ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಈ ವರ್ಷದ ಬಜೆಟ್ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದೆ.
ಒಂದು ನಿರ್ದಿಷ್ಟ ಹಣಕಾಸು ವರ್ಷದ ಸರ್ಕಾರದ ಆದಾಯ ಮತ್ತು ವೆಚ್ಚವನ್ನು ಒಳಗೊಂಡಿರುವ ಒಟ್ಟುಗೂಡಿಸಿರುವ ವಾರ್ಷಿಕ ಹಣಕಾಸು ವರದಿಯು ಕೇಂದ್ರ ಬಜೆಟ್ ಆಗಿದೆ. ಹೀಗೆ ಬಜೆಟ್ ಮಂಡಿಸುವ ಪ್ರಕ್ರಿಯೆ ಮತ್ತು ಬಜೆಟ್ ದಾಖಲೆಗಳಲ್ಲಿ ಹಲವು ಕ್ಲಿಷ್ಟ ಪದಗಳು ಇರುತ್ತದೆ. ಅವುಗಳ ಕುರಿತ ಮಾಹಿತಿ ಈ ಕೆಳಗಿದೆ.
ಕೇಂದ್ರ ಬಜೆಟ್ ಎಂದರೇನು?
ಸರಕಾರದ ನಿರೀಕ್ಷಿತ ಆದಾಯ ಮತ್ತು ವೆಚ್ಚಗಳನ್ನು ಕುರಿತು ತಯಾರಿಸಿದ ಅಂದಾಜು ಪಟ್ಟಿಯನ್ನು ಬಜೆಟ್ ಎಂದು ಕರೆಯಲಾಗುತ್ತದೆ. ಸರ್ಕಾರವು ಹಣಕಾಸಿನ ವರ್ಷದಲ್ಲಿ ವ್ಯಯಿಸಲು ಉದ್ದೇಶಿಸಿರುವ ಹಣದ ಅಂದಾಜು ಪಟ್ಟಿಯನ್ನು ಬಜೆಟ್ ಒಳಗೊಂಡಿರುತ್ತದೆ.

ನೇರ ಮತ್ತು ಪರೋಕ್ಷ ತೆರಿಗೆ ಎಂದರೇನು?
ಸರ್ಕಾರ ನೇರವಾಗಿ ತೆರಿಗೆದಾರರಿಂದ ಮತ್ತು ಸ್ವತ್ತುಗಳ ಮೇಲೆ ಮೂಲದಲ್ಲಿಯೇ ಕಡಿತಗೊಳಿಸುವ ತೆರಿಗೆಯನ್ನು ನೇರ ತೆರಿಗೆ ಎನ್ನಬಹುದು. ಪರೋಕ್ಷ ತೆರಿಗೆಗಳನ್ನು ಸರಕು ಮತ್ತು ಸೇವೆಗಳ ಮೇಲೆ ವಿಧಿಸಲಾಗುತ್ತದೆ.
ಕೊರತೆ ಮುಂಗಡ ಪತ್ರ
ಇದರಲ್ಲಿ ಸರಕಾರದ ಅಂದಾಜು (ಸಮಗ್ರ ) ಆದಾಯಕ್ಕಿಂತ ಅಂದಾಜು (ಸಮಗ್ರ ) ವೆಚ್ಚವು ಅಧಿಕವಾಗಿರುತ್ತದೆ. ಆಧುನಿಕ ಆರ್ಥಿಕತೆಗಳೆಲ್ಲವೂ ಸಹ ಸುಖೀ ರಾಜ್ಯ ಸ್ಥಾಪನೆಯ ಧ್ಯೇಯವನ್ನು ಹೊಂದಿರುವುದರಿಂದ ಕೊರತೆ ಮುಂಗಡ ಪತ್ರವು ಜನಪ್ರಿಯವಾಗಿದೆ.
ಸೀಮಾ ಸುಂಕ
ಸರಕುಗಳನ್ನು ದೇಶಕ್ಕೆ ಆಮದು ಮಾಡಿಕೊಳ್ಳುವಾಗ ಅಥವಾ ದೇಶದಿಂದ ರಫ್ತು ಮಾಡುವಾಗ ವಿಧಿಸುವ ಸುಂಕಗಳು ಮತ್ತು ಅವುಗಳನ್ನು ಆಮದುದಾರರು ಅಥವಾ ರಫ್ತುದಾರರು ಪಾವತಿಸುತ್ತಾರೆ. ಸಾಮಾನ್ಯವಾಗಿ, ಇವುಗಳನ್ನು ಗ್ರಾಹಕರಿಗೆ ತಲುಪಿಸಲಾಗುತ್ತದೆ.
ವಿತ್ತೀಯ ಕೊರತೆ
ಸರ್ಕಾರದ ಅಂದಾಜು ಆದಾಯಕ್ಕಿಂತ, ಅಂದಾಜು ವೆಚ್ಚವು ಅಧಿಕವಾಗಿರುತ್ತದೆ. ಆಧುನಿಕ ಆರ್ಥಿಕತೆಗಳೆಲ್ಲವೂ ಸಹ ಸುಖೀ ರಾಜ್ಯ ಸ್ಥಾಪನೆಯ ಧ್ಯೇಯವನ್ನು ಹೊಂದಿರುವುದರಿಂದ ಕೊರತೆ ಮುಂಗಡ ಪತ್ರವು ಜನಪ್ರಿಯವಾಗಿದೆ. 'ಕೊರತೆ' ಎನ್ನುವುದು 'ಹೆಚ್ಚುವರಿ'ಗೆ ವಿರುದ್ಧವಾಗಿದೆ. ವಿತ್ತೀಯ ಕೊರತೆಯು ಸರ್ಕಾರವು ಗಳಿಸುವ ಆದಾಯವು ಅದರ ಒಟ್ಟು ಖರ್ಚುಗಿಂತ ಕಡಿಮೆಯಾದಾಗ ಹಣಕಾಸಿನ ಕೊರತೆಯಾಗುತ್ತದೆ. ಆದಾಯವು ಮುಖ್ಯವಾಗಿ ತೆರಿಗೆಗಳು ಮತ್ತು ಸರ್ಕಾರ ನಡೆಸುವ ವ್ಯವಹಾರಗಳಿಂದ ಉತ್ಪತ್ತಿಯಾಗುತ್ತದೆ. ಸರ್ಕಾರ ಸಾಲ ಪಡೆದ ಹಣವನ್ನು ಇಲ್ಲಿ ಪರಿಗಣಿಸಲಾಗುವುದಿಲ್ಲ.
ಪ್ರಾಥಮಿಕ ಕೊರತೆ
ಸರ್ಕಾರದ ಆದಾಯಕ್ಕಿಂತ ವೆಚ್ಚದ ಪ್ರಮಾಣ ಎಷ್ಟು ಜಾಸ್ತಿಯಾಗಿದೆ ಎಂಬುದನ್ನು ಲೆಕ್ಕಹಾಕಿದಾಗ ವಿತ್ತೀಯ ಕೊರತೆಯ ಪ್ರಮಾಣ ಸಿಗುತ್ತದೆ. ವಿತ್ತೀಯ ಕೊರತೆಯಲ್ಲಿ ಸರ್ಕಾರವು ಪಾವತಿಸಬೇಕಾಗಿರುವ ಬಡ್ಡಿಯ ಮೊತ್ತವನ್ನು ಕಳೆದಾಗ ಸಿಗುವ ಮೊತ್ತವೇ ಪ್ರಾಥಮಿಕ ಕೊರತೆ.
ಹಣಕಾಸು ನೀತಿ
ಒಟ್ಟಾರೆ ಆದಾಯ ಮತ್ತು ಖರ್ಚಿನ ಮಟ್ಟಕ್ಕೆ ಸಂಬಂಧಿಸಿದಂತೆ ಇದು ಸರ್ಕಾರದ ಕ್ರಮಗಳು. ಹಣಕಾಸಿನ ನೀತಿಯನ್ನು ಬಜೆಟ್ ಮೂಲಕ ಜಾರಿಗೆ ತರಲಾಗುತ್ತದೆ ಮತ್ತು ಸರ್ಕಾರವು ಆರ್ಥಿಕತೆಯ ಮೇಲೆ ಪ್ರಭಾವ ಬೀರುವ ಪ್ರಾಥಮಿಕ ಸಾಧನವಾಗಿದೆ. ಹಣಕಾಸು ನೀತಿಯ ಸರಿಯಾದ ಅನುಷ್ಠಾನವಿಲ್ಲದೇ ಬಜೆಟ್ ಮಂಡನೆ ಪೂರ್ಣಗೊಳ್ಳದು.
ರಾಷ್ಟ್ರದ ಆರ್ಥಿಕತೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಪ್ರಭಾವಿಸಲು ಸರ್ಕಾರವು ತನ್ನ ಖರ್ಚು ಮಟ್ಟ ಮತ್ತು ತೆರಿಗೆ ದರಗಳನ್ನು ಸರಿಹೊಂದಿಸುವ ಸಾಧನವೇ ಹಣಕಾಸು ನೀತಿ.
ಹಣದುಬ್ಬರ ಎಂದರೇನು?
ಆರ್ಥಿಕತೆಯಲ್ಲಿ ಹಣದ ಚಲಾವಣೆ ಹೆಚ್ಚಾಗುವುದು ಅಥವಾ ಇತರ ಕಾರಣಗಳಿಂದ ಅಗತ್ಯ ವಸ್ತುಗಳು ಸೇರಿದಂತೆ ಸರಕು ಸೇವೆಗಳ ಬೆಲೆ ಶೀಘ್ರಗತಿಯಲ್ಲಿ ಮೇಲೇರುವುದನ್ನು ಹಣದುಬ್ಬರ ಎನ್ನುತ್ತಾರೆ.
ಸರಕುಗಳ ಸಂಖ್ಯೆಯನ್ನು ಹೆಚ್ಚಿಸದೆ ಚಲಾವಣೆಯಲ್ಲಿರುವ ಒಟ್ಟು ಹಣವನ್ನು ಹೆಚ್ಚಿಸುವ ಮೂಲಕ ಸರಕು ಮತ್ತು ಸೇವೆಗಳ ಬೆಲೆಗಳ ಹೆಚ್ಚಳವಾಗಿದೆ.
ಬಜೆಟ್ ಅಂದಾಜು
ಮುಂಬರುವ ಹಣಕಾಸು ವರ್ಷದ ಯಾವುದೇ ಸಚಿವಾಲಯ ಅಥವಾ ಯೋಜನೆಗೆ ಬಜೆಟ್‌ನಲ್ಲಿ ನಿಗದಿಪಡಿಸಿದ ಹಣದ ಮೊತ್ತ
ಪರಿಷ್ಕೃತ ಅಂದಾಜು ಪಟ್ಟಿ
ಪರಿಷ್ಕೃತ ಅಂದಾಜುಗಳು ಸಂಭವನೀಯ ಖರ್ಚಿನ ಮಧ್ಯ ವರ್ಷದ ಪರಿಶೀಲನೆಯಾಗಿದ್ದು, ಉಳಿದ ಅವಧಿಗೆ ಮಾಡಬೇಕಾದ ವೆಚ್ಚದ ಬಗ್ಗೆ ಅವಲೋಕನ ನಡೆಸುವ ಪ್ರಕ್ರಿಯೆಯೇ ಪರಿಷ್ಕೃತ ಅಂದಾಜು ಪಟ್ಟಿ. ಪರಿಷ್ಕೃತ ಅಂದಾಜುಪಟ್ಟಿ ಸಂಸತ್ತಿನಲ್ಲಿ ಮಂಡನೆಯಾಗುವುದಿಲ್ಲ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications