ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಭಾರೀ ಕುಸಿತಕ್ಕೊಳಗಾಗಿರುವ ದೇಶದ ಆರ್ಥಿಕತೆಯನ್ನ ಮೇಲೆತ್ತುವುದರ ಜೊತೆಗೆ ಜನಸಾಮಾನ್ಯರ ನಿರೀಕ್ಷೆಗಳನ್ನು ಪೂರೈಸುವ ಪ್ರಯತ್ನ ಮಾಡಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ 2021-2022ನೇ ಸಾಲಿನ ಹಣಕಾಸು ಬಜೆಟ್ ಮಂಡನೆ ಮಾಡಲಿದ್ದಾರೆ.
ಕೊರೋನಾ ಸಾಂಕ್ರಾಮಿಕದ ಪರಿಣಾಮವಾಗಿ ಆರ್ಥಿಕವಾಗಿ ಕುಗ್ಗಿ ಹೋಗಿರುವ ಜನಸಾಮಾನ್ಯರು ಕೇಂದ್ರ ಬಜೆಟ್ ಮೇಲೆ ಭಾರೀ ನಿರೀಕ್ಷೆಗಳನ್ನೇ ಇಟ್ಟುಕೊಂಡಿದ್ದಾರೆ.
ಲಾಕ್‌ಡೌನ್ ವೇಳೆ ತತ್ತರಿಸಿರುವ ವಿವಿಧ ಕ್ಷೇತ್ರಗಳು ಸೇರಿದಂತೆ ಕೃಷಿ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ನೀಡುವ ನಿರೀಕ್ಷೆಯಿದೆ. ಇದೇ ವೇಳೆಯಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ, ಆರ್ಥಿಕತೆಗೆ ಉತ್ತೇಜನ ನೀಡಲು ವಿವಿಧ ಉದ್ದಿಮೆ ವಲಯಗಳಿಗೆ ಹಲವು ಘೋಷಣೆಗಳನ್ನು ಮಾಡುವ ಸಾಧ್ಯತೆಗಳಿವೆ. ಜನರ ಕೈಗೆ ಹೆಚ್ಚಿನ ಹಣ ಲಭ್ಯವಾಗುವಂತೆ ಮಾಡುವ ಮೂಲಕ ಆರ್ಥಿಕತೆ ಚೇತರಿಸಿಕೊಳ್ಳುವುದಕ್ಕೆ ಬೇಕಾದ ಪ್ರಮುಖ ಕ್ರಮಗಳನ್ನು ಪ್ರಕಟಿಸುವ ಸಾಧ್ಯತೆಗಳಿವೆ.
ಕೇಂದ್ರ ಹಾಗೂ ರಾಜ್ಯ ಎರಡರಲ್ಲೂ ಒಂದೇ ಸರ್ಕಾರ ಇರುವುದರಿಂದ ರಾಜ್ಯಕ್ಕೆ ಮಹತ್ತರ ಅನುದಾನ ಸಿಗಬಹುದು ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಇನ್ನು ಬಜೆಟ್ ಮಂಡನೆ ಮಾಡುತ್ತಿರುವವರು ಕೂಡ ಕರ್ನಾಟಕ ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್. ಇದರಿಂದಾಗೂ ಕೂಡ ಕೇಂದ್ರ ಬಜೆಟ್ ನಿಂದ ಕರ್ನಾಟಕಕ್ಕೆ ಮಹತ್ವದ ಯೋಜನೆಗಳು ಹಾಗೂ ಅನುದಾನ ಸಿಗುವ ನಿರೀಕ್ಷೆಗಳಿವೆ.
ಇನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಕನಿಷ್ಟ ಬೆಂಬಲ ಬೆಲೆ ರೂ.885 ಕೋಟಿ ಬಾಕಿ ನೀಡಬೇಕಿದ್ದು, ಈ ಹಣ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಪ್ರವಾಹದಿಂದ ತೀವ್ರ ಹಾನಿಯುಂಟಾಗಿದ್ದು, 23 ಜಿಲ್ಲೆಗಳ 130 ತಾಲೂಕುಗಳನ್ನು ಪ್ರವಾಹ ಪೀಡಿತ ತಾಲೂಕುಗಳು ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಈ ತಾಲೂಕುಗಳಲ್ಲಿ ಆಗಿರುವ ಮಳೆ ನಷ್ಟ ಮತ್ತು ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಸಿಗಬಹುದು ಎಂದು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ.
6:00 PM
Feb 1, 2021
ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ 2021-22ರ ಹಣಕಾಸು ವರ್ಷದ ಐತಿಹಾಸಿಕ ಬಜೆಟ್ ಮಂಡಿಸಿದರು. ಕೋವಿಡ್ -19 ಬಿಕ್ಕಟ್ಟಿನ ನಂತರ ನಿರೀಕ್ಷೆಗಳು ಸಹಜವಾಗಿಯೇ ದುಪ್ಪಟ್ಟಾಗಿದ್ದವು. ಮೊದಲ ಬಾರಿಗೆ ಟ್ಯಾಬ್ ಮೂಲಕ ಕೇಂದ್ರ ಬಜೆಟ್ ಮಂಡಿಸಲಾಯಿತು. ಆರೋಗ್ಯ, ಮೂಲಸೌಕರ್ಯ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡುವುದರ ಜೊತೆಗೆ ಮುಂದಿನ ನಾಲ್ಕೈದು ವರ್ಷಗಳಲ್ಲಿ ಸಾಧಿಸಬೇಕಾದ ಗುರಿಗಳೇ ಹೆಚ್ಚಾಗಿದ್ದವು. ದೇಶದ ಸೇನೆಗೆ ಬಲ ತುಂಬುವ ಪ್ರಯತ್ನವನ್ನು ಮಾಡಲಾಗಿದ್ದು, ರಕ್ಷಣಾ ಕ್ಷೇತ್ರಕ್ಕೆ 20% ಅನುದಾನ ಹೆಚ್ಚಳ ಮಾಡಲಾಗಿದೆ. ಕೆಲವು ವಸ್ತುಗಳ ಮೇಲಿನ ಕಸ್ಟಮ್ ಸುಂಕವನ್ನು ಹೆಚ್ಚಿಸಲಾಗಿದ್ದು, ಮೊಬೈಲ್ ಸಾಧನಗಳ ಕಸ್ಟಮ್ ಸುಂಕ ಸೇರಿದಂತೆ ಅನೇಕ ವಸ್ತುಗಳ ಮೇಲಿನ ಸುಂಕ ಹೆಚ್ಚಿದೆ. ಆದಾಗ್ಯೂ, ತಾಮ್ರ, ಉಕ್ಕು, ಚಿನ್ನ ಮತ್ತು ಬೆಳ್ಳಿಯ ಕಸ್ಟಮ್ ಸುಂಕವನ್ನು ಕಡಿಮೆ ಮಾಡಲಾಗಿದೆ.
5:37 PM
Feb 1, 2021
ಇದು ಜನ ವಿರೋಧಿ ಬಜೆಟ್. ಅವರು ಯಾವಾಗಲೂ ಸುಳ್ಳು ಹೇಳಿಕೆಗಳನ್ನು ನೀಡುತ್ತಾರೆ. ಭಾರತದ ಮೊದಲ ಕಾಗದರಹಿತ ಬಜೆಟ್ ಪ್ರತಿಯೊಂದು ವಲಯವನ್ನೂ ಮಾರಾಟ ಮಾಡಿದೆ. ಬಜೆಟ್‌ನಲ್ಲಿ ಅಸಂಘಟಿತ ವಲಯಕ್ಕೆ ಏನೂ ಇಲ್ಲ: ಮಮತಾ ಬ್ಯಾನರ್ಜಿ ,ಪಶ್ಚಿಮ ಬಂಗಾಳ ಮುಖ್ಯಮಂತ್ರಿ
5:36 PM
Feb 1, 2021
2021 ರ ಬಜೆಟ್ ಅನ್ನು ಅಭೂತಪೂರ್ವ ಪರಿಸ್ಥಿತಿಯಲ್ಲಿ ಮಂಡಿಸಲಾಗಿದೆ. ಇದು ಎಲ್ಲರನ್ನೂ ಒಳಗೊಳ್ಳುತ್ತದೆ ಮತ್ತು ಭಾರತದ ಎಲ್ಲಾ ಜನರ ಕಲ್ಯಾಣಕ್ಕಾಗಿ ಸಮರ್ಪಿಸಲಾಗಿದೆ: ಜಗತ್ ಪ್ರಕಾಶ್ ನಡ್ಡಾ, ಬಿಜೆಪಿ ಅಧ್ಯಕ್ಷ
4:35 PM
Feb 1, 2021
We welcome the Finance Minister's emphasis on healthcare spending & immunization especially for COVID-19 & the pneumococcal vaccines as this will help India recover rapidly from this pandemic: Serum Institute of India CEO Adar Poonawalla
ಆರೋಗ್ಯ ವಲಯಕ್ಕೆ ಹೆಚ್ಚಿನ ಖರ್ಚು ಮತ್ತು ರೋಗನಿರೋಧಕಕ್ಕೆ ವಿಶೇಷವಾಗಿ ಕೋವಿಡ್-19 ಮತ್ತು ನ್ಯುಮೋಕೊಕಲ್ ಲಸಿಕೆಗಳಿಗೆ ಹಣಕಾಸು ಸಚಿವರು ಒತ್ತು ನೀಡುತ್ತಿರುವುದನ್ನು ನಾವು ಸ್ವಾಗತಿಸುತ್ತೇವೆ. ಏಕೆಂದರೆ ಇದು ಸಾಂಕ್ರಾಮಿಕ ರೋಗದಿಂದ ಭಾರತವು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ: ಆದರ್ ಪೂನವಾಲ್ಲಾ, ಸಿಇಒ, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ
4:31 PM
Feb 1, 2021
ಆರೋಗ್ಯ, ನೈರ್ಮಲ್ಯ, ಪೋಷಣೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಕೇಂದ್ರ ಬಜೆಟ್ ಹೆಚ್ಚು ಅಗತ್ಯವಿರುವ ಪೂರೈಕೆಯನ್ನು ಒದಗಿಸುತ್ತದೆ. ಇವೆಲ್ಲವೂ ನಮ್ಮ ಜನಸಂಖ್ಯೆಯ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸಮಗ್ರ ರೀತಿಯಲ್ಲಿ ಉತ್ತೇಜಿಸುವಲ್ಲಿ ಪ್ರಮುಖ ಅಂಶಗಳಾಗಿವೆ: ಕೆ.ಶ್ರೀನಾಥ್ ರೆಡ್ಡಿ, ಪಿಎಚ್‌ಎಫ್‌ಐ ಮುಖ್ಯಸ್ಥ
4:13 PM
Feb 1, 2021
ಫೆಬ್ರವರಿ 2020 ರಲ್ಲಿ ಶೇಕಡಾ 3.5ರಿಂದ ಪ್ರಾರಂಭವಾದ ನಮ್ಮ ವಿತ್ತೀಯ ಕೊರತೆಯು ಜಿಡಿಪಿಯ ಶೇಕಡಾ 9.5ಕ್ಕೆ ಏರಿದೆ. ಸತತ ಖರ್ಚುಗಳನ್ನು ಮಾಡಿರುವ ಅದೇ ಸಮಯದಲ್ಲಿ, ಕೊರತೆ ನಿರ್ವಹಣೆಗೆ ನಾವು ಸ್ಪಷ್ಟವಾದ ಪಥವನ್ನು ನೀಡಿದ್ದೇವೆ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
4:00 PM
Feb 1, 2021
ರಕ್ಷಣಾ ಬಜೆಟ್ ಆದಾಯ, ಪಿಂಚಣಿ ಮತ್ತು ಬಂಡವಾಳ ಎಂಬ ಮೂರು ಘಟಕಗಳನ್ನು ಒಳಗೊಂಡಿದೆ. 2020-21ರಲ್ಲಿ ಬಜೆಟ್ ಹಂಚಿಕೆ 1,13,734 ಕೋಟಿ ರೂ. ಇದು ಶೇಕಡಾ 20ರಷ್ಟು ಹೆಚ್ಚಾಗಿದ್ದು, 1,35,060 ಕೋಟಿ ರೂ.ಗೆ ತಲುಪಿದೆ: ಟಿ.ವಿ.ಸೋಮನಾಥನ್, ಕಾರ್ಯದರ್ಶಿ, ವೆಚ್ಚ ವಿಭಾಗ
3:46 PM
Feb 1, 2021
ಬಜೆಟ್ ಬಗ್ಗೆ ಶಶಿ ತರೂರ್ ಲೇವಡಿ
ಕೇಂದ್ರ ಸರ್ಕಾರದ ಬಜೆಟ್ ಅನ್ನು ಗ್ಯಾರೆಜ್ ಮೆಕಾನಿಕ್‌ಗೆ ಹೋಲಿಸಿ ಕಾಂಗ್ರೆಸ್ ನಾಯಕ ಶಶಿ ತರೂರ್ ಲೇವಡಿ ಮಾಡಿದ್ದಾರೆ.
3:44 PM
Feb 1, 2021
ಬಜೆಟ್ ಕುರಿತು ಮೋದಿ ಮಾತು
Today's Budget shows India's confidence and will instil self-confidence in the world. The Budget has the vision of self-reliance and features every section of the society: PM Narendra Modi pic.twitter.com/ot1HDRC19B
ಅಸಾಮಾನ್ಯ ಪರಿಸ್ಥಿತಿಯಲ್ಲಿ ನಾವು ಈ ಬಜೆಟ್ ಮಂಡಿಸಿದ್ದೇವೆ. ಇಂದಿನ ಬಜೆಟ್ ಭಾರತದ ವಿಶ್ವಾಸವನ್ನು ಪ್ರದರ್ಶಿಸುತ್ತಿದೆ. ಸ್ವಾವಲಂಬನೆಯ ದೃಷ್ಟಿಯಿಂದ ಹೊಂದಿದೆ. ಸಮಾಜದ ಪ್ರತಿಯೊಂದು ವರ್ಗವನ್ನು ಒಳಗೊಂಡಿದೆ: ನರೇಂದ್ರ ಮೋದಿ
3:40 PM
Feb 1, 2021
ಸೆನ್ಸೆಕ್ಸ್ 2300 ಪಾಯಿಂಟ್ಸ್ ಜಿಗಿತ
ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆಯ ನಂತರ ಭಾರತೀಯ ಷೇರುಪೇಟೆಯಲ್ಲಿ ಭಾರೀ ಜಿಗಿತ ಕಂಡುಬಂದಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 2314 ಪಾಯಿಂಟ್ಸ್ ಜಿಗಿತ ಕಂಡಿದ್ದು, 48,600 ಪಾಯಿಂಟ್ಸ್‌ಗೆ ಏರಿಕೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 646 ಪಾಯಿಂಟ್ಸ್ ಹೆಚ್ಚಾಗಿ 14281.20 ಪಾಯಿಂಟ್ಸ್‌ಗೆ ತಲುಪಿದೆ.
2:34 PM
Feb 1, 2021
ಸೆನ್ಸೆಕ್ಸ್ 2,000 ಪಾಯಿಂಟ್ಸ್ ಏರಿಕೆ
ಕೇಂದ್ರ ಬಜೆಟ್ ಮಂಡನೆ ಬಳಿಕ ಸೆನ್ಸೆಕ್ಸ್ 2,000ಕ್ಕೂ ಅಧಿಕ ಪಾಯಿಂಟ್ಸ್ ಏರಿಕೆಗೊಂಡಿದೆ
2:31 PM
Feb 1, 2021
ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆಯ ನಂತರ ಹೂಡಿಕೆದಾರರ ಸಂಪತ್ತು 5.2 ಲಕ್ಷ ಕೋಟಿ ರೂ. ಏರಿಕೆಗೊಂಡಿದೆ.
2:29 PM
Feb 1, 2021
ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು
ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡುವ ಮೂಲಕ ಭಾರತವು ಕೋವಿಡ್ ವಿರುದ್ಧ ಮತ್ತಷ್ಟು ಹೋರಾಡುವ ಬದ್ಧತೆಯನ್ನು ಪ್ರದರ್ಶಿಸಿದೆ. ಬಲವಾದ ಆರೋಗ್ಯ ವ್ಯವಸ್ಥೆ ಸೃಷ್ಟಿಸುವ ಭಾರತದ ಬದ್ಧತೆಯನ್ನು ಇದು ತೋರಿಸುತ್ತದೆ: ಪೂನಮ್ ಕ್ಷೇತ್ರಪಾಲ್‌ಸಿಂಗ್, ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾದ ಪ್ರಾಂತೀಯ ನಿರ್ದೇಶಕರು
2:00 PM
Feb 1, 2021
ಹಣಕಾಸು ಸಚಿವರು ನಿರೀಕ್ಷೆಗಳನ್ನು ಪೂರೈಸಿದ್ದಾರೆ!
In my opinion, Finance Minister had raised a lot of expectations regarding #Budget2021 and she has fulfilled all of them. Given the current times, the budget is focussed on India's growth and is tailored to accelerate the growth rate: NITI Aayog Vice Chairman Rajiv Kumar pic.twitter.com/T9XyFvTHOq
ನನ್ನ ಅಭಿಪ್ರಾಯದಲ್ಲಿ, 2021ರ ಬಜೆಟ್‌ಗೆ ಸಂಬಂಧಿಸಿದಂತೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದೆವು ಮತ್ತು ಹಣಕಾಸು ಸಚಿವರು ಪೂರೈಸಿದ್ದಾರೆ. ಪ್ರಸ್ತುತ ಸಮಯವನ್ನು ಗಮನಿಸಿದರೆ, ಬಜೆಟ್ ಭಾರತದ ಬೆಳವಣಿಗೆಯ ಮೇಲೆ ಕೇಂದ್ರೀಕೃತವಾಗಿದೆ ಮತ್ತು ಬೆಳವಣಿಗೆಯ ದರವನ್ನು ವೇಗಗೊಳಿಸಲು ಅನುಗುಣವಾಗಿದೆ: ರಾಜೀವ್ ಕುಮಾರ್, ಎನ್ಐಟಿಐ ಆಯೋಗ್ ಉಪಾಧ್ಯಕ್ಷ
1:05 PM
Feb 1, 2021
ಸೆನ್ಸೆಕ್ಸ್ ಜಿಗಿತ
ಕೇಂದ್ರ ಬಜೆಟ್ ಭಾಷಣ ಮುಕ್ತಾಯದ ನಂತರ ಸೆನ್ಸೆಕ್ಸ್ 1,200 ಅಂಕಗಳನ್ನು ಏರಿದೆ.
1:04 PM
Feb 1, 2021
ಮನೆ ಸಾಲಕ್ಕೆ ಇರುವ ಸಬ್ಸಿಡಿ, ತೆರಿಗೆ ವಿನಾಯಿತಿ, ಇತರೆ ಸೌಲಭ್ಯಗಳು ಮುಂದುವರಿಯಲಿದೆ
1:00 PM
Feb 1, 2021
ಆದಾಯ ತೆರಿಗೆ ವಿನಾಯಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ
12:57 PM
Feb 1, 2021
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆ ಅಂತ್ಯ, ಲೋಕಸಭೆಯಲ್ಲಿ ಅನುಮೋದನೆ.
12:56 PM
Feb 1, 2021
ಚಿನ್ನ ಮತ್ತು ಬೆಳ್ಳಿಯ ಮೇಲಿನ ಸುಂಕ ಹಿಂದಿನ ದರಕ್ಕೆ ಇಳಿಕೆ
12:54 PM
Feb 1, 2021
ಹತ್ತಿಯ ಮೇಲಿನ ಸುಂಕವು ಶೂನ್ಯದಿಂದ ಶೇಕಡಾ 10ಕ್ಕೆ ಏರಿಕೆ
12:51 PM
Feb 1, 2021
ವಿದೇಶದಿಂದ ಆಮದು ಆಗುವ ಆಟೋಮೊಬೈಲ್ ಬಿಡಿಭಾಗಗಳ ಬೆಲೆ ಏರಿಕೆ
12:48 PM
Feb 1, 2021
ಸ್ಟಾರ್ಟ್‌ಅಪ್ ಕಂಪನಿಗಳಿಗೆ ರಿಲೀಫ್
ಸ್ಟಾರ್ಟ್ ಅಪ್ ಕಂಪನಿಗಳಿಗೆ ತೆರಿಗೆ ವಿನಾಯಿತಿಯನ್ನು ಒಂದು ವರ್ಷ ಮುಂದೂಡಲಾಗಿದೆ. ಇದರಿಂದ ಬಂಡವಾಳ ಮೇಲಿನ ಲಾಭದ ಮೇಲಿನ ತೆರಿಗೆ ವಿಧಿಸಲ್ಲ.
12:46 PM
Feb 1, 2021
ಜಿಎಸ್‌ಟಿ ಜಾರಿಗೆ ಬಂದು ಈಗಾಗಲೇ ನಾಲ್ಕು ವರ್ಷಗಳು ಕಳೆದು ಹೋಗಿವೆ. ಜಾರಿಗೆ ತಂದ ಬಳಿಕ ಜಿಎಸ್‌ಟಿಯನ್ನು ಸಾಕಷ್ಟು ಸರಳೀಕರಣಗೊಳಿಸಲಾಗಿದೆ, ಸುಧಾರಣೆ ಮಾಡಲಾಗಿದೆ. ಜಿಎಸ್‌ಟಿ ಜಾರಿಗೆ ಬಂದ ಬಳಿಕ 400 ಹಳೆಯ ಮತ್ತು ಅಪ್ರಸ್ತುತ ವಿನಾಯ್ತಿಗಳನ್ನು ತೆಗೆದುಹಾಕಲಾಗಿದೆ. ಇದರಿಂದ ಕಳೆದ ಕೆಲವು ತಿಂಗಳುಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಆದಾಯ ಸಂಗ್ರಹವಾಗಿದೆ.
12:42 PM
Feb 1, 2021
ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ
ಅಗ್ಗದ ಬಡ್ಡಿ ದರದಲ್ಲಿ ಗೃಹ ಸಾಲ ನೀಡುವುದನ್ನು ಸರ್ಕಾರ ಮುಂದುವರಿಸಲು ತೀರ್ಮಾನಿಸಿದೆ. 1.5 ಲಕ್ಷ ರೂಪಾಯಿವರೆಗೆ ಬಡ್ಡಿ ಮೇಲಿನ ತೆರಿಗೆ ವಿನಾಯಿತಿ.
12:39 PM
Feb 1, 2021
ವಿದೇಶಿ ನಿವೃತ್ತಿ ನಿಧಿಯ ಮೇಲೆ ಅನಿವಾಸಿ ಭಾರತೀಯರಿಗೆ ಡಬಲ್ ತೆರಿಗೆಯ ನಿಯಮಗಳನ್ನು ಸರ್ಕಾರ ತೆಗೆದು ಹಾಕುವುದಾಗಿ ತಿಳಿಸಲಿದೆ
12:34 PM
Feb 1, 2021
ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿ
75 ವರ್ಷ ಮೇಲ್ಪಟ್ಟವರಿಗೆ ತೆರಿಗೆಯಲ್ಲಿ ವಿನಾಯಿತಿಯನ್ನು ನೀಡಲಾಗಿದೆ. ಪಿಂಚಣಿ ,ಮತ್ತು ಪಿಂಚಣಿ ಮೇಲಿನ ಬಡ್ಡಿ , ಠೇವಣಿ ಮೇಲಿನ ಬಡ್ಡಿಗೆ ಆದಾಯ ತೆರಿಗೆ ಕಟ್ಟುವ ಅವಶ್ಯಕತೆ ಇಲ್ಲ.
12:32 PM
Feb 1, 2021
ಈ ವರ್ಷ ಎಂಎಸ್‌ಎಂಇಗಾಗಿ 15,700 ಕೋಟಿ ರೂಪಾಯಿ ನೀಡಲಾಗಿದೆ.
12:25 PM
Feb 1, 2021
ವಿತ್ತೀಯ ಕೊರತೆ ಜಿಡಿಪಿಯ ಶೇ 9.5ರಷ್ಟಿದೆ
ವಿತ್ತೀಯ ಕೊರತೆ ಜಿಡಿಪಿಯ ಶೇ 9.5ರಷ್ಟು ಆಗಿದೆ. ಸಾಲದ ಮೂಲದ ವಿತ್ತೀಯ ಕೊರತೆ ಸರಿದೂಗಿಸಿಕೊಂಡಿದ್ದೇವೆ, ಆದರೂ 80,000 ಕೋಟಿ ಅಗತ್ಯವಿದೆ. 2021-22ರಲ್ಲಿ ವಿತ್ತೀಯ ಕೊರತೆ ಜಿಡಿಪಿಯ ಶೇಕಡಾ 6.8ರಷ್ಟು ಆಗಲಿದೆ.
12:20 PM
Feb 1, 2021
ದೇಶದಲ್ಲಿ ಡಿಜಿಟಲ್ ಜನಗಣತಿ
ಭವಿಷ್ಯದಲ್ಲಿ ದೇಶದಲ್ಲಿ ಡಿಜಿಟಲ್ ಮಾದರಿಯ ಜನಗಣತಿ. ಇದಕ್ಕಾಗಿ 3,768 ಕೋಟಿ ರೂಪಾಯಿ ಅನುದಾನ
12:18 PM
Feb 1, 2021
ಡಿಜಿಟಲ್ ಪೇಮೆಂಟ್ 1,500 ಕೋಟಿ ರೂ.
ಡಿಜಿಟಲ್ ಮಾದರಿಯ ಪಾವತಿ ವ್ಯವಸ್ಥೆಗೆ ಉತ್ತೇಜನ ನೀಡಲು 1,500 ಕೋಟಿ ರೂಪಾಯಿ
12:17 PM
Feb 1, 2021
ಕೌಶಾಲಾಭಿವೃದ್ಧಿ ಯೋಜನೆಗೆ 3,000 ಕೋಟಿ ರೂಪಾಯಿ
ಭಾರತ-ಜಪಾನ್ ನಡುವೆ ಕೌಶಲ ಅಭಿವೃದ್ಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
12:14 PM
Feb 1, 2021
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಮೂಲಕ ಸರ್ಕಾರ ತನ್ನ ಗುರಿ ತಲುಪಿದೆ. ಉನ್ನತ ಶಿಕ್ಷಣಕ್ಕೆ ಉತ್ತೇಜಿಸಲು ಹೊಸ ಸಂಸ್ಥೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿದೆ.
12:12 PM
Feb 1, 2021
ಎನ್‌ಜಿಒ ಸಹಭಾಗಿತ್ವದಲ್ಲಿ ದೇಶಾದ್ಯಂತ 100 ಸೈನಿಕ ಶಾಲೆಗಳ ನಿರ್ಮಾಣ
12:11 PM
Feb 1, 2021
16.5 ಲಕ್ಷ ಕೋಟಿ ರೂಪಾಯಿ ಕೃಷಿ ಸಾಲ ನೀಡಿಕೆಯ ಗುರಿ
12:08 PM
Feb 1, 2021
ಸರ್ಕಾರವು ಒನ್ ನೇಷನ್, ಒನ್ ರೇಷನ್ ಯೋಜನೆ ಜಾರಿಗೆ ತಂದಿದೆ. ಇದು ವಲಸಿಗ ಕಾರ್ಮಿಕರಿಗೆ ಹೆಚ್ಚು ಅನುಕೂಲವಾಗಲಿದೆ. 32 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಲ್ಲಿ ಜಾರಿಗೆ ತಂದಿದೆ. ಉಳಿದ 4 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೀಘ್ರ ಜಾರಿಗೆ ಬರಲಿದೆ.
12:06 PM
Feb 1, 2021
ರೈಲ್ವೆಗೆ 1,10,055 ಕೋಟಿ ರೂಪಾಯಿ ದಾಖಲೆಯ ಹಣ ನೀಡುತ್ತಿದ್ದೇನೆ. ಅದರಲ್ಲಿ 1,07,100 ಕೋಟಿ ರೂಪಾಯಿ ಬಂಡವಾಳ ವೆಚ್ಚಕ್ಕೆ ಮಾತ್ರವಾಗಿದೆ: ನಿರ್ಮಲಾ ಸೀತಾರಾಮನ್
12:00 PM
Feb 1, 2021
ಬ್ಯಾಂಕ್‌ಗಳ ಮರು ಬಂಡವಾಳೀಕರಣಕ್ಕೆ 20,000 ಕೋಟಿ ರೂಪಾಯಿ ಘೋಷಣೆ
11:57 AM
Feb 1, 2021
ಎಲ್‌ಐಸಿ ಐಪಿಒ ಆರಂಭಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆ. 1.75 ಲಕ್ಷ ಕೋಟಿ ರೂಪಾಯಿ ಹಿಂತೆಗೆತದ ಗುರಿ
11:55 AM
Feb 1, 2021
ಸೌರಶಕ್ತಿಗೆ 1,000 ಕೋಟಿ ರೂಪಾಯಿ, ನವೀಕರಿಸಬಹುದಾದ ಇಂಧನಕ್ಕೆ 1,500 ಕೋಟಿ ರೂಪಾಯಿ
11:54 AM
Feb 1, 2021
ಗ್ರಾಹಕರ ಠೇವಣಿ ಭದ್ರತಾ ವಿಮೆಯನ್ನು 1 ಲಕ್ಷ ರೂಪಾಯಿಗಳಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಸಾಮಾನ್ಯ ಜನರಿಗೆ ಸುಲಭವಾಗಿ ಸಾಲ ಸಿಗುವಂತೆ ಗುರಿ ಹೊಂದಲಾಗಿದೆ.
11:52 AM
Feb 1, 2021
ವಿಮಾ ಕಂಪನಿಗಳಲ್ಲಿ ಎಫ್‌ಡಿಐ ಮಿತಿ ಶೇಕಡಾ 49ರಿಂದ ಶೇಕಡಾ 74ಕ್ಕೆ ಹೆಚ್ಚಳ
11:50 AM
Feb 1, 2021
ಜಮ್ಮು-ಕಾಶ್ಮೀರದಲ್ಲಿ ಗ್ಯಾಸ್ ಪೈಪ್‌ಲೈನ್ ನಿರ್ಮಾಣಕ್ಕೆ ನಿರ್ಧಾರ
11:48 AM
Feb 1, 2021
2022ರ ವೇಳೆಗೆ ನ್ಯಾಷನಲ್ ಹೈಡ್ರೋಜನ್ ಎನರ್ಜಿ ಮಿಷನ್‌ಗೆ ಚಾಲನೆ
11:47 AM
Feb 1, 2021
ವಿದ್ಯುತ್ ವಲಯದಲ್ಲಿ ಭಾರೀ ಸುಧಾರಣೆ
ಗ್ರಾಹಕರು ಯಾರಿಂದ ಬೇಕಾದರೂ ವಿದ್ಯುತ್ ಖರೀದಿಸಲು ಅವಕಾಶ ಕಲ್ಪಿಸುತ್ತೇವೆ. ಮೂರು ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೊತ್ತ ಮುಂದಿನ ಐದು ವರ್ಷಗಳಿಗೆ ಮೀಸಲಿಡಲಾಗುವುದು. ಇದರಿಂದ ಡಿಸ್ಕಾಂಗಳು ಮೂಲ ಸೌಕರ್ಯ ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ.
11:44 AM
Feb 1, 2021
ಗ್ರಾಹಕರಿಗೆ ಪರ್ಯಾಯ ವಿದ್ಯುತ್ ವಿತರಣೆಯನ್ನು ಒದಗಿಸಲು ವಿದ್ಯುತ್ ವಿತರಣಾ ಕಂಪನಿಗಳು ಏಕಸ್ವಾಮ್ಯದ ಸ್ಥಾನಮಾನದಿಂದ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ: ನಿರ್ಮಲಾ ಸೀತಾರಾಮನ್
11:41 AM
Feb 1, 2021
ಒಟ್ಟು 27 ರಾಜ್ಯಗಳಲ್ಲಿ 1,016 ಕಿ.ಮೀ ಮೆಟ್ರೋ ಮಾರ್ಗದ ಗುರಿ
11:40 AM
Feb 1, 2021
ಬೆಂಗಳೂರು ಮೆಟ್ರೋಗೆ 14,788 ಕೋಟಿ ರೂ.
ನಮ್ಮ ಬೆಂಗಳೂರು ಮೆಟ್ರೋ ಫೇಸ್ 2A, 2B ನಿರ್ಮಾಣಕ್ಕೆ 14,788 ಕೋಟಿ ರೂಪಾಯಿ ಘೋಷಣೆ
11:39 AM
Feb 1, 2021
2030ರೊಳಗೆ ರಾಷ್ಟ್ರೀಯ ರೈಲ್ವೆ ಲೇನ್ ನಿರ್ಮಾಣ
ಮೇಕ್ ಇನ್ ಇಂಡಿಯಾಗೆ ಒತ್ತು ನೀಡಿ, 2030ರೊಳಗೆ ರಾಷ್ಟ್ರೀಯ ರೈಲ್ವೆ ಲೇನ್ ನಿರ್ಮಾಣಕ್ಕೆ ನಿರ್ಧಾರ
11:36 AM
Feb 1, 2021
ಹಣಕಾಸು ಸಚಿವೆ ಸ್ಕ್ರ್ಯಾಪೇಜ್ ನೀತಿ ಪ್ರಕಟಣೆಯ ನಂತರ ಆಟೋಮೊಬೈಲ್ ಸಂಬಂಧಿದ ಷೇರುಗಳು ಗಗನಕ್ಕೇರುತ್ತಿವೆ.
11:34 AM
Feb 1, 2021
ಮುಂದಿನ ಮಾರ್ಚ್‌ನೊಳಗೆ 8,500 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಗುರಿ
11:34 AM
Feb 1, 2021
ತಮಿಳುನಾಡಿನಲ್ಲಿ 3500 ಕಿ.ಮೀ, ಕೇರಳದಲ್ಲಿ 1,100 ಕಿ.ಮೀ, ಪಶ್ಚಿಮ ಬಂಗಾಳದದಲ್ಲಿ 675 ಕಿ.ಮೀ, ಅಸ್ಸಾಂನಲ್ಲಿ 1,300 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಗುರಿ
11:32 AM
Feb 1, 2021
11,000 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಗುರಿ
11:27 AM
Feb 1, 2021
ಆರೋಗ್ಯ ವಲಯಕ್ಕಾಗಿ ಆತ್ಮನಿರ್ಭರ ಸ್ವಾಸ್ಥ್ಯ ಭಾರತ ಯೋಜನೆ ಲೋಕಾರ್ಪಣೆ. ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಹೆಚ್ಚಿನ ಆದ್ಯತೆ
11:26 AM
Feb 1, 2021
ನಗರ ಸ್ವಚ್ಛ ಅಭಿಯಾನ 1.41 ಲಕ್ಷ ಕೋಟಿ ರೂ.
ನಗರ ಸ್ವಚ್ಚ ಅಭಿಯಾನ 2.0ಗೆ ಕೇಂದ್ರ ಹಣಕಾಸು ಸಚಿವೆ 1,41,000 ಕೋಟಿ ರೂಪಾಯಿ ಘೋಷಿಸಿದ್ದಾರೆ.
11:22 AM
Feb 1, 2021
ಆರೋಗ್ಯ ಯೋಜನೆಗಾಗಿ 64,000 ಕೋಟಿ ರೂ.
ರೋಗ ತಡೆಗಟ್ಟುವಿಕೆ, ರೋಗನಿರೋಧಕ ಮತ್ತು ಯೋಗಕ್ಷೇಮವು ಆರೋಗ್ಯ ರಕ್ಷಣೆಯ ಮೂರು ಕ್ಷೇತ್ರಗಳಾಗಿವೆ ಎಂದು ಹೇಳಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರೋಗ್ಯ ಯೋಜನೆಗಳಿಗಾಗಿ 64,180ಕೋಟಿ ರೂ. ಘೋಷಿಸಿದ್ದಾರೆ.
11:20 AM
Feb 1, 2021
100ಕ್ಕೂ ಅಧಿಕ ರಾಷ್ಟ್ರಗಳ ರಕ್ಷಣೆ
ಭಾರತವು ಎರಡು ಲಸಿಕೆಗಳನ್ನು ಹೊಂದಿದೆ. ಕೋವಿಡ್ ವಿರುದ್ಧ ನಮ್ಮ ದೇಶವಷ್ಟೇ ಅಲ್ಲದೆ 100ಕ್ಕೂ ಅಧಿಕ ರಾಷ್ಟ್ರಗಳನ್ನು ರಕ್ಷಿಸಲು ನಿಂತಿದೆ. ಮತ್ತಷ್ಟು ಲಸಿಕೆಗಳನ್ನು ನಿರೀಕ್ಷಿಸಲಾಗುತ್ತಿದೆ.
11:17 AM
Feb 1, 2021
17 ಸಾವಿರ ವೆಲ್‌ನೆಸ್ ಸೆಂಟರ್‌ಗಳಿಗೆ ಬೆಂಬಲ, ಆರೋಗ್ಯ ಕ್ಷೇತ್ರದ ಮೇಲಿನ ಹೂಡಿಕೆ ಹೆಚ್ಚಳ
11:16 AM
Feb 1, 2021
27.1 ಲಕ್ಷ ಕೋಟಿ ಆತ್ಮನಿರ್ಭರ ಪ್ಯಾಕೇಜ್
ಆತ್ಮನಿರ್ಭರ ಭಾರತ ಪ್ಯಾಕೇಜ್ ಅಡಿಯಲ್ಲಿ 27.1 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಲಾಗಿತ್ತು, ಇದು ದೇಶದ ಜಿಡಿಪಿಯ ಶೇಕಡಾ 13ರಷ್ಟಿದೆ. ಈ ಪ್ಯಾಕೇಜ್‌ನಿಂದ ಎಂಎಸ್‌ಎಂಇ, ತೆರಿಗೆ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ಆಗಲಿದೆ.
11:12 AM
Feb 1, 2021
ಭಾರತದಲ್ಲಿ ಈಗಾಗಲೇ ಎರಡು ಕೊರೊನಾ ಲಸಿಕೆಗಳು ಚಾಲನೆಯಲ್ಲಿವೆ. ಇನ್ನೂ ಎರಡು ಲಸಿಕೆಗಳು ಸದ್ಯದಲ್ಲೇ ಬರಲಿವೆ. ಕೊರೊನಾ ಸಕ್ರಿಯ ಪ್ರಕರಣಗಳು ಭಾರತದಲ್ಲಿ ಕಡಿಮೆಯಾಗುತ್ತಿದೆ.ಲಸಿಕೆಗಳನ್ನು ನೀಡುವುದರಿಂದ ಆರ್ಥಿಕತೆ ಚೇತರಿಕೆಗೊಳ್ಳುತ್ತಿದೆ.
11:10 AM
Feb 1, 2021
ಭಾರತ ಕ್ರಿಕೆಟ್ ತಂಡವು ಇತ್ತೀಚೆಗೆ ಆಸ್ಟ್ರೇಲಿಯಾವನ್ನು ಆಸ್ಟ್ರೇಲಿಯಾದಲ್ಲೇ ಸೋಲಿಸಿದೆ. ಇದು ಭಾರತದ ಶಕ್ತಿಯನ್ನು ತೋರಿಸುತ್ತದೆ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
11:09 AM
Feb 1, 2021
ಕೊರೊನಾ ಮಹಾಮಾರಿ ನಡುವೆ ಈ ಬಜೆಟ್ ತಯಾರು ಮಾಡಲಾಗಿದೆ. ಹಿಂದೆಂದೂ ಕಾಣದ ಸಂಕಷ್ಟದ ವೇಳೆ ಬಜೆಟ್ ಮಂಡನೆ ಮಾಡಲಾಗುತ್ತಿದೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
11:04 AM
Feb 1, 2021
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ರಿಂದ 2021-22ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಆರಂಭಗೊಂಡಿದೆ.
10:51 AM
Feb 1, 2021
ಕಪ್ಪು ಬಟ್ಟೆ ಧರಿಸಿ ಸಂಸತ್‌ಗೆ ಆಗಮಿಸಿದ ಕಾಂಗ್ರೆಸ್ ಸಂಸದರು
Delhi: Congress MPs Jasbir Singh Gill and Gurjeet Singh Aujla wear a black gown to the Parliament, as a mark of their protest against the three #FarmLawspic.twitter.com/OjzM22zOCW
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಆರೋಗ್ಯ ಸಚಿವ ಡಾ. ಹರ್ಷವಧನ್ ಅವರು ಸಂಸತ್ ತಲುಪಿದ್ದಾರೆ.
10:08 AM
Feb 1, 2021
Delhi: Finance Minister Nirmala Sitharaman and MoS Finance & Corporate Affairs Anurag Thakur arrive at the Parliament. #Budget2021pic.twitter.com/40RhaoNMUm
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಸಂಸತ್ತಿಗೆ ಆಗಮಿಸಿದ್ದಾರೆ.
9:38 AM
Feb 1, 2021
ಕೋವಿಡ್ 19 ರ ಕಾರಣದಿಂದಾಗಿ ಎಂಎಸ್‌ಎಂಇ ವಲಯದ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಈ ವಲಯವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಬಜೆಟ್‌ನಲ್ಲಿ ಕೆಲವು ಯೋಜನೆಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ.
9:36 AM
Feb 1, 2021
ವಿತ್ತ ಸಚಿವ ನಿರ್ಮಲಾ ಸೀತಾರಾಮನ್, ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರೊಂದಿಗೆ ಬಜೆಟ್ ಸಮಯಕ್ಕೂ ಮುಂಚಿತವಾಗಿ ಹಣಕಾಸು ಸಚಿವಾಲಯದಿಂದ ಹೊರಡಲಿದ್ದಾರೆ.
9:28 AM
Feb 1, 2021
ಬಜೆಟ್ ಟ್ಯಾಬ್ ಪ್ರದರ್ಶನ
Delhi: Finance Minister Nirmala Sitharaman will present and read out the #UnionBudget 2021-22 at the Parliament through a tab, instead of the traditional 'bahi khata'. pic.twitter.com/Ir5qZYz2gy
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಾಂಪ್ರದಾಯಿಕ 'ಬಹಿ ಖಾತಾ' ಬದಲು ಟ್ಯಾಬ್ ಮೂಲಕ ಬಜೆಟ್ ಪ್ರಸ್ತುತಪಡಿಸಲಿದ್ದಾರೆ.
9:23 AM
Feb 1, 2021
ದೆಹಲಿಯಲ್ಲಿ ಬಿಗಿ ಭದ್ರತೆ
ಕೇಂದ್ರ ಬಜೆಟ್ ಮಂಡನೆ ವೇಳೆಯಲ್ಲಿ ದೆಹಲಿಯಲ್ಲಿ ರೈತರ ಪ್ರತಿಭಟನೆ ತೀವ್ರಗೊಳ್ಳುವ ಹಿನ್ನೆಲೆಯಲ್ಲಿ, ದೆಹಲಿ ಗಡಿಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ರೈತರು ಬ್ಯಾರಿಕೇಡ್ ದಾಟಿ ಒಳನುಗ್ಗದಂತೆ ಭಾರೀ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
9:10 AM
Feb 1, 2021
ಬಜೆಟ್ ಜನರ ನಿರೀಕ್ಷೆಗೆ ಅನುಗುಣವಾಗಿರುತ್ತದೆ. ಸಬ್ ಕಾ ಸಾಥ್, ಸಬ್‌ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮಂತ್ರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರವು ಆತ್ಮನಿರ್ಭರ ಭಾರತ ಪ್ಯಾಕೇಜ್ ಘೋಷಿಸುವ ಮೂಲಕ ದೇಶದ ಆರ್ಥಿಕತೆ ಹೊಸ ದಿಕ್ಕು ನೀಡಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
9:04 AM
Feb 1, 2021
Delhi: Finance Minister Nirmala Sitharaman arrives at the Ministry of Finance. She will present the #UnionBudget 2021-22 in the Parliament today. pic.twitter.com/rtS3izUHcm
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವಾಲಯಕ್ಕೆ ಆಗಮಿಸಿದ್ದಾರೆ.
8:46 AM
Feb 1, 2021
ಕೇಂದ್ರ ಬಜೆಟ್ ಮಂಡಿಸುವ ಮುನ್ನ ಷೇರು ಮಾರುಕಟ್ಟೆಗಳು ಬಲವಾದ ಆರಂಭ ಪಡೆಯುವ ಸಾಧ್ಯತೆಯಿದೆ. ಬಜೆಟ್ ದಿನಕ್ಕೂ ಮೊದಲು ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಸತತ 6 ವಹಿವಾಟು ಅವಧಿಗಳಲ್ಲಿ ಶೇಕಡಾ 7ಕ್ಕಿಂತ ಹೆಚ್ಚು ಕುಸಿತಗೊಂಡಿದೆ.
8:42 AM
Feb 1, 2021
ಅನುರಾಗ್ ಠಾಕೂರ್ ವಿಶೇಷ ಪೂಜೆ
Delhi: MoS Finance Anurag Thakur offers prayers at his residence, ahead of the presentation of the #UnionBudget 2021-22 in the Parliament today. pic.twitter.com/EtVFtzrNj7
ಇಂದು ಕೇಂದ್ರ ಬಜೆಟ್ ಹಿನ್ನೆಲೆಯಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ತಮ್ಮ ನಿವಾಸದಲ್ಲಿ ವಿಶೇಷ ಪೂಜೆ ನೆರವೇರಿಸಿದರು.
7:54 AM
Feb 1, 2021
ಕೋವಿಡ್ ಸೆಸ್ ವಿಧಿಸುವ ಸಾಧ್ಯತೆ ಇದೆಯಾ?
