. ಮತ್ತು ಅದು ನಾವು ಹೆಚ್ಚು ಸುರಕ್ಷಿತ ಎಂದು ನಂಬುತ್ತೇವೆ.ಆದರೆ ಅದು ನಿಜವಾಗಿಯೂ ಎಷ್ಟು ಸುರಕ್ಷಿತ ಎಂದು ನೀವು ಯೋಚಿಸಿದ್ದೀರಾ? ಹಾಗಿದ್ರೆ ನೀವು ಈ ಸುದ್ದಿಯನ್ನು ಓದಲೇಬೇಕು.
ಹೌದು, ರಾಜ್ಯ ಸರ್ಕಾರ ಇತ್ತೀಚಿಗೆ ಆಹಾರ ಸುರಕ್ಷತೆ ಇಲಾಖೆ ನಡೆಸಿದ ನೀರಿನ ಬಾಟಲಿಗಳ ಗುಣಮಟ್ಟ ಪರೀಕ್ಷೆಯಲ್ಲಿ 183 ಬ್ರ್ಯಾಂಡ್‌ಗಳು ಕಳಪೆ ಎಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಕೇವಲ ಕೆಲವೇ ಬ್ರ್ಯಾಂಡ್‌ಗಳು ಈ ಮಾನದಂಡವನ್ನು ಪೂರೈಸುತ್ತವೆ.

ಕುರಿತು ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹೊರಗಡೆ ಹೋದಲ್ಲಿ ಬಂದಲ್ಲಿ ನೀರು ಖರೀದಿಸಿ ಕುಡಿಯುವವರು ಎಚ್ಚರ ವಹಿಸುವುದು ಅಗತ್ಯ ಎಂದು ಎಚ್ಚರಿಕೆಯ ಮಾಹಿತಿಯನ್ನು ತಿಳಿಸಿದ್ದಾರೆ.
ರಾಜ್ಯಾದ್ಯಂತ ಗುಣಮಟ್ಟದ ವಿಶ್ಲೇಷಣೆಗಾಗಿ ಸಂಗ್ರಹಿಸಲಾದ ಬಾಟಲಿ ನೀರಿನ ಮಾದರಿಗಳಲ್ಲಿ ಮೂರನೇ ಎರಡರಷ್ಟು ಸಂಪೂರ್ಣವಾಗಿ ಅಸುರಕ್ಷಿತ ಅಥವಾ ಕಳಪೆ ಗುಣಮಟ್ಟದ್ದಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದರು. ಪರೀಕ್ಷೆ ಗುಣಮಟ್ಟದ ಮಾದರಿಗೆ ಒಟ್ಟು 296 ಬಾಟಲಿಗಳ ಮಾದರಿಗಳಿದ್ದು,ಅವುಗಳಲ್ಲಿ 255 ಬಾಟಲಿಗಳನ್ನು ಇಲ್ಲಿಯವರೆಗೆ ವಿಶ್ಲೇಷಿಸಲಾಗಿದೆ ಎಂದು ವರದಿಗಳು ಸಹ ಆಗಿವೆ.
ಪರೀಕ್ಷೆ ಗುಣಮಟ್ಟದ ಮಾದರಿಗೆ ಸಂಗ್ರಹಿಸಿದ ನೀರಿನ ಬಾಟಲ್‌ನ ಬ್ರ್ಯಾಂಡ್‌ಗಳಲ್ಲಿ72 ಸುರಕ್ಷಿತವೆಂದು ಕಂಡುಬಂದಿದೆ (28%), 95 ಅಸುರಕ್ಷಿತವಾಗಿದ್ದವು ಮತ್ತು 88 ಮಾದರಿಗಳು ಗುಣಮಟ್ಟವಿಲ್ಲದವು. ಉಳಿದ ಮಾದರಿಗಳ ವಿಶ್ಲೇಷಣೆ ಪ್ರಗತಿಯಲ್ಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಮಾಹಿತಿಯನ್ನು ತಿಳಿಸಿದ್ದರು.
ಮಾದರಿಗಳು ಸಮೀಕ್ಷೆಗೆ ಮಾತ್ರ ಆಗಿರುವುದರಿಂದ, ಈಗ ರಾಜ್ಯದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತವು ಕಂಪನಿಯಿಂದ ಮಾದರಿಗಳನ್ನು ತೆಗೆದುಕೊಂಡು ಅಸುರಕ್ಷಿತ ನೀರನ್ನು ಪೂರೈಸುವವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು.
ಬಾಟಲ್ ನೀರಿನಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳು
ಪ್ಯಾಕ್ ಮಾಡಿದ ಬಾಟಲಿ ಕುಡಿಯುವ ನೀರಿನಲ್ಲಿರುವ ಮೈಕ್ರೋಪ್ಲಾಸ್ಟಿಕ್‌ಗಳು ಹೆಚ್ಚುತ್ತಿರುವ ಅಂಶವಿದೆ. 2024 ರಲ್ಲಿ, ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನಲ್ಲಿ ಪ್ರಕಟವಾದ ಅಧ್ಯಯನವು, ಬಾಟಲಿಗಳಲ್ಲಿ ಹಿಂದೆ ತಿಳಿದಿದ್ದಕ್ಕಿಂತ 10 ರಿಂದ 100 ಪಟ್ಟು ಹೆಚ್ಚು ಪ್ಲಾಸ್ಟಿಕ್ ಕಣಗಳು ಇರಬಹುದು ಎಂದು ಸೂಚಿಸಿದೆ. ಪ್ರತಿ ಲೀಟರ್ ಬಾಟಲ್ ನೀರಿಗೆ ಸರಾಸರಿ 240,000 ಪ್ಲಾಸ್ಟಿಕ್ ತುಣುಕುಗಳನ್ನು ಪತ್ತೆಹಚ್ಚಿದ್ದಾರೆ.
ಮೈಕ್ರೋಪ್ಲಾಸ್ಟಿಕ್‌ಗಳನ್ನು ಸೇವಿಸುವುದರಿಂದ ದೀರ್ಘಕಾಲೀನ ಆರೋಗ್ಯದ ಪರಿಣಾಮಗಳನ್ನು ಇನ್ನೂ ಅಧ್ಯಯನ ಮಾಡಲಾಗುತ್ತಿದ್ದರೂ, ವಿಷಕಾರಿ ರಾಸಾಯನಿಕಗಳನ್ನು ಸಾಗಿಸುವ ಮೂಲಕ ಅಥವಾ ಕಾಲಾನಂತರದಲ್ಲಿ ದೇಹದಲ್ಲಿ ಸಂಗ್ರಹವಾಗುವ ಮೂಲಕ ಅವು ಹಾನಿಕಾರಕವಾಗಬಹುದು.ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಸೂಚಿಸುತ್ತಾರೆ.
ನಕಲಿ ಬಾಟಲ್
ಈ ಆರೋಗ್ಯದ ಅಪಾಯಗಳ ಜೊತೆಗೆ, ನಕಲಿ ಬಾಟಲ್ ನೀರು ಕೂಡ ಗಮನಾರ್ಹ ಸಮಸ್ಯೆಯನ್ನು ತಂದುವೊಡ್ಡುತ್ತಿದೆ.
