ಬಜೆಟ್ 2021: ಏನಾಗಬಹುದು ಷೇರುಪೇಟೆ ಹಾದಿ? ಇಲ್ಲಿದೆ ಇತಿಹಾಸದ ಉದಾಹರಣೆ

ಬಜೆಟ್ ದಿನ ಹಾಗೂ ನಂತರ ಷೇರು ಪೇಟೆಯಲ್ಲಿ ಏನಾಗಬಹುದು, ಹೂಡಿಕೆದಾರರು ಹೇಗೆ ಪ್ರತಿಕ್ರಿಯಿಸಬಹುದು ಎಂಬ ಪ್ರಶ್ನೆ ಹಲವರಲ್ಲಿದೆ. ಈ ಹಿಂದಿನ ಬಜೆಟ್ ಗಳ ದಿನ ಹಾಗೂ ಆ ನಂತರದಲ್ಲಿ ಷೇರು ಮಾರುಕಟ್ಟೆ ದಿಕ್ಕನ್ನು ಮಾರ್ಗದರ್ಶಿಯಾಗಿ ತೆಗೆದುಕೊಂಡಲ್ಲಿ ಎಚ್ಚರಿಕೆಯಿಂದ ಮುಂದಿನ ಹೆಜ್ಜೆ ಇಡುವುದು ಉತ್ತಮ ಎನ್ನುತ್ತಾರೆ ವಿಶ್ಲೇಷಕರು.

ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ಬಂದ ಮೇಲೆ ಏಳು ವರ್ಷಗಳ ಪೈಕಿ ಕೇವಲ ಎರಡು ಬಾರಿ ಮಾತ್ರ ಬಜೆಟ್ ಮಂಡಿಸಿದ ದಿನದ ನಂತರದ ತಿಂಗಳಲ್ಲಿ ಬಿಎಸ್ ಇ ಸೆನ್ಸೆಕ್ಸ್ ಏರಿಕೆ ಕಂಡಿದೆ. ಉಳಿದ ಸಂದರ್ಭಗಳಲ್ಲಿ ಸೂಚ್ಯಂಕವು ನಿರ್ದಿಷ್ಟ ಪರಿಮಿತಿಯಲ್ಲಿ ವ್ಯವಹಾರ ನಡೆಸಿದೆ ಅಥವಾ ಕುಸಿತ ಕಂಡಿದೆ. 2021ರಲ್ಲಿ ಮಾರುಕಟ್ಟೆ ತುಂಬ ಎತ್ತರದಲ್ಲಿದೆ. ಆದ್ದರಿಂದ ಅಪಾಯ ಮತ್ತೂ ಹೆಚ್ಚಾಗಿದೆ ಎಂಬುದು ಎಚ್ಚರಿಕೆ ಹಿಂದಿನ ಕಾರಣವಾಗಿದೆ.

ಹೂಡಿಕೆದಾರರು ಮತ್ತು ಉದ್ಯಮಿಗಳು ಬಜೆಟ್ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಒಂದು ವೇಳೆ ನಿರಾಸೆಯಾದಲ್ಲಿ ಲಾಭವನ್ನು ತೆಗೆದುಕೊಳ್ಳುವ ಕಡೆಗೆ ಆಲೋಚಿಸಲಿದ್ದಾರೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಬಜೆಟ್ 2021: ಏನಾಗಬಹುದು ಷೇರುಪೇಟೆ ಹಾದಿ? ಇಲ್ಲಿದೆ ಇತಿಹಾಸದ ಉದಾಹರಣೆ

ಭಾರತವು ಆರ್ಥಿಕ ಕುಸಿತ ಕಂಡಿದೆ ಅಂತಿದ್ದರೂ ಸೆನ್ಸೆಕ್ಸ್ ದಾಖಲೆ ಎತ್ತರವಾದ 50 ಸಾವಿರ ಪಾಯಿಂಟ್ ಗಿಂತ ಮೇಲೇರಿ, ಆ ನಂತರ ಇಳಿಕೆಯನ್ನು ಕಂಡಿದೆ. ಹಲವು ವಲಯಗಳಲ್ಲಿ ಆ ದಾಖಲೆಯ ಮಟ್ಟದಿಂದ ಕುಸಿತ ಕಾಣುತ್ತಿದೆ. ಇಲ್ಲಿಂದ ಮುಂದೆ ದೊಡ್ಡ ಮಟ್ಟದ ಮೇಲ್ಮುಖದ ಪಯಣವನ್ನು ನಾವು ನಿರೀಕ್ಷೆ ಮಾಡುವುದಿಲ್ಲ ಎನ್ನುತ್ತಾರೆ ಷೇರು ಮಾರುಕಟ್ಟೆ ದಲ್ಲಾಳಿಗಳು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+