ಸರ್ಕಾರವು ಈ ಬಾರಿ ಕೇಂದ್ರ ಬಜೆಟ್ ನಲ್ಲಿ ಕೊರೊನಾ ಸೆಸ್ ಪರಿಚಯಿಸುವ ಅಂದಾಜಿದೆ. ಸಂಕಷ್ಟದಲ್ಲಿರುವ ಆರ್ಥಿಕತೆ ಉತ್ತೇಜನಕ್ಕೆ ಈ ಕ್ರಮ ಕೈಗೊಳ್ಳಬಹುದು. ಸೆಸ್ ವಿಧಿಸುವ ಸಾಧ್ಯತೆ ತೆಗೆದುಹಾಕಲು ಆಗಲ್ಲ.
7:50 AM
Feb 1, 2021
ವಿತ್ತೀಯ ಕೊರತೆ
2020- 21ನೇ ಸಾಲಿಗೆ ವಿತ್ತೀಯ ಕೊರತೆ 7% ದಾಟುವ ಸಾಧ್ಯತೆ ಇದೆ. 2021-22ನೇ ಸಾಲಿನಲ್ಲಿ ಈ ಸಂಖ್ಯೆ ಏನಾಗಬಹುದು ಎಂಬ ಬಗ್ಗೆ ನಿರೀಕ್ಷೆಗಳಿವೆ.
7:23 AM
Feb 1, 2021
ಬಹು ನಿರೀಕ್ಷಿತ ಮತ್ತು ಸವಾಲಿನ ಬಜೆಟ್
ಫೆಬ್ರವರಿ 1ರ ಬೆಳಗ್ಗೆ 11 ಗಂಟೆಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಬಹು ನಿರೀಕ್ಷಿತ ಮತ್ತು ಸವಾಲಿನ ಬಜೆಟ್ ಮಂಡನೆ.
8:15 PM
Jan 31, 2021
ಬಜೆಟ್ 2021: ಏನಾಗಬಹುದು ಷೇರುಪೇಟೆ ಹಾದಿ?
ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ಬಂದ ಮೇಲೆ ಏಳು ವರ್ಷಗಳ ಪೈಕಿ ಕೇವಲ ಎರಡು ಬಾರಿ ಮಾತ್ರ ಬಜೆಟ್ ಮಂಡಿಸಿದ ದಿನದ ನಂತರದ ತಿಂಗಳಲ್ಲಿ ಬಿಎಸ್ ಇ ಸೆನ್ಸೆಕ್ಸ್ ಏರಿಕೆ ಕಂಡಿದೆ. ಉಳಿದ ಸಂದರ್ಭಗಳಲ್ಲಿ ಸೂಚ್ಯಂಕವು ನಿರ್ದಿಷ್ಟ ಪರಿಮಿತಿಯಲ್ಲಿ ವ್ಯವಹಾರ ನಡೆಸಿದೆ ಅಥವಾ ಕುಸಿತ ಕಂಡಿದೆ.
9:59 AM
Jan 31, 2021
ಪ್ರಧಾನಿ ನರೇಂದ್ರ ಮೋದಿ ತಿಂಗಳ ರೇಡಿಯೋ ಭಾಷಣ 'ಮನ್ ಕೀ ಬಾತ್'
ಪ್ರಧಾನಿ ನರೇಂದ್ರ ಮೋದಿ ಅವರು ತಿಂಗಳ ರೇಡಿಯೋ ಭಾಷಣ 'ಮನ್ ಕೀ ಬಾತ್' ನಲ್ಲಿ ಮಾತನಾಡಲಿದ್ದಾರೆ. ದೇಶದ ಐತಿಹಾಸಿಕ ವಾರ್ಷಿಕ ಬಜೆಟ್ ಹಿನ್ನೆಲೆಯಲ್ಲಿ ಆ ಬಗ್ಗೆ ಮಾತನಾಡಬಹುದು ಎನ್ನಲಾಗುತ್ತಿದೆ. ಕೇಂದ್ರ ಬಜೆಟ್ ನಲ್ಲಿ ಈ ಬಾರಿ ಉದ್ಯೋಗ ಸೃಷ್ಟಿ ಮತ್ತು ಗ್ರಾಮೀಣ ಅಭಿವೃದ್ಧಿ ಮೇಲೆ ವೆಚ್ಚ ಹೆಚ್ಚು ಮೀಸಲಿಡುವ ನಿರೀಕ್ಷೆ ಇದೆ.
5:38 PM
Jan 30, 2021
ಕೃಷಿ ಕಾನೂನುಗಳನ್ನು 18 ತಿಂಗಳವರೆಗೆ ಅಮಾನತುಗೊಳಿಸುವ ಬಗ್ಗೆ ಸರ್ಕಾರದ ಪ್ರಸ್ತಾವನೆ ಇನ್ನೂ ಇದೆ: ಸಂಸತ್ತಿನ ಬಜೆಟ್ ಅಧಿವೇಶನಕ್ಕಾಗಿ ಶನಿವಾರ (ಜನವರಿ 30) ನಡೆದ ಸರ್ವ ಪಕ್ಷ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ
11:32 AM
Jan 30, 2021
ಸರ್ವಪಕ್ಷ ಸಭೆ-ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆ
ಸಂಸತ್ತಿನ ಬಜೆಟ್ ಅಧಿವೇಶನಕ್ಕಾಗಿ ಶನಿವಾರ (ಜನವರಿ 30) ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಧಾನಿ ಮೋದಿ ಸಭೆಯಲ್ಲಿ ಸರ್ಕಾರದ ಶಾಸಕಾಂಗ ಕಾರ್ಯಸೂಚಿಯನ್ನು ಮಂಡಿಸಲಿದ್ದಾರೆ.
9:58 AM
Jan 30, 2021
ರೈತರ ಆದಾಯ ದ್ವಿಗುಣಕ್ಕೆ ಒತ್ತು!
ಫೆಬ್ರವರಿ 1ರ ಕೇಂದ್ರ ಬಜೆಟ್‌ನಲ್ಲಿ ಕೃಷಿ ಸಾಲ ವಿತರಣೆಯ ಗುರಿಯನ್ನು 19 ಲಕ್ಷ ಕೋಟಿ ರೂ.ಗೆ ಹೆಚ್ಚಿಸುವ ಸಾಧ್ಯತೆ ಇದೆ. 2022ರೊಳಗೆ ರೈತರ ಆದಾಯ ದುಪ್ಪಟ್ಟುಗೊಳಿಸುವುದಾಗಿ ಹಿಂದೆ ಘೋಷಿಸಿದ್ದ ಸರಕಾರವು, ಈ ನಿಟ್ಟಿನಲ್ಲಿ ರೈತ ಪರ ಯೋಜನೆಗಳಿಗೆ ಆದ್ಯತೆ ನೀಡಲಿದೆ. ಮಹತ್ವದ ಸುಧಾರಣೆಗಳೂ ಇರಲಿವೆ ಎಂದು ಮೂಲಗಳು ಹೇಳಿವೆ.
9:55 AM
Jan 30, 2021
ರಾಜ್ಯದ ರೈಲ್ವೆಗೆ ಸಿಗಲಿದ್ಯಾ ಅನುದಾನ?
ಈ ಸಲದ ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ರೈಲ್ವೆ ಯೋಜನೆಗಳು ಹಣಕಾಸು ನೆರವನ್ನು ನಿರೀಕ್ಷಿಸುತ್ತಿವೆ. ಮತ್ತೊಂದು ಕಡೆ ಉದ್ದಿಮೆ ವಲಯ ಮೂಲಭೂತ ಕಚ್ಚಾ ಸಾಮಗ್ರಿಯಾಗಿರುವ ಉಕ್ಕಿನ ಪೂರೈಕೆ ಮತ್ತು ಅಗ್ಗದ ಸಾಲ ನೆರವನ್ನು ಬಯಸುತ್ತಿದೆ.
ಬಹು ನಿರೀಕ್ಷಿತ ಬೆಂಗಳೂರು ಉಪನಗರ ರೈಲ್ವೆ ಯೋಜನೆ, ಹುಬ್ಬಳ್ಳಿ-ಅಂಕೋಲಾ ಮಾರ್ಗ, ಸಂಪೂರ್ಣ ವಿದ್ಯುದೀಕರಣ ಸೇರಿದಂತೆ ರಾಜ್ಯದ ಹಲವು ರೈಲ್ವೆ ಯೋಜನೆಗಳು ನನೆಗುದಿಯಲ್ಲಿದ್ದು, ಕೇಂದ್ರ ಬಜೆಟ್‌ನಿಂದ ಅನುದಾನ ನಿರೀಕ್ಷೆಯಲ್ಲಿದೆ.
3:36 PM
Jan 29, 2021
17 ವರ್ಷಗಳ ನಂತರ ಮೊದಲ ಬಾರಿಗೆ ಕರೆಂಟ್ ಅಕೌಂಟ್ ಸರ್ ಪ್ಲಸ್
ಹದಿನೇಳು ವರ್ಷಗಳ ನಂತರ ಭಾರತವು ಪ್ರಸಕ್ತ ಹಣಕಾಸು ವರ್ಷದಲ್ಲಿ ಚಾಲ್ತಿ ಖಾತೆಯಲ್ಲಿ ಮಿಗತೆ (ಸರ್ ಪ್ಲಸ್) ಕಾಣುವ ನಿರೀಕ್ಷೆಯಲ್ಲಿದೆ.
3:33 PM
Jan 29, 2021
ಕೃಷಿ ಕಾನೂನಿನಿಂದ ರೈತರಿಗೆ ಅನುಕೂಲ
ಹೊಸ ಕೃಷಿ ಕಾನೂನುಗಳು ರಚಿಸಿರುವುದು ಮತ್ತು ರೂಪುಗೊಂಡಿರುವುದು ಪ್ರಾಥಮಿಕವಾಗಿ ಸಣ್ಣ ಮತ್ತು ಕನಿಷ್ಠ ಪ್ರಮಾಣದ ಭೂಮಿ ಇರುವ ರೈತರಿಗೆ. ಇಂಥ ರೈತರೇ ಶೇಕಡಾ ಎಂಬತ್ತೈದರಷ್ಟಿದ್ದಾರೆ. ಇದರಿಂದ ರೈತರ ಸಬಲೀಕರಣ ಆಗುತ್ತದೆ.
3:29 PM
Jan 29, 2021
ಗ್ರಾಸ್ ವ್ಯಾಲ್ಯೂ ಆಡೆಡ್ ಬೆಳವಣಿಗೆ -7.2%
ಗ್ರಾಸ್ ವ್ಯಾಲ್ಯೂ ಆಡೆಡ್ (GVA) ಬೆಳವಣಿಗೆ 2020- 21ರಲ್ಲಿ -7.2% ಇದೆ. 2019- 20ರಲ್ಲಿ ಇದು 3.9% ಇತ್ತು.
3:26 PM
Jan 29, 2021
ಆವಿಷ್ಕಾರದ ಹಲವು ಮಾಪನದಲ್ಲಿ ಹಿಂದುಳಿದಿದೆ
ಅಭಿವೃದ್ಧಿ ಪ್ರಮಾಣಕ್ಕೆ ಹೋಲಿಸಿದರೆ ಆವಿಷ್ಕಾರದ ವಿಚಾರದಲ್ಲಿ ಭಾರತವು ನಿರೀಕ್ಷೆಗೆ ಮೀರಿದ ಪ್ರದರ್ಶನ ನೀಡಿದೆ. ಆದರೆ ಯುಎಸ್ ಡಾಲರ್ ಲೆಕ್ಕಾಚಾರದ ಜಿಡಿಪಿಯ ಅಳತೆಗೋಲಿನಲ್ಲಿ ಟಾಪ್ ಟೆನ್ ಸ್ಥಾನದಲ್ಲಿ ಇರುವ ಇತರ ದೊಡ್ಡ ಆರ್ಥಿಕತೆಗಳಿಗಿಂತ ಆವಿಷ್ಕಾರದ ಹಲವು ಮಾಪನದಲ್ಲಿ ಹಿಂದುಳಿದಿದೆ: ಆರ್ಥಿಕ ಸಮೀಕ್ಷೆ
3:19 PM
Jan 29, 2021
ಸವರನ್ ಕ್ರೆಡಿಟ್ ರೇಟಿಂಗ್ ಭಾರತದ ಮೂಲ ಅಂಶ ಪ್ರದರ್ಶಿಸಿಲ್ಲ
"ಇತಿಹಾಸದಲ್ಲಿ ಎಂದಿಗೂ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ಹೂಡಿಕೆ ಗ್ರೇಡ್ (BBB-) ಸವರನ್ ಕ್ರೆಡಿಟ್ ರೇಟಿಂಗ್ ಇಷ್ಟು ತಳ ಮಟ್ಟ ತಲುಪಿಲ್ಲ. ಭಾರತದ ಆರ್ಥಿಕ ನಿಯಮವು ಇಂಥ ಶಬ್ದಗಳಿಗೆ ಕಿವಿಗೊಡಬೇಕಿಲ್ಲ. ಭಾರತದ ಮೂಲತತ್ವದ ಉತ್ತಮವಾಗಿದೆ. ಆದರೆ ಭಾರತದ ವಿದೇಶೀ ವಿನಿಮಯವು ಹೆಚ್ಚುವರಿಯಾಗಿ 2.8 ಸ್ಟ್ಯಾಂಡರ್ಡ್ ಡೀವಿಯೇಷನ್ ನಕಾರಾತ್ಮಕ ಈವೆಂಟ್ ಕವರ್ ಮಾಡಬಹುದು. ಸವರನ್ ಕ್ರೆಡಿಟ್ ರೇಟಿಂಗ್ ಪದ್ಧತಿ ಹೆಚ್ಚು ಪಾರದರ್ಶಕವಾಗಿರಬೇಕು, ವ್ಯಕ್ತಿನಿಷ್ಠವಾಗಿ ಇರಬಾರದು," ಆರ್ಥಿಕ ಸಮೀಕ್ಷೆ 2021.
2:23 PM
Jan 29, 2021
ಭಾರತದ ಜಿಡಿಪಿ 11 ಪರ್ಸೆಂಟ್ ನಂತೆ ಬೆಳೆಯಲಿದೆ
ಆರ್ಥಿಕ ಸಮೀಕ್ಷೆ 2021: ಹಣಕಾಸು ವರ್ಷ 2021- 22ರಲ್ಲಿ ಭಾರತದ ಜಿಡಿಪಿ 11 ಪರ್ಸೆಂಟ್ ನಂತೆ ಬೆಳೆಯಲಿದೆ ಎಂದ ನಿರ್ಮಲಾ ಸೀತಾರಾಮನ್.
12:44 PM
Jan 29, 2021
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ರಿಂದ ಇಂದು ಆರ್ಥಿಕ ಸಮೀಕ್ಷೆ ಮಂಡನೆ ಆಗಲಿದೆ
12:43 PM
Jan 29, 2021
ಕೋವಿಡ್ 19 ಬಿಕ್ಕಟ್ಟಿನಲ್ಲೂ ಜಾಗತಿಕ ಹೂಡಿಕೆದಾರರನ್ನು ಸೆಳೆಯುವಲ್ಲಿ ಭಾರತ ಯಶಸ್ವಿ ಆಗಿದೆ: ಕೋವಿಂದ್
12:43 PM
Jan 29, 2021
ಭಾರತದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ: ರಾಷ್ಟ್ರಪತಿ ರಾಮನಾಥ್ ಕೋವಿಂದ್