ಅಕ್ಟೋಬರ್ 2024 ರಲ್ಲಿ, ಬಾಗ್‌ಪತ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಜಿತೇಂದ್ರ ಪ್ರತಾಪ್ ಸಿಂಗ್ ಅವರಿಗೆ 'ಬಿಲ್ಸೇರಿ' ಎಂಬ ನೀರಿನ ಬಾಟಲಿಯನ್ನು ನೀಡಿದಾಗ ಸ್ವಲ್ಪ ಅನುಮಾನ ವ್ಯಕ್ತಪಡಿಸಿದರು. ಬಾಟಲಿಯಲ್ಲಿ ಅಗತ್ಯವಾದ ಆಹಾರ ಪರವಾನಗಿ ಸಂಖ್ಯೆ ಇಲ್ಲದಿರುವುದು ಕಂಡುಬಂದಾಗ, ಅವರು ತನಿಖೆ ನಡೆಸಲು ಆಹಾರ ಸುರಕ್ಷತಾ ಇಲಾಖೆಗೆ ಆದೇಶಿಸಿದರು ಎಂದು ವದರಿಗಳು ಸಹ ಆಗಿವೆ.
ಈ ಘಟನೆಯು ಗುಣಮಟ್ಟದ ಪರಿಶೀಲನೆಗೆ ಒಳಗಾಗದ ನಕಲಿ ಉತ್ಪನ್ನಗಳ ಮೇಲೆ ಬೆಳಕನ್ನು ಚಲುವ ಪ್ರೌಆವನ್ನು ಹೊಂದಿದೆ.
ರಾಷ್ಟ್ರೀಯ ಮಟ್ಟದ ಬ್ರ್ಯಾಂಡ್‌ಗಳು ಸಾಮಾನ್ಯವಾಗಿ ಉನ್ನತ ಗುಣಮಟ್ಟವನ್ನು ಕಾಯ್ದುಕೊಂಡಿದ್ದರೂ, ಹೆಚ್ಚಿನ ಸಮಸ್ಯಾತ್ಮಕ ಮಾದರಿಗಳನ್ನು ಸ್ಥಳೀಯ ತಯಾರಕರಿಂದ ಪಡೆಯಲಾಗಿದೆ ಎಂದು ಹೇಳಿದ್ದರು.
ಬಾಟಲಿ ನೀರಿನ ಮೂಲವು ಟ್ಯಾಪ್ ನೀರು ಅಥವಾ ಪುರಸಭೆಯ ಪೂರೈಕೆ ಸೇರಿದಂತೆ ಬದಲಾಗಬಹುದು.
'ಅತಿ ಅಪಾಯಕಾರಿ ಆಹಾರ ವರ್ಗ'ದಲ್ಲಿ ಕುಡಿಯುವ ನೀರು ಕೂಡ ಎಂದು ಸಚಿವರು ಮಾಹಿತಿಯನ್ನು ತಿಳಿಸಿದ್ದರು .
ಬಾಟಲಿಯ ನೀರಿನಲ್ಲಿ ಹಾನಿಕಾರಕ ಸೂಕ್ಷ್ಮಾಣುಜೀವಿಗಳು ಅಥವಾ ರಾಸಾಯನಿಕಗಳಿಂದ ಕಲುಷಿತಗೊಳ್ಳುವ ಸಾಧ್ಯತೆ ಹೆಚ್ಚು. ಇವುಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ, ಸಂಗ್ರಹಿಸದಿದ್ದರೆ ಅಥವಾ ತಯಾರಿಸದಿದ್ದರೆ ಆಹಾರಕ್ಕೆ ಸಂಭಂದಿಸಿದ ಕಾಯಿಲೆಗಳು ಅಥವಾ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚು. ಇದರರ್ಥ ಅವುಗಳು ಕಠಿಣ ತಪಾಸಣೆಗೆ ಒಳಗಾಗಬೇಕಾಗುತ್ತದೆ.
ನೀರಿನ ಸುರಕ್ಷತೆಗೆ ಹೆಚ್ಚಿನ ಮಹತ್ವವನ್ನು ನೀಡಬೇಕು ಎಮದು ಅವರು ಒತ್ತಿ ಹೇಳಿದ್ದರು.
ಒಟ್ಟಾರೆ ಹೇಳುವುದಾರೆ ಬಾಟಲಿ ನೀರು ಹೆಚ್ಚು ಸುರಂಕ್ಷಿತವಲ್ಲ.


Click it and Unblock the Notifications