ಬಜೆಟ್ 2021ರ ಮಂಡನೆಗೆ ಎಲ್ಲ ಸಿದ್ಧತೆ ಆಗಿದೆ. ಈ ವರ್ಷದ ಬಜೆಟ್ ಭಾಷಣದ ಕಾಲಾವಧಿ ಎಷ್ಟಿರಬಹುದು ಎಂಬುದು ಸದ್ಯದ ಕುತೂಹಲವಾಗಿದೆ. ನಿರ್ಮಲಾ ಮೂರನೇ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿದ್ದು, ದೀರ್ಘಾವಧಿ ಭಾಷಣಗಳಿಗೆ ಹೆಸರಿಟ್ಟಂತೆ ಈ ಹಿಂದೆ ಬಜೆಟ್ ಮಂಡನೆ ಮಾಡಿದ್ದಾರೆ.
ಕಳೆದ ವರ್ಷ ಅಸ್ವಾಸ್ಥ್ಯ ಕಾಣಿಸಿಕೊಂಡು ಭಾಷಣ ಮೊಟಕುಗೊಳಿಸಿದ್ದರು ನಿರ್ಮಲಾ. ಆದರೂ ಅದು ಸಾರ್ವಕಾಲಿಕ ದೀರ್ಘ ಅವಧಿಯ ಭಾಷಣ ಅದಾಗಿತ್ತು. 162 ನಿಮಿಷ, ಅಂದರೆ 2 ಗಂಟೆ 42 ನಿಮಿಷಗಳ ಕಾಲ ಅಷ್ಟು ಹೊತ್ತಿಗಾಗಲೇ ಬಜೆಟ್ ಭಾಷಣ ಮಾಡಿದ್ದರು ನಿರ್ಮಲಾ ಸೀತಾರಾಮನ್. 2019ರಲ್ಲಿ ಅವರೇ ಮಂಡಿಸಿದ್ದ ದೀರ್ಘಾವಧಿ ಭಾಷಣದ ದಾಖಲೆಯನ್ನು ಮುರಿದಿದ್ದರು. ಆಗ ಕೂಡ ಅಸ್ವಾಸ್ಥ್ಯದ ಕಾರಣಕ್ಕೆ ಎರಡು ಪುಟಗಳನ್ನು ಓದಿರಲಿಲ್ಲ.
ಅದಕ್ಕೂ ಮುನ್ನ, 2019ರಲ್ಲಿ ನಿರ್ಮಲಾ ಸೀತಾರಾಮನ್ ಅವರು 2 ಗಂಟೆ 15 ನಿಮಿಷ ಬಜೆಟ್ ಭಾಷಣ ಓದಿದ್ದರು. ಸಾಮಾನ್ಯವಾಗಿ ಬಜೆಟ್ ಭಾಷಣದ ಅವಧಿ 90ರಿಂದ 120 ನಿಮಿಷ ಇರುತ್ತದೆ.

ಈ ಮಧ್ಯೆ, ಪ್ರಧಾನಿ ನರೇಂದ್ರ ಮೋದಿಯವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಹೊಗಳಿದ್ದಾರೆ. ಭಾರತದ ಇತಿಹಾಸದಲ್ಲೇ ಬಹುಶಃ ಮೊದಲ ಬಾರಿಗೆ ಹಣಕಾಸು ಸಚಿವರೊಬ್ಬರು ನಾಲ್ಕರಿಂದ ಐದು ಮಿನಿ ಬಜೆಟ್ ನೀಡಬೇಕಾಯಿತು. 2020ರಲ್ಲಿ ವಿವಿಧ ಪ್ಯಾಕೇಜ್ ರೂಪದಲ್ಲಿ ನೀಡಿದರು. ಆದ್ದರಿಂದ ಈ ಬಜೆಟ್ ಕೂಡ ಆ ಸರಣಿಯ ಭಾಗದಂತೆ ಇರಲಿದೆ ಎಂಬ ವಿಶ್ವಾಸ ಇದೆ ಎಂದಿದ್ದಾರೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications