ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021ನೇ ಸಾಲಿನ ಬಜೆಟ್ ನಲ್ಲಿ ಆಟೋಮೊಬೈಲ್ ಕ್ಷೇತ್ರಕ್ಕೆ ಆದ್ಯತೆ ನೀಡಿದ್ದು, ಹಳೆಯ ವಾಹನಗಳನ್ನು ಸ್ಕ್ರಾಪ್ ಮಾಡುವ ಹೊಸ ನೀತಿಯನ್ನು ಘೋಷಿಸಿದ್ದಾರೆ.
20 ವರ್ಷದಷ್ಟು ಹಳೆಯದಾದ ಖಾಸಗಿ ವಾಹನಗಳು ಹಾಗೂ 15 ವರ್ಷಗಳಷ್ಟು ಹಳೆಯದಾದ ವಾಣಿಜ್ಯ ವಾಹನಗಳನ್ನು ಸ್ಕ್ರಾಪ್‌ಗೆ ಹಾಕುವ ಸಂಬಂಧ ಹೊಸ ಸ್ಕ್ರಾಪೇಜ್ ನೀತಿಯನ್ನು ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡುತ್ತಿದ್ದಂತೆ ಆಟೋಮೊಬೈಲ್ ಕಂಪನಿಗಳ ಷೇರುಗಳು ಭರ್ಜರಿ ಆರಂಭಪಡೆದುಕೊಂಡಿವೆ.

ಏರಿಕೆ ಕಂಡ ಷೇರುಗಳು (12:00)
ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್: 762. 25 (15 ರು ಹೆಚ್ಚಳ, ಶೇ 2.09 ಏರಿಕೆ)
ಎಂಆರ್ ಎಫ್ ಲಿಮಿಟೆಡ್ : 85783.95 (1714.80ರು ಹೆಚ್ಚಳ, ಶೇ 2.04 ಏರಿಕೆ)
ಅಶೋಕ್ ಲೇಲ್ಯಾಂಡ್: 112.50 (1.70 ರು ಹೆಚ್ಚಳ, ಶೇ 1.53 ಏರಿಕೆ)
ಮಾರುತಿ ಸುಜುಕಿ ಇಂಡಿಯಾ ಲಿ: 7316.30 (109.70 ರು ಹೆಚ್ಚಳ, ಶೇ 1.52 ಏರಿಕೆ)
ಬಾಷ್ ಲಿಮಿಟೆಡ್: 15540.70 (213.20 ರು ಹೆಚ್ಚಳ, ಶೇ 1.39ಏರಿಕೆ)
ಮದರ್ ಸನ್ ಸುಮಿ ಸಿಸ್ಟಮ್ ಲಿ: 146.65 (1.70 ರು ಹೆಚ್ಚಳ, ಶೇ 1.17ಏರಿಕೆ)


Click it and Unblock the Notifications