ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಸೋಮವಾರ ಬೆಳಿಗ್ಗೆ 11 ಗಂಟೆಗೆ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ವಿವಿಧ ಕ್ಷೇತ್ರಗಳು ಸಾಕಷ್ಟು ನಿರೀಕ್ಷೆಗಳ ಜೊತೆಗೆ ಆತ್ಮನಿರ್ಭರ್ ಭಾರತ್ ಕೇಂದ್ರ ಬಜೆಟ್‌ನ ಪ್ರಮುಖ ವಿಷಯವಾಗಿದೆ.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಬಜೆಟ್ ಪ್ರತಿಗಳನ್ನು ಮುದ್ರಿಸಲಿಲ್ಲ. ಸಾಮಾನ್ಯವಾಗಿ, ಬಜೆಟ್ ಕಾಗದವನ್ನು ಹಣಕಾಸು ಸಚಿವಾಲಯದ ಆಂತರಿಕ ಮುದ್ರಣಾಲಯದಲ್ಲಿ ಮುದ್ರಿಸಲಾಗುತ್ತದೆ. ಈ ಬಜೆಟ್ ಪ್ರತಿ ಮುದ್ರಿಸುವ ಹದಿನೈದು ದಿನಗಳ ಈ ಕಾರ್ಯದಲ್ಲಿ ಸುಮಾರು 100 ಉದ್ಯೋಗಿಗಳು ಭಾಗಿಯಾಗುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ ಬಜೆಟ್ ಪ್ರತಿಯನ್ನು ಸರ್ಕಾರ ಮುದ್ರಿಸಿಲ್ಲ. ಕೋವಿಡ್ ಹಿನ್ನಲೆಯಲ್ಲಿ ಬಜೆಟ್ ಮುದ್ರಣಕ್ಕೆ ತಡೆ ನೀಡಲಾಗಿದೆ. ಬಜೆಟ್ ಮಂಡನೆ ವೇಳೆ ಕೂಡ ಸಂಸದರಿಗೆ ಹಾರ್ಡ್ ಕಾಪಿ ಬದಲು ಸಾಫ್ಟ್ ಕಾಪಿ ನೀಡಲು ನಿರ್ಧರಿಸಲಾಗಿದೆ.
ಬಜೆಟ್ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರಲಾಗುತ್ತಿರುವ ಹಲ್ವಾ (ಸಿಹಿ ಖಾದ್ಯ) ಸಮಾರಂಭ ಈ ಬಾರಿ ನಡೆಯುವುದಿಲ್ಲ. ಬಜೆಟ್ ಮುದ್ರಣ ಸಂದರ್ಭದಲ್ಲಿ ಬಜೆಟ್ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಸಿಬ್ಬಂದಿಗಳಿಗೆ ಸಿಹಿ ಖಾದ್ಯ ವಿತರಿಸಲಾಗುತ್ತದೆ. ಈ ಬಾರಿ ಈ ಸಿಹಿ ಹಂಚುವ ಸಂಭ್ರಮವಿರುವುದಿಲ್ಲ.

ಜೊತೆಗೆ ಕೋವಿಡ್ ಮಾರ್ಗಸೂಚಿಗಳು ಇನ್ನು ಜಾರಿಯಲ್ಲಿರುವ ಹಿನ್ನಲೆ ಸಾಮಾಜಿಕ ಅಂತರದಂತಹ ಸುರಕ್ಷತಾ ನಿಯಮವನ್ನು ಕಾಪಾಡಲಾಗುವುದು. ಮೊದಲ ಬಾರಿಗೆ ಸಂಸತ್ ಸದಸ್ಯರು ಮೂರು ವಿಭಿನ್ನ ಸ್ಥಳಗಳಲ್ಲಿ ಕೂರಲಿದ್ದಾರೆ.
ಕೇಂದ್ರ ಬಜೆಟ್ 2021: ನೇರ ಪ್ರಸಾರ ವೀಕ್ಷಣೆ ಹೇಗೆ ?
ಕೇಂದ್ರ ಬಜೆಟ್ 2021 ಲೋಕಸಭಾ ಟಿವಿಯಲ್ಲಿ ಲೈವ್ ಪ್ರಸಾರವಾಗಲಿದೆ. ಯೂಟ್ಯೂಬ್ ಮತ್ತು ಟ್ವಿಟರ್‌ನಂತಹ ಅನೇಕ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಬಜೆಟ್ ಪ್ರಸ್ತುತಿಯನ್ನು ಲೈವ್ ಆಗಿ ಪ್ರಸಾರ ಮಾಡುತ್ತವೆ.
ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 29 ರಂದು ತಮ್ಮ ಸಾಂಪ್ರದಾಯಿಕ ಭಾಷಣದಲ್ಲಿ ಈ ವರ್ಷದ ಬಜೆಟ್ ಹೇಗಿರುತ್ತದೆ ಎಂಬುದರ ಬಗ್ಗೆ ಸುಳಿವು ನೀಡಿದರು.
"ಬಹುಶಃ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಬಜೆಟ್ ಅನ್ನು ನಾಲ್ಕು-ಐದು ಮಿನಿ ಬಜೆಟ್‌ಗಳ ಸರಣಿಯ ಭಾಗವಾಗಿ ನೋಡಲಾಗುವುದು ಎಂದು ನನಗೆ ವಿಶ್ವಾಸವಿದೆ" ಎಂದು ಸಂಸತ್ತಿನ ಬಜೆಟ್ ಅಧಿವೇಶನ ಪ್ರಾರಂಭವಾಗುವ ಮೊದಲು ಪ್ರಧಾನಿ ನರೇಂದ್ರ ಮೋದಿ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.


Click it and Unblock the Notifications