ಬೌನ್ಸ್.. ಸದ್ಯ ಬೆಂಗಳೂರಿನಲ್ಲಿ ಭಾರೀ ಹವಾ ಸೃಷ್ಟಿಸಿರುವ ಬಾಡಿಗೆ ದ್ವಿಚಕ್ರ ವಾಹನ ಪೂರೈಸುವ ಸಂಸ್ಥೆ. ದಿನನಿತ್ಯ ಸಾವಿರಾರು ಜನರು ಇದರ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಕಡಿಮೆ ಬೆಲೆ ಹಾಗೂ ನಿಗಧಿತ ಸಮಯದಲ್ಲಿ ತಲುಪಲು ಬೌನ್ಸ್ ಸ್ಕೂಟರ್‌ಗಿಂತ ಉತ್ತಮ ಸೌಲಭ್ಯ ಮತ್ತೊಂದಿಲ್ಲ.
ಬೆಂಗಳೂರಿನಲ್ಲಿ ದಿನಕ್ಕೆ ಏನಿಲ್ಲವೆಂದರೂ 1 ಲಕ್ಷ ಸವಾರರು ಬೌನ್ಸ್ ಸ್ಕೂಟರ್‌ಗಳನ್ನು ಬಳಸುತ್ತಿದ್ದಾರೆ. ಇಷ್ಟು ದಿನ ಗ್ರಾಹಕರು ಬೌನ್ಸ್‌ಗೆ ಹಣ ನೀಡುವುದಷ್ಟೇ ಅಲ್ಲದೇ, ಇದೀಗ ಹಣ ಗಳಿಕೆಗೂ ಅವಕಾಶ ನೀಡಿದೆ. ಗ್ರಾಹಕರು ಪೆಟ್ರೋಲ್ ಹಾಕಿಸಿ ಹಣ ಸಂಪಾದಿಸಬಹುದು.

ಬೌನ್ಸ್ ಆ್ಯಪ್‌ನಲ್ಲಿ ಸ್ಕೂಟರ್ ಆಯ್ಕೆಗೂ ಮುನ್ನ ಆಫರ್‌ಗಳನ್ನು ಬಿತ್ತರಿಸುತ್ತದೆ. 100 ರುಪಾಯಿ ಪೆಟ್ರೋಲ್ ಹಾಕಿಸಿದರೆ 150 ರುಪಾಯಿ ಬೌನ್ಸ್ ಕ್ಯಾಶ್ ಬ್ಯಾಕ್ ಬರಲಿದೆ. ಜೊತೆಗೆ ನೀವು ಆಯ್ಕೆ ಮಾಡಿದ ಪೇಟಿಎಂ ಅಥವಾ ಬೌನ್ಸ್ ಕ್ಯಾಶ್ ಮೂಲಕ ಪುನಃ 48 ಗಂಟೆಯೊಳಗೆ 100 ರುಪಾಯಿ ಹಣವನ್ನು ಪಡೆಯಬಹುದು. ಒಟ್ಟಾರೆ 100 ರುಪಾಯಿ ಪೆಟ್ರೋಲ್ ಹಾಕಿಸಿದರೆ 250 ರುಪಾಯಿ ಸಿಕ್ಕಿದಂತಾಗುತ್ತದೆ.
ಬೌನ್ಸ್ ನ ಈ ಆಫರ್ ಜೊತೆಗೆ 200 ರುಪಾಯಿ ಪೆಟ್ರೋಲ್ ಹಾಕಿಸಿದರೆ 150 ರುಪಾಯಿ ಬೌನ್ಸ್ ಕ್ಯಾಶ್ ಬ್ಯಾಕ್ ಬರಲಿದೆ. ಜೊತೆಗೆ 200 ರುಪಾಯಿ ಪೇಟಿಎಂ ವ್ಯಾಲೆಟ್‌ಗೆ ಅಥವಾ ಬೌನ್ಸ್ ಕ್ಯಾಶ್‌ಗೆ ಹಣ ಪಡೆಯಬಹುದು. ಒಟ್ಟಾರೆ 200 ರುಪಾಯಿ ಪೆಟ್ರೋಲ್ ಹಾಕಿಸಿದರೆ 350 ರುಪಾಯಿ ಹಣ ಹಿಂದಿರುಗಿ ಪಡೆಯಬಹುದು. ಆದರೆ ಈ ಆಫರ್ ಕೆಲವು ಆಯ್ದ ಸ್ಕೂಟರ್‌ಗಳಿಗೆ ಮಾತ್ರ ಸೀಮಿತವಾಗಿದೆ.
ಇಷ್ಟೆಲ್ಲಾ ಉತ್ತಮ ಸೌಲಭ್ಯವನ್ನು ಕಲ್ಪಿಸಿರುವ ಬೌನ್ಸ್ ಸಂಸ್ಥೆಯ ಸ್ಕೂಟರ್‌ಗಳನ್ನು ಕೆಲವು ಗ್ರಾಹಕರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಎಲ್ಲೆಂದರಲ್ಲಿ ನಿಲ್ಲಿಸಿ, ಹೆಲ್ಮೆಟ್, ಟೈಯರ್ ಬಿಡಿ ಭಾಗಗಳನ್ನು ಎಗರಿಸಿ ಕಂಪನಿಗೆ ನಷ್ಟ ತಂದೊಡ್ಡಿದ ಪ್ರಕರಣಗಳು ದಾಖಲಾಗಿವೆ.
ಕೆಲವು ಭಾಗಗಳಲ್ಲಂತೂ ಬೌನ್ಸ್ ಸ್ಕೂಟರ್‌ಗಳನ್ನು ಚರಂಡಿಗೆ ಹಾಕಿದ ಘಟನೆಗಳು, ಪೆಟ್ರೋಲ್ ಕದ್ದಿರೋ ಘಟನೆಗಳು ನಡೆದಿದೆ. ಹೀಗಾಗಿ ಗ್ರಾಹಕರು ಈ ಸೌಲಭ್ಯವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿದರೆ ಒಳಿತು.


Click it and Unblock the Notifications